ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಈಗಾಗಲೇ ಪ್ರಜ್ವಲ್ ಗೆ ರೆಡ್ ಕಾರ್ನರ್ ನೋಟಿಸ್ ನೀಡಿದ್ದು ಇದೀಗ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ನೀಡಲು ಎಸ್ಐಟಿ ಸಿಬಿಐಗೆ ಮನವಿ ಮಾಡಿದೆ. ನ್ಯೂ ಕಾರ್ನರ್ ನೋಟೀಸಿಗೆ ಎಸ್ಐಟಿ ಇದೀಗ ಸಿಬಿಐಗೆ ಮನವಿ ಮಾಡಿದ್ದು ಇಂಟರ್ಫೋಲ್ ಮೂಲಕ ಮನವಿ ಮಾಡಿದೆ.
ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದು ಅಲ್ಲಿ ಅವರ ಚಲನವಲನ ಅವರ ಚಟುವಟಿಕೆ ಹಾಗೂ ಅಲ್ಲಿ ಏನು ಮಾಡುತ್ತಿದ್ದಾನೆ ಎಂಬುದರ ಕುರಿತಂತೆ ಮಾಹಿತಿ ಕಲೆ ಹಾಕಲು ಎಸ್ಐಟಿ ನ್ಯೂ ಕಾರ್ನರ್ ನೋಟಿಸ್ ಗೆ ಜಾರಿ ಮಾಡಲು ಎಸ್ಐಟಿ ಸಿಬಿಐ ಮೊರೆ ಹೋಗಿದೆ. ಇಂಟರ್ಫೋಲ್ ನಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲು ತಯಾರಿ ನಡೆಸಿದ್ದು ಬ್ಲೂ ಕಾರ್ನರ್ ನೋಟಿಸ್ ಮೂಲಕ ಪ್ರಜ್ವಲ್ ರೇವಣ್ಣ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
ಏನಿದು ‘ಬ್ಲೂ ಕಾರ್ನರ್’ ನೋಟಿಸ್?
ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ಸದ್ಯಕ್ಕೆ ಅವರ ಡಿಪ್ಲೋಮೆಟಿಕ್ ಪಾಸ್ ಪೋರ್ಟ್ ರದ್ದು ಆಗದೆ ಇರುವ ಕಾರಣ ಸುಮಾರು 13 ದೇಶಗಳಿಗೆ ಪ್ರಯಾಣಿಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಯಾವ ಉದ್ದೇಶಗಳಿಗೆ ವಿದೇಶಕ್ಕೆ ತೆರಳಿರಬಹುದು ಎನ್ನುವುದರ ಕುರಿತು ಮಾಹಿತಿ ಸಂಗ್ರಹಿಸಲು ಈ ಒಂದು ಬ್ಲೂ ಕಾರ್ನರ್ ನೋಟಿಸ್ ಸಹಾಯಕವಾಗಲಿದೆ.
ಸಿಬಿಐ ಗೆ ನೇರವಾಗಿ ಎಸ್ಐಟಿ ಅಧಿಕಾರಿಗಳು ಸಿಬಿಐಗೆ ಬ್ಲೂ ಕಾರ್ನರ್ ನೋಟಿಸ್ ಗೆ ಮನವಿ ಮಾಡಿದ್ದಾರೆ. ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ ಆದರೆ ಆತ ಎಲ್ಲಿದ್ದಾನೆ? ಆತನ ಲೊಕೇಶನ್ ಏನು? ಆತನ ಚಲನವಲನಗಳು ಏನು?ಆತನ ಸದ್ಯ ಚಟುವಟಿಕೆಗಳೇನು? ಯಾವ ದೇಶದಲ್ಲಿದ್ದಾನೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿ ಎಸ್ಐಟಿಗೆ ಮಾಹಿತಿ ಸಿಗುತ್ತದೆ.
ನಂತರ ಆತನನ್ನು ಪತ್ತೆ ಹಚ್ಚಿ ಭಾರತಕ್ಕೆ ಕರೆತರುವ ಒಂದು ಕ್ರಮಕ್ಕೆ SIT ಅಧಿಕಾರಿಗಳು ಮುಂದಾಗಿದ್ದಾರೆ. ಹಾಗಾಗಿ ಇದೀಗ ಬ್ಲೂ ಕಾನರ್ ನೋಟಿಸ್ ಜಾರಿ ಮಾಡುವಂತೆ ಸಿಬಿಐಗೆ ಎಸ್ಐಟಿ ಮನವಿ ಮಾಡಿದೆ ಎಂದು ತಿಳಿದು ಬಂದಿದೆ.