ಬಾಗಲಕೋಟೆ : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಸಚಿವ ಕೆ ಎನ್ ರಾಜಣ್ಣ ಸ್ಪೋಟ ವಾದಂತಹ ಆರೋಪ ಮಾಡಿದ್ದು 6 ತಿಂಗಳ ಹಿಂದೆಯೇ ಸಂಸದ ಪ್ರಜ್ವಲ್ ರೇವಣ್ಣ ಅವರು ಸ್ಟೇ ತೆಗೆದುಕೊಂಡಿದ್ದರು ಎಂದು ಸ್ಫೋಟಕ ವಾದಂತಹ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ಘಟನೆ ನಿನ್ನೆ ಮೊನ್ನೆಯದ್ದಲ್ಲ. ಆರು ತಿಂಗಳ ಮುಂಚೆ ಪ್ರಜ್ವಲ್ ಸ್ಟೇ ತೆಗೆದುಕೊಂಡಿದ್ದಾರೆ. ಪ್ರಜ್ವಲ್ ಸ್ಟೇ ತೆಗೆದುಕೊಂಡಾಗ ನನಗೆ ಅನುಮಾನ ಇತ್ತು. ಸುಮ್ಮನೆ ಯಾರು ಅಷ್ಟೇ ತೆಗೆದುಕೊಳ್ಳುವುದಿಲ್ಲ ಎಂದು ಅವರು ತಿಳಿಸಿದರು.
ಅಸಹಾಯಕ ಮಹಿಳೆಯರ ದುರ್ಬಳಕೆ ಖಂಡನೀಯ. ಮನೆ ಕೆಲಸದ ಮಹಿಳೆಯನ್ನು ಇವರು ಬಳಸಿಕೊಂಡಿದ್ದಾರೆ. ವಿಡಿಯೋ ಮಾಡಿಕೊಂಡಿದ್ದು ಒಂದು ಭಯಾನಕ ದುಷ್ಕೃತ್ಯವಾಗಿದೆ. ರಾಜ್ಯ ರಾಜಕೀಯದಲ್ಲಿ ಇದೊಂದು ಕಪ್ಪು ಚುಕ್ಕೆಯಾಗಿದೆ ಎಂದು ಅವರು ತಿಳಿಸಿದರು.
ರಾಜ್ಯಕ್ಕೆ ತೆರಿಗೆ ವಿಚಾರದಲ್ಲಿ ಕೇಂದ್ರ ಮಲತಾಯಿ ಧೋರಣೆ ಅನುಸರಿಸಿದೆ. ಹಾಗಾಗಿ ಬರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೆವು. ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಕ್ಕೆ ಪರಿಹಾರ ಸಿಕ್ಕಿತು. ವರ್ಷಕ್ಕೆ 4 ಲಕ್ಷ ಕೋಟಿಗು ಹೆಚ್ಚು ತೆರಿಗೆ ಪಾವತಿಸುತ್ತೇವೆ. ಆದರೆ ನಮಗೆ ಕೇವಲ ಐವತ್ತು ಸಾವಿರ ಕೋಟಿಯಷ್ಟು ಮಾತ್ರ ಬರುತ್ತೆ. ಇಷ್ಟೆಲ್ಲ ಆದರೂ ರಾಜ್ಯದ ಸಂಸದರು ಮಾತನಾಡುವುದಿಲ್ಲ. ಇದು ದುರಾದೃಷ್ಟಕರ ಸಂಗತಿ ಎಂದು ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.