ಹಾಸನ: ನಾನು ಕಾಂಗ್ರೆಸ್ ನಾಯಕರಿಗೆ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪೆನ್ ಡ್ರೈವ್ ಕೊಟ್ಟಿಲ್ಲ. ನಾನು ಕೊಟ್ಟಿದ್ದು ಕೇವಲ ದೇವರಾಜೇಗೌಡ ಬಳಿ ಮಾತ್ರವೇ ಎಂಬುದಾಗಿ ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಸ್ಪಷ್ಟ ಪಡಿಸಿದ್ದಾರೆ.
ಈ ಬಗ್ಗೆ ಅಜ್ಞಾತ ಸ್ಥಳದಿಂದ ವೀಡಿಯೋ ಬಿಡುಗಡೆ ಮಾಡಿರುವಂತ ಅವರು, ನಾನು ಹದಿನೈದು ವರ್ಷಗಳಿಂದ ಪ್ರಜ್ವಲ್ ರೇವಣ್ಣ ಹಾಗೂ ಅವರ ಫ್ಯಾಮಿಲಿಗೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದು, ನನ್ನ ಜಮೀನು ಬರೆಸಿಕೊಂಡು, ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ರು. ಹಿಂಸೆ ಕೊಟ್ಟು ಹಲ್ಲೆ ಮಾಡಿದ್ರು. ಆ ಕಾರಣಕ್ಕೆ ನಾನು ಅವರ ಮನೆಯಲ್ಲಿ ಕಾರು ಚಾಲಕನ ಕೆಲಸ ಬಿಟ್ಟು ಹೊರ ಬಂದೆ ಎಂಬುದಾಗಿ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಫ್ಯಾಮಿಲಿ ವಿರುದ್ಧ ದೇವರಾಜೇಗೌಡ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ನನಗೆ ದೇವೇಗೌಡಕ ಫ್ಯಾಮಿಲಿಯಿಂದ ಅನ್ಯಾಯವಾಗಿತ್ತು. ಯಾರಿಂದಲೂ ನ್ಯಾಯ ಸಿಗದೇ ಇದ್ದಾಗ, ದೇವರಾಜೇಗೌಡ ಬಳಿ ಹೋಗಿದ್ದೆ ಎಂದರು.
ನನ್ನ ಬಳಿಯಿದ್ದಂತ ಯಾವುದೇ ಅಶ್ಲೀಲ ವೀಡಿಯೋ ರಿಲೀಸ್ ಮಾಡಬಾರದು ಎಂದು ನನ್ನ ವಿರುದ್ಧ ಪ್ರಜ್ವಲ್ ರೇವಣ್ಣ ಕೋರ್ಟ್ ನಿಂದ ಸ್ಟೇ ತಂದಿದ್ದಾರೆ. ಆಗ ನಿನ್ನ ಬಳಿ ಇರೋ ವೀಡಿಯೋ, ಪೋಟೋಸ್ ನಾನು ಯಾರಿಗೂ ತೋರಿಸಲ್ಲ ಕೊಡು ಎಂದು ದೇವರಾಜೇಗೌಡ್ರು ಕೇಳಿದ್ರು. ನಾನು ನಂಬಿಕೆ ಇಟ್ಟು, ನನ್ನ ಬಳಿಯ ವೀಡಿಯೋದ ಒಂದು ಕಾಪಿ ಕೊಟ್ಟೆ. ಆದ್ರೇ ಅವರು ನಾನು ಕೊಟ್ಟ ವೀಡಿಯೋ ರಿಲೀಸ್ ಮಾಡಿದ್ದಾರೆ. ಅದನ್ನ ಅವರು ಸ್ವಾರ್ಥಕ್ಕೆ ಬಳಸಿಕೊಂಡ್ರೇ, ಯಾರಿಗಾದ್ರೂ ಕೊಟ್ಟರೋ ಗೊತ್ತಿಲ್ಲ ಎಂದರು.
ನಾನು ಯಾವುದೇ ಕಾಂಗ್ರೆಸ್ ನಾಯಕರಿಗೆ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪೆನ್ ಡ್ರೈವ್ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷದವರ ಮೇಲೆ ನಂಬಿಕೆ ಇಲ್ಲದೇ ದೇವರಾಜೇಗೌಡ ಅವರ ಹತ್ತಿರ ಕೊಟ್ಟಿದ್ದೆ. ಆದ್ರೇ ಅದರಲ್ಲಿ ಇರೋ ವೀಡಿಯೋ ಯಾರು ಹಂಚಿದ್ರೇ ಗೊತ್ತಿಲ್ಲ. ಈಗ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ. ನಾನು ಕಾಂಗ್ರೆಸ್ ನಾಯಕರಿಗೆ ಕೊಟ್ಟಿಲ್ಲ. ನಾನು ಕೊಡೋದಿದ್ದರೇ ದೇವರಾಜೇಗೌಡರಿಗೂ ಮೊದಲೇ ಅವರ ಬಳಿ ಹೋಗ್ತಿದ್ದೆ. ಇದನ್ನೇ ಇವತ್ತು ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗಿ ಎಲ್ಲಾ ಹೇಳಿಕೆ ನೀಡುತ್ತೇನೆ. ಆ ಬಳಿಕ ಮಾಧ್ಯಮಗಳಇಗೆ ಹೇಳಿಕೀಡುವುದಾಗಿ ತಿಳಿಸಿದ್ದಾರೆ.
ನಾನು ರೇವಣ್ಣ ಮನೆಯಲ್ಲಿ ಏನೆಲ್ಲಾ ನಡೆದಿದೆ ಎಂಬುದನ್ನು ಹದಿನೈದು ವರ್ಷಗಳಿಂದ ನೋಡಿದ್ದೇನೆ. ಆ ಎಲ್ಲವನ್ನೂ ಎಸ್ಐಟಿ ಅಧಿಕಾರಿಗಳ ಮುಂದೆ ಹೇಳುತ್ತೇನ. ರೇವಣ್ಣ ಫ್ಯಾಮಿಲಿಯಿಂದ ಯಾರಿಗೆ ಅನ್ಯಾಯ ಆಗಿದ್ಯೋ ಧೈರ್ಯವಾಗಿ ಎಲ್ಲರೂ ಮುಂದೆ ಬನ್ನಿ ಎಂಬುದಾಗಿ ಕಾರು ಚಾಲಕ ಕಾರ್ತಿಕ್ ವೀಡಿಯೋದಲ್ಲಿ ಮನವಿ ಮಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಕಲಬುರಗಿಗೆ ಬರಲು ಚಿಂಚೋಳಿ ಎಂಪಿ ಅನುಮತಿ ಬೇಕಿಲ್ಲ: ಪ್ರಿಯಾಂಕ್ ಖರ್ಗೆ ತಿರುಗೇಟು
ಪ್ರಜ್ವಲ್ ಪ್ರಕರಣ; ಪ್ರಧಾನಿ ಮೋದಿ, ದೇವೇಗೌಡರ ಕುಟುಂಬವೇ ನೇರ ಹೊಣೆ: ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ