ಕಲಬುರ್ಗಿ : ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಆಹಾರ ಪೂರೈಕೆ ಹಾಗೂ ಕಡಿಮೆ ಗುಣಮಟ್ಟದ ಮೊಟ್ಟೆ ವಿತರಣೆ ಮಾಡುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅಂಗನವಾಡಿ ಕೇಂದ್ರಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ಪ್ರತಿ ಹಳ್ಳಿಗೂ ನೀರು ಸರಬರಾಜು: ಯಶಸ್ವಿಗೆ 151 ತಾಂತ್ರಿಕ ಬೆಂಬಲ ಸಿಬ್ಬಂದಿ ನೇಮಕ- ಪ್ರಿಯಾಂಕ್ ಖರ್ಗೆ
ಕಲಬುರಗಿಯ ಹನುಮಾನ ನಗರದ ತಾಂಡಾ ಅಂಗನವಾಡಿಯಲ್ಲಿ ಪರೀಶಿಲನೆ ವೇಳೆ ಮೊಟ್ಟೆ ತೂಕದಲ್ಲಿ ಬಾರಿ ವ್ಯತ್ಯಾಸ ಬಂದಿದ್ದು, ನಿಗದಿತ ತೂಕಕ್ಕಿಂತ ಕಡಿಮೆಯಿದೆ. ಕನಿಷ್ಠ 50 ಗ್ರಾಂ ಮೊಟ್ಟೆ ತೂಕ ಇರಬೇಕು ಎಂಬ ನಿಯಮವಿದೆ. ಆದ್ರೆ, ಅಂಗನವಾಡಿಗಳಲ್ಲಿ ಸಿಕ್ಕ ಮೊಟ್ಟೆಯ ತೂಕ 23-30 ಗ್ರಾಂ ಮಾತ್ರ ಇದೆ.
ಇನ್ನು ಆಹಾರ ಪೊಟ್ಟಣಗಳಲ್ಲಿಯೂ ಕಳಪೆ ಆಹಾರ ಪೂರೈಕೆ ಪತ್ತೆಯಾಗಿದೆ. ಇದನ್ನು ಕಂಡು ಖುದ್ದು ಲೋಕಾಯುಕ್ತ ಎಸ್ಪಿ ಹೌಹಾರಿದ್ದಾರೆ. ಇಂತಹ ಆಹಾರಗಳನ್ನು ಅಂಗನವಾಡಿ ಮಕ್ಕಳು ಮತ್ತು ಗರ್ಭಿಣಿಯರಿಗೆ ನೀಡಿ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಸೋಮಣ್ಣನ ಬೈಗುಳಕ್ಕೆ ಹೆದರಿ ಯಡಿಯೂರಪ್ಪ ನನ್ನ ಬಲಿಕೊಟ್ರು : ಬೇಸರ ವ್ಯಕ್ತಪಡಿಸಿದ ಜೆ.ಸಿ ಮಾಧುಸ್ವಾಮಿ
ಲೋಕಾಯುಕ್ತ ಎಸ್ಪಿ ಜಾನ್ ಆಂಟೋನಿ ನೇತೃತ್ವದಲ್ಲಿ ಇಂದು(ಮಾ.15) ಅಧಿಕಾರಿಗಳು ದಾಳಿ ನಡೆಸಿದ್ದರು. ಚಿಕ್ಕ ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲಿಯೂ ಭಾರಿ ಗೋಲ್ ಮಾಲ್ ಆಗಿದ್ದು, ಮೊಟ್ಟೆ ತೂಕ ಕಡಿಮೆ ಜೊತೆಗೆ ಮೊಟ್ಟೆಗಳು ಕೂಡ ಕೊಳೆತ ಹೋಗಿವೆ ಎಂದು ದಾಳಿಯ ವೇಳೆ ಕಂಡು ಬಂದಿದೆ.