ಬೆಂಗಳೂರು : ಪಥ ಸಂಚಲನ ಮಾಡೋಕೆ ಆರ್ ಎಸ್ ಎಸ್ ಗೆ ಅಷ್ಟು ಅರ್ಜೆಂಟ್ ಏನಿತ್ತು? ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಶಿಕ್ಷಣ ಇಲಾಖೆ ಅನುಮತಿ ಕೊಟ್ಟಿರಲಿಲ್ಲ. ಶಿಕ್ಷಣ ಇಲಾಖೆ ಮುಖ್ಯಮಂತ್ರಿಗಳ ಅಧೀನದಲ್ಲಿಯೇ ಇರುವುದು ಜಗದೀಶ ಶೆಟ್ಟರ್ ಅಚಾನಕ್ಕಾಗಿ ಸಿಎಂ ಆಗಿದ್ದಕ್ಕೆ ಮರೆತು ಹೋದರು ಅಂತ ಅನಿಸುತ್ತದೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದರು.
ನಮ್ಮ ಪಕ್ಷದಿಂದಲೂ ಎಂಎಲ್ಸಿ ಆಗಿದ್ದರು ಈಗ ಬಿಜೆಪಿಗೆ ಹೋದರು ಆರ್ ಎಸ್ ಎಸ್ ನವರ ಭಾಷಣಕ್ಕೆ ಬಡಮಕ್ಕಳು ಬಲಿಯಾಗುತ್ತಿದ್ದಾರೆ. ಕೇಸ್ ಆದಾಗ ಯಾವೊಬ್ಬ ಬಿಜೆಪಿ ನಾಯಕರು ಜಾಮೀನು ಕೊಡಿಸಲ್ಲ ಬೆಂಗಳೂರಿಗೆ ಬಂದಾಗ ಬಿಜೆಪಿ ನಾಯಕರು ಕರೆದು ತಿಂಡಿ ಕೊಡಿಸಲ್ಲ. ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದರು.
RSS ಬಗ್ಗೆ ಜೆಡಿಎಸ್ ನಿಲುವು ಏನು ಅಂತ ತಿಳಿಸಬೇಕು. ಎಚ್ ಡಿ ಕುಮಾರಸ್ವಾಮಿಗೆ ಆರ್ಎಸ್ಎಸ್ ಬಗ್ಗೆ ಇರುವ ನೀಲವು ಏನು ಅಂತ ಅವರು ತಿಳಿಸಬೇಕು ಆರ್ಎಸ್ಎಸ್ ಬೈದು ಸಂಪಾದಕೀಯ ಕಾಲಂ ಬರೆದಿದ್ದ ನಿಮ್ಮ ನಿಲುವೇನು ಜೆಡಿಎಸ್ ನ ಎಸ್ ಅಂದರೆ ಜಾತ್ಯಾತೀತವೋ ಕೇಸರಿಯೋ ಹೇಳಬೇಕು ಎಂದು ಪ್ರದೀಪ್ ಈಶ್ವರ ಪ್ರಶ್ನೆ ಮಾಡಿದರು.