ಧಾರವಾಡ: ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದ ಬಹಳ ವರ್ಷಗಳಿಂದ ನಡೆದು ಬಂದಿದೆ.ಈ ಬಗ್ಗೆ ಬೇರೆ ಬೇರೆ ಕಮಿಷನ್ ಹಾಗೂ ವರದಿಗಳಾಗಿವೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
BIGG NEWS: ಹಿಂದೂಗಳ ನಕಲಿ ಐಡಿ ಕಾರ್ಡ್ ಬಳಸಿಕೊಂಡು ವ್ಯಾಪಾರ ನಡೆಸಿದ ಅನ್ಯಕೋಮಿನ ವ್ಯಾಪಾರಸ್ಥರು
ನಗರದಲ್ಲಿ ಮಾತನಾಡಿದ ಅವರು, ಮಹಾಜನ್ ಎಂಬ ವರದಿ ಕೂಡಾ ಕೊಟ್ಟಾಗಿದೆ. ಎರಡು ರಾಜ್ಯಗಳು ಆ ಸಂದರ್ಭದಲ್ಲಿ ಮಹಾಜನ್ ವರದಿ ಒಪ್ಪಿಕೊಂಡಿವೆ. ವರದಿಯಂತೆ ಬೆಳಗಾವಿ ಕರ್ನಾಟಕದಲ್ಲೇ ಉಳಿಯಲಿದೆ, ಮಹಾಜನ್ ವರದಿ ಫೈನಲ್ ಆಗಿದೆ. ಮಹಾರಾಷ್ಟ್ರದಲ್ಲಿ ಬೇರೆ ವಿಚಾರ ಬಂದಾಗ ಮಹಾರಾಷ್ಟ್ರ ರಾಜರಣಿಗಳು ಹಾಗೂ ನಮ್ಮಲ್ಲಿ ಎಂಇಎಸ್ ನವರು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೀಗೆ ಮಾಡುತ್ತಿವೆ ಎಂದರು.
BIGG NEWS: ಹಿಂದೂಗಳ ನಕಲಿ ಐಡಿ ಕಾರ್ಡ್ ಬಳಸಿಕೊಂಡು ವ್ಯಾಪಾರ ನಡೆಸಿದ ಅನ್ಯಕೋಮಿನ ವ್ಯಾಪಾರಸ್ಥರು
ತಾವು ಬೆಳೆಯಲು ಈ ರೀತಿ ಕುತಂತ್ರ ಮಾಡುವ ಮೂಲಕ ಮಹಾರಾಷ್ಟ್ರ ರಾಜ್ಯದ ಮುಖಾಂತರ ಗಡಿ ಬಗ್ಗೆ ಮಾತನಾಡಿಸಿ ಮರಾಠಿ ಹಾಗೂ ಕನ್ನಡಿಗರ ಮಧ್ಯದಲ್ಲಿ ವಿಘಟನೆ ಮಾಡುತ್ತಿದ್ದಾರೆ. ಈಗ ಮರಾಠಿಗರು ಹಾಗೂ ಕನ್ನಡಿಗರು ಅರ್ಥ ಮಾಡಿಕೊಂಡಿದ್ದಾರೆ, ಸೌಹಾರ್ದ ವಾತಾವರಣ ಇದೆ. ಪದೇ ಪದೇ ಕೆದಕುವ ಕೆಲಸ ಮಾಡಬೇಕಿಲ್ಲ, ಈ ಬಾರಿ ಮಹಾರಾಷ್ಟ್ರದ ರಾಜಕಾರಣಿಗಳೇ ಕೆದಕುವ ಕೆಲಸ ಮಾಡಿದರು.