ಮಂಡ್ಯ : ಕೆ.ಆರ್. ಪೇಟೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ” ಇನ್ಮುಂದೆ ರಾಜಕಾರಣಿಗಳನ್ನೂ ಕನ್ನಡ ಕಾರ್ಯಕ್ರಮಗಳಿಗೆ ಕರೆಯಲ್ಲ” ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಕಿಡಿಕಾರಿದ ಘಟನೆ ಬೆಳಕಿಗೆ ಬಂದಿದೆ
ಕೆ.ಆರ್. ಪೇಟೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಲಿಬಾಬ ಎಂದಿದ್ದಕ್ಕೆ ಬಿಜೆಪಿ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಜೆಡಿಎಸ್ ಮುಖಂಡ ಸಂತೋಷ್ ನಡುವೆ ವೇದಿಕೆಯಲ್ಲೇ ಜಗಳ ನಡೆಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಮಾತನಾಡಿದ ಕರವೇ ಅಧ್ಯಕ್ಷ, ಇನ್ಮೇಲೆ ಯಾವ ರಾಜಕಾರಣಿಗಳನ್ನೂ ಕನ್ನಡ ಕಾರ್ಯಕ್ರಮಗಳಿಗೆ ಕರೆಯಲ್ಲ. ನಾನು ನಮ್ಮ ಕಾರ್ಯಕರ್ತರಿಗೆ ರಾಜಕಾರಣಿಗಳನ್ನ ದೂರವಿಡಲು ಹೇಳಿದ್ದೇನೆ ಎಂದು ಹೊಸ ಕಿಡಿ ಹೊತ್ತಿಸಿದ್ದಾರೆ.
ಕೆ.ಆರ್. ಪೇಟೆಯಲ್ಲಿ ನಡೆಯುತ್ತಿದ್ದದ್ದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ. ಅದು ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ. ಎಲ್ಲಾ ಪಕ್ಷದ ರಾಜಕಾರಣಿಗಳು ಕಾರ್ಯಕ್ರಮಕ್ಕೆ ಬಂದಿದ್ದರು. ಜೆಡಿಎಸ್ ಮುಖಂಡ ಸಂತೋಷ್ ರಾಜಕೀಯ ಮಾತಾಡಲು ಶುರು ಮಾಡಿದ. ಕರವೇ ಕಾರ್ಯಕ್ರಮದಲ್ಲಿ ಕನ್ನಡ, ಕರ್ನಾಟಕ ಪರ ಮಾತನಾಡಿಲ್ಲ. ಅದನ್ನ ಬಿಟ್ಟು ರಾಜಕಾರಣ ಮಾಡಲು ಶುರು ಮಾಡಿದ್ರು. ನಂತರ ನಾನು ಮೈಕ್ ತೆಗೊಂಡು ಸಚಿವ ನಾರಾಯಣಗೌಡ ಹಾಗೂ ಸಂತೋಷ್ ಇಬ್ಬರನ್ನೂ ಸುಮ್ಮನಾಗಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನೀವು ರಾಜಕೀಯ ಮಾಡಬೇಕಿದ್ರೆ ನಿಮ್ಮ ವೇದಿಕೆಗಳಲ್ಲಿ ಮಾಡಿ. ನಾಡು, ನುಡಿಗೆ ಎಲ್ಲಾ ರಾಜಕೀಯ ಪಕ್ಷಗಳ ಸಾಧನೆ ಏನ ಮಾಡಿಲ್ಲ.ಕನ್ನಡದ ಕಾರ್ಯಕ್ರಮದಲ್ಲಿ ರಾಜಕಾರಣ ಮಾಡಬಾರದು ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ