ಬೆಂಗಳೂರು: ದೈವ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಹೈಗ್ರೌಂಡ್ ಠಾಣೆಯ ಪೊಲೀಸರು ಮತ್ತೊಂದು ನೋಟಿಸ್ ನೀಡಿದ್ದಾರೆ.
ರಿಷಬ್ ಶೆಟ್ಟಿ ನಟನೆಯ ಕಾಂತಾರ-2 ಸಿನಿಮಾದ ವಿಚಾರವಾಗಿ ಗೋವಾದಲ್ಲಿ ನಡೆದಂತ ಫಿಲ್ಮ್ ಫೇರ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮಾತನಾಡಿದ್ದರು. ದೈವದ ವಿಚಾರವಾಗಿ ಅವಹನೇಳನಕಾರಿಯಾಗಿ ಮಾತನಾಡಿದ್ದರ ಸಂಬಂಧ ಅವರ ವಿರುದ್ಧ ದೂರು, ಆ ಬಳಿಕ ಎಫ್ಐಆರ್ ಕೂಡ ದಾಖಲಾಗಿತ್ತು.
ವಕೀಲ ಪ್ರಶಾಂತ್ ಎಂಬುವರು ನೀಡಿದಂತ ದೂರಿನ ಆಧಾರದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸಲು ನೋಟಿಸ್ ನೀಡಿದ್ದಾರೆ. ಈ ಹಿಂದೆ ಒಂದು ಬಾರಿ ವಾಟ್ಸ್ ಆಪ್ ಮೂಲಕ ನೋಟಿಸ್ ನೀಡಿದ್ದರೂ ಪ್ರತ್ಯುತ್ತರ ನೀಡರಲಿಲ್ಲ. ಹೀಗಾಗಿ ಮತ್ತೊಮ್ಮೆ ಮುಂಬೈನಲ್ಲಿರುವಂತ ಬಾಲಿವುಡ್ ನಟ ರಣವೀರ್ ಸಿಂಗ್ ಅವರ ನಿವಾಸಕ್ಕೆ ಪೊಲೀಸರು ಮತ್ತೊಮ್ಮೆ ನೋಟಿಸ್ ನೀಡಿದ್ದಾರೆ. ಯಾವುದೇ ಪ್ರತ್ಯುತ್ತರ ನೀಡಿಲ್ಲ ಎನ್ನಲಾಗಿದೆ.
ನಕಲಿ ಬ್ಯಾಂಕ್ ಖಾತೆ ತೆರೆದು ಸೈಬರ್ ವಂಚಕರಿಗೆ ಸಹಕರಿಸಿದ ಎಂಜಿನಿಯರ್ ವಿದ್ಯಾರ್ಥಿ ಸೇರಿ ಇಬ್ಬರು ಅರೆಸ್ಟ್








