ಬೆಂಗಳೂರು: ನಗರದ ನಡು ರಸ್ತೆಯಲ್ಲಿದ್ದಂತ ಚರಂಡಿಯಿಂದ ಏಕಾಏಕಿ ಮೇಲೆದ್ದು ಬಂದಿದ್ದಂತ ವ್ಯಕ್ತಿಯೊಬ್ಬ, ಇನ್ನೂ 30 ಜನ ಇದ್ದಾರೆ ಎಂಬುದಾಗಿ ಹೇಳಿದ್ದನು. ಈ ಹಿನ್ನಲೆಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೆಲ ಕಾಲ ಚರಂಡಿಯನ್ನೆಲ್ಲಾ ಹುಡುಕಾಡಿ, ಹೈರಾಣಾಗಿರೋ ಘಟನೆ ಶನಿವಾರ ನಡೆದಿದೆ.
ಬೆಂಗಳೂರಿನ ಯಶವಂತಪುರದ ಎಂಇಐ ಸಿಗ್ನಲ್ ಬಳಿಯಲ್ಲಿ, ನಿನ್ನೆ ಬೆಳಿಕ್ಕೆ 10.30ರ ಸುಮಾರಿಗೆ ವ್ಯಕ್ತಿಯೊಬ್ಬ ಏಕಾಏಕಿ ಚರಂಡಿಯಿಂದ ಮೇಲೆ ಬಂದಿದ್ದಾನೆ. ಇದನ್ನು ಗಮನಿಸಿದಂತ ಸ್ಥಳೀಯರು, ಆತನನ್ನು ಪ್ರಶ್ನಿಸಿದಾಗ ನಾನು ಶ್ರೀರಾಮಪುರದಿಂದ ಇಲ್ಲಿಗೆ ಚರಂಡಿಯೊಳಗೆ ಬಂದಿದ್ದೇನೆ. ಇನ್ನೂ 30 ಜನರು ಚರಂಡಿ ಒಳಗೆ ಇದ್ದಾರೆ ಎಂಬುದಾಗಿ ಹೇಳಿದ್ದಾನೆ.
ವ್ಯಕ್ತಿ ಹೇಳಿದಂತ ಮಾತನಿಂದ ಬೆಚ್ಚಿದ ಸ್ಥಳೀಯರು, ಚರಂಡಿಯೊಳಗೆ ಯಾರೋ ಸಿಲುಕಿರಬೇಕು ಎಂದು ತುರ್ತು ಸಹಾಯವಾಣಿ ಸಂಖ್ಯೆ 112ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಸುಮಾರು ಒಂದು ತಾಸು ಚರಂಡಿಯನ್ನು ಪರಿಶೀಲಿಸಿದೆ. ಆದ್ರೇ ಚರಂಡಿಯಲ್ಲಿ ಯಾರೂ ಪತ್ತೆಯಾಗಿಲ್ಲ.
ಈ ಬಳಿಕ ಚರಂಡಿಯಿಂದ ಮೇಲೆದ್ದು ಬಂದಂತ ವ್ಯಕ್ತಿಯನ್ನು ಸ್ನಾನ ಮಾಡಿಸಿ, ತಿಂಡಿಕೊಟ್ಟು ಸಮಾಧಾನದಿಂದ ಕೇಳಿದಾಗ ತಾನು ರಾಕೆಟ್ ನಲ್ಲಿ ಇಲ್ಲಿಗೆ ಬಂದೆ ಎಂದಿದ್ದಾನೆ. ಆಗ ಆತ ಮಾನಸಿಕ ಅಸ್ವಸ್ಥನಂತೆ ಕಂಡ ಕಾರಣ, ಆರ್ ಎಂ ಸಿ ಯಾರ್ಡ್ ಠಾಣೆ ಪೊಲೀಸರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ವಾಟ್ಸಾಪ್, ಕ್ಯೂ ಆರ್ ಕೋಡ್ ಮೂಲಕ ಒಮ್ಮೆಗೆ ಟಿಕೆಟ್ ಖರೀದಿಗೆ ಅವಕಾಶ