ಕಲಬುರ್ಗಿ: ನಗರದಲ್ಲಿ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದಂತ ಮೊಬೈಲ್ ಕಳವು ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬರೋಬ್ಬರಿ 200 ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಂತ ಕಲಬುರ್ಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್ ಡಿ ಶರಣಪ್ಪ ಅವರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸಿಇಐಆರ್ ಪೋರ್ಟಲ್ ಮೂಲಕ 9 ತಿಂಗಳಲ್ಲಿ 672 ಮೊಬೈಲ್ ಕಳವು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಪೊಲೀಸರು ಕಾರ್ಯಾಚರಣೆ ನಡೆಸಿ 200 ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದಾರೆ ಎಂದರು.
ಪತ್ತೆಯಾದಂತ 200 ಮೊಬೈಲ್ ಗಳನ್ನು ಸಂಬಂಧಿಸಿದಂತ ಮಾಲೀಕರಿಗೆ ತಲುಪಿಸಲಾಗುತ್ತದೆ. ಇವುಗಳಲ್ಲಿ ಕಳ್ಳತನವಾಗಿದ್ದ ಹಾಗೂ ಕಳೆದು ಹೋಗಿದ್ದಂತ ಮೊಬೈಲ್ ಕೂಡ ಇದ್ದಾವೆ ಎಂದು ತಿಳಿಸಿದರು.
ಮೊಬೈಲ್ ಕಳೆದುಕೊಂಡವರು, ಕಳುವಾದವರು ತಪ್ಪದೇ ಸಿಇಐಆರ್ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಿ. ಆಗ ಆ ಮೊಬೈಲ್ ಮಾರಾಟವಾಗಿ, ಬಳಕೆಯಾದಾಗ ಪೊಲೀಸರಿಗೆ ಮಾಹಿತಿ ಸಿಗಲಿದೆ. ಆನಂತ್ರ ಅಂತಹ ಮೊಬೈಲ್ ಗಳನ್ನು ಜಪ್ತಿ ಮಾಡಿ, ಮಾಲೀಕರಿಗೆ ಹಿಂದಿರುಗಿಸುವಂತ ಕೆಲಸ ಮಾಡಲಾಗುತ್ತದೆ ಎಂಬುದಾಗಿ ಮನವಿ ಮಾಡಿದರು.
ಚೆನ್ನಮ್ಮನಂತ ವೀರ ವನಿತೆಯನ್ನ ಪಡೆದಿದ್ದು ಕರುನಾಡಿನ ಸುಕೃತ: ಸಚಿವ ಶಿವರಾಜ್ ತಂಗಡಗಿ ಅಭಿಮತ
ಇತಿಹಾಸದಲ್ಲಿ ಮೊದಲ ಬಾರಿಗೆ 80,000 ರೂ.ಗಳನ್ನು ದಾಟಿದ ಚಿನ್ನದ ಬೆಲೆ | Gold Price