ಬೆಂಗಳೂರು : ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಇದೀಗ ಬೆಂಗಳೂರು ನಗರದಾದ್ಯಂತ ಪೊಲೀಸರು ಅಲರ್ಟ್ ಆಗಿದ್ದು, ಮತದಾರರ ಮೇಲೆ ರೌಡಿ ಶೀಟರ್ ಗಳ ಪ್ರಭಾವ ಬೀರಬಾರದೆಂದು ಇಂದು ಬೆಳಿಗ್ಗೆ 5:00ಯಿಂದ 7 ಗಂಟೆಯವರೆಗೆ ಬೆಂಗಳೂರಿನ ಪಶ್ಚಿಮ ವಿಭಾಗದ ಪೊಲೀಸ ಅಧಿಕಾರಿಗಳು ರೌಡಿಶೀಟರ್ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.
BIG UPDATE : ಪಂಜಾಬ್ ಕಳ್ಳಭಟ್ಟಿ ದುರಂತ : ಸಾವಿನ ಸಂಖ್ಯೆ 21ಕ್ಕೆ ಏರಿಕೆ
ಹೀಗಾಗಿ ಇಂದು ಬೆಂಗಳೂರಿನಲ್ಲಿ ರೌಡಿಶೀಟರ್ ಗಳ ಮನೆಗಳ ಮೇಲೆ ಪೊಲೀಸರ ದಾಳಿ ನಡೆಸಲಾಗಿದ್ದು, ಪಶ್ಚಿಮ ವಿಭಾಗದ ಠಾಣಾ ವ್ಯಾಪ್ತಿಯ ರೌಡಿಶೀಟರ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೆ ಕಲಾಸಿಪಾಳ್ಯ, ಕಾಟನ್ ಪೇಟೆ, ಸಿಟಿ ಮಾರ್ಕೆಟ್ ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಬರುವಂತಹ ರೌಡಿಶೀಟರ್ ಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಳಗ್ಗೆ 5:00 ಯಿಂದ ಬೆಳಿಗ್ಗೆ 7:00ವರೆಗೆ ಪೊಲೀಸರಿಂದ ಆಗುವವರ ಮನೆಗಳ ತಪಾಸಣೆ ನಡೆಸಿದ್ದಾರೆ.ಸದ್ಯ ರೌಡಿಗಳ ಕೆಲಸ, ಪೂರ್ವಾಪರ,ಫೋನ್ ನಂಬರ್ ಗಳನ್ನು ಪೊಲೀಸ್ ಅಧಿಕಾರಿಗಳು ವಶಪಡಿಸಿಡ್ಕೊಂಡು ಪರಿಶೀಲನೆ ನಡೆಸಿದ್ದಾರೆ.ಕೆಲವರು ವಾರೆಂಟ್ ಜಾರಿಯಾದ್ರೂ ಕೂಡ ಕೋರ್ಟಿಗೆ ಹಾಜರಾಗಿರಲಿಲ್ಲ.
`ಅವರು ಕೋಟ್ಯಂತರ ಭಾರತೀಯರ ನಂಬಿಕೆಯನ್ನು ಮುರಿದಿದ್ದಾರೆ’ : ಕೇಜ್ರಿವಾಲ್ ಬಂಧನದ ಬಗ್ಗೆ `ಅಣ್ಣಾ ಹಜಾರೆ’ ಪ್ರತಿಕ್ರಿಯೆ
ಹೀಗಾಗಿ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ನೇತೃಪದಲ್ಲಿ ದಾಳಿ ನಡೆಸಲಾಗಿದೆ. ರೌಡಿಗಿಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ ಚುನಾವಣಾ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ರೌಡಿಶೀಟರ್ ಮನೆ ಮೇಲೆ ಪಶ್ಚಿಮ ವಿಭಾಗದ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.