ಹಾವೇರಿ : ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಹ ಘಟನೆ ಯತೀಶ್ಗೆ ಹಾವೇರಿ ಜಿಲ್ಲೆ ಹಾನಗಲ್ನಲ್ಲಿ ನಡೆದಿದ್ದು ಅಲ್ಪಸಂಖ್ಯಾತ ಮಹಿಳೆಯ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹಾವೇರಿ ಜಿಲ್ಲೆಯ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಪರಿಮಳ ಜೈನ್ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಕರಣದ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಂತ್ರಸ್ತಾಗೆ ಸಾಂತ್ವನ ಕೇಂದ್ರದ ಸಿಬ್ಬಂದಿ ಚಿಕಿತ್ಸೆ ಕೊಡಿಸದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ವೈದ್ಯಕೀಯ ಚಿಕಿತ್ಸೆ ಮತ್ತು ಕೌನ್ಸಲಿಂಗ್ ನಡೆಸುವ ಅವಶ್ಯಕತೆ ಇತ್ತು.ಸಂತ್ರಸ್ತೆಯನ್ನು ಆಸ್ಪತ್ರೆಗೆ ಕಳುಹಿಸಲು ನಾನು ಸಿದ್ಧತೆ ಮಾಡಿಕೊಂಡಿದ್ದೆ.ಆದರೆ ಪೊಲೀಸರು ಅವಕಾಶ ನೀಡದೆ ತನಿಖೆಗೆ ಎಂದು ಕರೆದೊಯ್ದಿದ್ದಾರೆ.
ತನಿಖೆಗೆ ಎಂದು ಕರೆದೋಯ್ದು ಸಂತ್ರಸ್ತೆಯನ್ನ ಮನೆಗೆ ಬಿಟ್ಟು ಬಂದಿದ್ದಾರೆ. ಸಂತ್ರಸ್ತಿಗೆ ಆರೋಪಿಗಳು ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಗ್ಯಾಂಗ್ ರೇಪ್ ಆದಾಗ ದಿನೇ ದಿನೇ ಬೇರೆ ರೀತಿಯ ನೋವು ಕಾಣಿಸಿಕೊಳ್ಳುತ್ತೆ. ಸಂತ್ರಸ್ತಗೆ ಕನಿಷ್ಠ ಒಂದು ವಾರದ ಚಿಕಿತ್ಸೆ ಅಗತ್ಯವಿದೆ.ಹಾವೇರಿ ಶಾಂತನ ಕೇಂದ್ರದ ಮುಖ್ಯಸ್ಥೆ ಪರಿಮಳ ಜೈನ್ ಹೇಳಿಕೆ ನೀಡಿದ್ದಾರೆ.