ಗದಗ: ಜಿಲ್ಲೆಯಲ್ಲಿ ಹೃದಯಾಘಾತದಿಂದ ಕರ್ತವ್ಯ ನಿರತನಾಗಿದ್ದಂತ ಪೊಲೀಸ್ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ಅವರ ನಿಧನಕ್ಕೆ ಗದಗ ಜಿಲ್ಲಾ ಪೊಲೀಸ್ ಇಲಾಖೆ ಸಂತಾಪ ಸೂಚಿಸಿದೆ.
ಧಾರವಾಡದ ಕೋರ್ಟ್ ಗೆ ಗದಗದ ಸಶಸ್ತ್ರ ಮೀಸಲು ಪಡೆಯ ವಾಹನ ಚಾಲಕ ಬಸವರಾಜ ವಿಠ್ಠಲಾಪುರ ಅವರು ಕೈದಿ ಬಿಡಲು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ವಾಹನ ಚಾಲನೆ ವೇಳೆಯಲ್ಲಿ ಎದೆನೋವು ಕಾಣಿಸಿಕೊಂಡಿದೆ.
ವಾಹನ ಚಾಲನೆ ವೇಳೆಯಲ್ಲಿ ಎದೆನೋವು ಕಾಣಿಸಿಕೊಂಡ ಪರಿಣಾಮ ರಸ್ತೆ ಬದಿಗೆ ವಾಹನವನ್ನು ಬಸವರಾಜ ನಿಲ್ಲಿಸುತ್ತಿದ್ದಂತೆ, ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಬಸವರಾಜ ಅಕಾಲಿಕ ನಿಧನಕ್ಕೆ ಗದಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಂತಾಪ ಸೂಚಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ನಾಳೆಯಿಂದ ‘BESCOM ಹೊಸ ನಿಯಮ’ ಜಾರಿ: ‘ರೂ.100 ಬಿಲ್ ಬಾಕಿ’ ಇದ್ರು ‘ವಿದ್ಯುತ್ ಸಂಪರ್ಕ’ ಕಡಿತ
ದಾವಣಗೆರೆಯಲ್ಲಿ ಜೈಲು ಶಿಕ್ಷೆಯ ಭಯದಿಂದ ‘ಕೋರ್ಟ್’ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ