ಬೆಂಗಳೂರು : ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗಿದ್ದು, ಎರಡು ವರ್ಷಗಳ ಬಳಿಕ ಈ ಬಾರಿ ಹೊಸ ವರ್ಷಾಚರಣೆಗೆ ಅದ್ಧೂರಿ ಸಿದ್ಧತೆ ಮಾಡಲಾಗಿದೆ.2023 ರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಜನರು ಸಿದ್ದರಾಗಿದ್ದರು. ಆದರೆ ಕೊರೊನಾ ಎಂಬ ಮಹಾಮಾರಿ ಮತ್ತೆ ಜನರನ್ನು ಕಾಡತೊಡಗಿದೆ.
ಕೊರೊನಾ ಹಿನ್ನೆಲೆ ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಹೊಸ ರೂಲ್ಸ್ ಜಾರಿ ಮಾಡಲಾಗಿದ್ದು, ಕಡ್ಡಾಯವಾಗಿ ಜನರು ಇದನ್ನು ಪಾಲಿಸಲೇಬೇಕಾಗಿದೆ.
ಬಿಬಿಎಂಪಿ ರೂಲ್ಸ್
ನಗರದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಬಿಬಿಎಂಪಿ ರೂಲ್ಸ್ ಜಾರಿ ಮಾಡಿದೆ. ಪಿಜಿ, ಹೋಟೆಲ್ , ಬೇಕರಿ ಸೇರಿ ವಾಣಿಜ್ಯ ಚಟುವಟಿಕೆಗೆ ನೋಟಿಸ್ ಜಾರಿ ಮಾಡಿದೆ. ನಿಯ ಪಾಲಿಸುವಂತೆ ಬಿಬಿಎಂಪಿ ಅಧಿಖಾರಿಗಳು ನೋಟಿಸ್ ನೀಡಿದ್ದಾರೆ. ಮಧ್ಯರಾತ್ರಿ ಒಂದು ಗಂಟೆ ವರೆಗೆ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ವಾಣಿಜ್ಯ ಚಟುವಟಿಕೆ ಸ್ಥಗಿತಗೊಳಿಸುವಂತೆ ಬಿಬಿಎಂಪಿ ನೋಟಿಸ್ ನೀಡಿದೆ. ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ಸ್ಥಗಿತಗೊಳಿಸಲು ನೋಟಿಸ್ ನೀಡಲಾಗಿದೆ. 40 ಅಡಿಗಿಂತ ಕಡಿಮೆ ವಿಸ್ತೀರ್ಣದಲ್ಲಿ ರಸ್ತೆಗಳಲ್ಲಿ ಚಟುವಟಿಕೆಗೆ ನಿಬಂಧ ಹೇರಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ
ಹೊಸ ವರ್ಷಾಚರಣೆ ಹಿನ್ನೆಲೆ ಈಗಾಗಲೇ ಖಾಕಿ ಫುಲ್ ಅಲರ್ಟ್ ಆಗಿದೆ. ಹೊಸ ವರ್ಷಾಷಚರಣೆ ದಿನ ಎಲ್ಲಾ ಕಡೆ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ವಿಶೇಷ ಆಯುಕ್ತ ಸಲೀಂ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಡಿ. 31 ರಾತ್ರಿ 9 ಗಂಟೆ ಬಳಿಕ ನಗರದ 30 ಪ್ಲೈಓವರ್ ಬಂದ್ ಆಗಿದೆ. ಏರ್ ಪೋರ್ಟ್ ಪ್ಲೈಓರ್ ಮೇಲೆ ಬೈಕ್ ಸಂಚಾರಕ್ಕೆ ಅನುಮತಿ ಇಲ್ಲ. ನೈಸ್ ರಸ್ತೆಯಲ್ಲೂ ರಾತ್ರಿ 9 ಗಂಟೆ ಬಳಿಕ ಬೈಕ್ ಗಳ ಸಂಚಾರ ಬಂದ್ ಆಗಲಿದೆ. ಹೊಸ ವರ್ಷಾಚರಣೆ ವೇಳೆ ವೀಲ್ಹಿಂಗ್ ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ. ಹೊಸ ವರ್ಷ ದಿನ ಮೆಟ್ರೋ , ಬಿಬಿಎಂಟಿ ಸಂಚಾರ ಅವಧಿ ವಿಸ್ತರಣೆ ಮಾಡಲಾಗುವುದು ಎಂದರು.
ಡಿ.31ರ ರಾತ್ರಿ 12 ರವರೆಗೆ ‘ಲೌಡ್ ಸ್ಪೀಕರ್ ಬಳಕೆಗೆ ಅವಕಾಶ
ಡಿ.31ರ ರಾತ್ರಿ 12 ರವರೆಗೆ ‘ಲೌಡ್ ಸ್ಪೀಕರ್ ಬಳಕೆಗೆ ಅವಕಾಶ ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಹೊಸ ತಳಿ ಬಿಎಫ್.7 ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲಿ ಹರಡುವ ಭೀತಿ ಶುರುವಾಗಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕಾಗಿ ಫುಲ್ ಅಲರ್ಟ್ ಆಗಿದೆ. ಈ ನಿಟ್ಟಿನಲ್ಲಿ ಪಬ್ ಬಾರ್ ರೆಸ್ಟೋರೆಂಟ್ಗಳ ಮಾಲೀಕರು ನಿಯಮ ಪಾಲಿಸಬೇಕು. ಮಧ್ಯರಾತ್ರಿ 1 ಗಂಟೆವರೆಗೆ ಮಾತ್ರ ಪಾರ್ಟಿ ನಡೆಸಬೇಕು ಡಿ.31ರ ರಾತ್ರಿ 12 ರವರೆಗೆ ಲೌಡ್ ಸ್ಪೀಕರ್ ಬಳಕೆಗೆ ಅವಕಾಶ ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ವಿಶೇಷ ನಿಗಾ ಇಡಲಾಗಿದೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಫ್ಲೈ ಓವರ್ ಬಂದ್
ಇನ್ನೂ ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಯಾವುದೇ ಅಪಘಾತದಂತ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿನ 30 ಫ್ಲೈ ಓವರ್ ಗಳನ್ನು ಮುಚ್ಚಲಾಗಿದೆ. ವಾಹನ ಸವಾರರು ಫ್ಲೈ ಓವರ್ ಬಿಟ್ಟು, ಸರ್ವಿಸ್ ರಸ್ತೆಯಲ್ಲಿ ತೆರಳುವಂತೆಯೂ ಸೂಚನೆ ನೀಡಲಾಗಿದೆ.
ಪಬ್ ಎಂಟ್ರಿಗೂ ಮುನ್ನ ಸ್ಕ್ಯಾನಿಂಗ್
ಹೌದು, ಈ ಬಾರಿ ಪಬ್ ಗೆ ಎಂಟ್ರಿ ಕೊಡುವ ಮುನ್ನ ಸ್ಕ್ಯಾನಿಂಗ್ ಮಾಡಲು ಸೂಚನೆ ನೀಡಲಾಗಿದೆ. ಪವ್ ರೆಸ್ಟೋರೆಂಟ್ ಗೆ ಭೇಟಿ ನೀಡುವವರ ಫೋಟೋ ಸೆರೆ ಹಿಡಿಯಲು ಸೂಚನೆ ನೀಡಲಾಗಿದೆ. ಇದರಿಂದ ಸೆಲೆಬ್ರೇಷನ್ ನಂತರ ಹಾಗೂ ಸೆಲೆಬ್ರೇಷನ್ ವೇಳೆ ನಡೆಯುವ ಅಹಿತಕರ ಘಟನೆಗಳಲ್ಲಿ ಭಾಗಿಯಾಗುವವರನ್ನು ಗುರುತಿಸಲು ಸಹಕಾರಿಯಾಗಲಿದೆ.
BIGG NEWS : ‘ಪಂಚಮಸಾಲಿ’ ಸಮುದಾಯಕ್ಕೆ 2 ಡಿ ಮೀಸಲಾತಿ ಘೋಷಣೆ : ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದೇನು..?
‘ಮದುವೆ ಗಂಡಾಗಿದ್ದ ಈಶ್ವರಪ್ಪ ಇದೀಗ ಮದ್ವೆ ಆಸೆಯನ್ನೇ ಕೈ ಬಿಟ್ಟಿದ್ದಾರೆ : ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ