ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಒಂದು ವೇಳೆ ಅಲ್ಪಸಂಖ್ಯಾತರ ಮೇಲೆ ಈ ಆರೋಪ ಬಂದರೆ ಪ್ರಕರಣ ಮುಚ್ಚಿ ಹಾಕುವಂತೆ ಪೊಲೀಸರಿಗೆ ನಿರ್ದೇಶನವಿದೆ ಎಂದು ಗಂಭೀರವಾದಂತಹ ಆರೋಪ ಮಾಡಿದರು.
ಇದು ಟ್ರೈಲರ್ ಮಾತ್ರವೇ, ಮುಂದೆ ಇನ್ನೂ ದುರ್ಘಟನೆಗಳು ಕಾದಿವೆ : ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ಪ್ರತಾಪ್ ಸಿಂಹ!
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಮೇಲೆ ಆರೋಪ ಬಂದರೆ ಅದನ್ನು ಮುಚ್ಚಿಹಾಕಿ. ಬಹು ಸಂಖ್ಯಾತರ ಮೇಲೆ ಆರೋಪ ಬಂದರೆ ಕೂಡಲೇ ಕ್ರಮ ಕೈಗೊಳ್ಳಿ ಎಂಬುದಾಗಿ ಪೊಲೀಸ್ ಇಲಾಖೆಗೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನವಿದೆ.ಕರ್ನಾಟಕದ ಪ್ರಜೆಯಾಗಿ ಇದೆಲ್ಲಾ ನಮ್ಮ ಮನಸ್ಸಿಗೆ ಬೇಸರ ತರಿಸಿದೆ. ಹಾಗಿದ್ದರೆ, ಈಗ ಕೇಳಿಬಂದಿರುವ ಎರಡೂ ಆರೋಪಗಳು ಸಾಬೀತಾದರೆ ಸರ್ಕಾರ ವಿಸರ್ಜನೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
2024ನೇ ಸಾಲಿನ ಹಜ್ ಮಾರ್ಗದರ್ಶಿ ಬಿಡುಗಡೆ ಮಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ !
ಗೃಹಸಚಿವರು ಒತ್ತಡದಲ್ಲಿದ್ದಾರೆ. ಅವರು ಇದ್ದ ರಿಪೋರ್ಟ್ ಇದ್ದ ಹಾಗೆ ಕೊಡುವವರು. ಅವರ ಮೇಲೆ ಒತ್ತಡ ಇರುವುದು ಸತ್ಯ. ಹಾಗಾಗಿ ರಿಪೋರ್ಟ್ ಕೊಟ್ಟೇ ಇಲ್ಲ ಅಂತ ಹೇಳಿಬಿಡಿ ಎಂದು ಪೊಲೀಸರಿಗೆ ಹೇಳಿರುತ್ತಾರೆ. ನಾನೂ ಕೂಡ ಗೃಹಸಚಿವ ಆಗಿದ್ದವನು. ವರದಿಯಲ್ಲಿ ದಿನಾಂಕ ಹಾಕಿರುತ್ತಾರೆ. ಅವರು ಮ್ಯಾನೇಜ್ ಮಾಡುತ್ತಿದ್ದಾರೆ ಅಷ್ಟೆ ಎಂದು ಪ್ರತಿಪಕ್ಷ ನಾಯಕ ದೂರಿದ್ದಾರೆ.
ಲಂಚ ಪ್ರಕರಣಗಳಲ್ಲಿ ಶಾಸಕರಿಗೆ ವಿನಾಯಿತಿ ನೀಡುವ ಸುಪ್ರಿಂ ಆದೇಶವನ್ನು ಸ್ವಾಗತಿಸಿದ ಪ್ರಧಾನಿ!
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಖಾಸಗಿ ರಿಪೋರ್ಟ್ನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ದೃಢವಾಗಿದೆ. ಸರ್ಕಾರಕ್ಕೆ ಕೂಡ ಈಗಾಗಲೇ ಎಫ್ಎಸ್ಎಲ್ ವರದಿ ಬಂದಿದೆ. ಯಾರನ್ನೋ ಕಾಪಾಡಲು ರಾಜ್ಯ ಸರ್ಕಾರ ಮುಚ್ಚಿಡುವ ಕೆಲಸ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
LOC ಗೆ ಐದು ಪೈಸೆ ಲಂಚ ಯಾರಾದರೂ ನನಗೆ ಕೊಟ್ಟಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ: ಸಿ.ಎಂ ಸವಾಲು
ವಿಧಾನಸೌಧದ ಆವರಣದಲ್ಲಿ ಆ ರೀತಿ ಘಟನೆ ನಡೆದೇ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಪಾದಿಸಿದ್ದಾರೆ. ಬಾಂಬ್ ಸ್ಫೋಟ ವ್ಯಾವಹಾರಿಕ ಸಂಘರ್ಷ ಎಂದು ಹೇಳಿದ್ದಾರೆ. ಮಂಗಳೂರು ಬಾಂಬ್ ಸ್ಫೋಟದ ಸಂಚುಕೋರನನ್ನು ಅಮಾಯಕ ಎಂದಿದ್ದರು. ಇನ್ನೂ ಐದು ದಿನವಾದರೂ ಎಫ್ಎಸ್ಎಲ್ ವರದಿ ಕೊಡುವುದಿಲ್ಲ. ಯಾರ ಮೇಲೆಯೋ ಗೂಬೆ ಕೂರಿಸಲು ಹೊರಟಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.