ಬೆಂಗಳೂರು: 15 ಪಿಎಫ್ಐ ಮುಖಂಡರ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮಿನಷರ್ ಪ್ರತಾಪ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. 15 ಪಿಎಫ್ಐ ಮುಖಂಡರ ಪೊಲೀಸ್ ಕಸ್ಟಡಿ ಅವಧಿ ಇಂದು ಮುಕ್ತಾಯವಾಗಲಿದೆ. ಅವರನ್ನು ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಎಸಿಪಿ ಜಗದೀಶ್ ನೇತೃತ್ವದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
BREAKING NEWS: ಬುದ್ದಿ ಹೇಳಲು ಹೋದ ಕೈ ಮುಖಂಡನಿಗೆ ಚಾಕು ಇರಿತ; ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
ಹಲವು ಪ್ರಕರಣಗಳ ತನಿಖೆ ನಡೆಯುತ್ತಿದೆ. ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಬಂಧಿತ ಅರೋಪಿಗಳ ವಿರುದ್ಧ ಸಿಆರ್ಪಿಸಿ 120ಬಿ (ಒಳಸಂಚು), 121 (ರಾಷ್ಟ್ರದ ವಿರುದ್ದ ಸಮರ), 121ಎ (ರಾಷ್ಟ್ರದ ವಿರುದ್ದ ಸಮರ ಸಾರಲು ಒಳಸಂಚು), 153ಎ (ಕೋಮುಗಳ ನಡುವೆ ದ್ವೇಷ ಉಂಟುಮಾಡುವುದು) ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
BREAKING NEWS: ಬುದ್ದಿ ಹೇಳಲು ಹೋದ ಕೈ ಮುಖಂಡನಿಗೆ ಚಾಕು ಇರಿತ; ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
ಇನ್ನು ನಗರದಲ್ಲಿ ಸೋಮವಾರ ಪೊಲೀಸ್ ಕಮಿನಷರ್ ಪ್ರತಾಪ್ ರೆಡ್ಡಿ ‘112 ಪೊಲೀಸ್ ಸಹಾಯವಾಣಿ’ಗೆ ಚಾಲನೆ ನೀಡಿದರು. ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ವಿವರಿಸಿದರೆ, ನಗರದ ಯಾವುದೇ ಭಾಗಕ್ಕೆ 15 ನಿಮಿಷದಲ್ಲಿ ಸಿಬ್ಬಂದಿ ಭೇಟಿ ನೀಡಿ, ಸಮಸ್ಯೆ ಬಗೆಹರಿಸುತ್ತಾರೆ. ತುರ್ತು ಸಮಯದಲ್ಲಿ 112ಕ್ಕೆ ಕರೆ ಮಾಡಿ ಎಂದು ಮನವಿ ಮಾಡಿದರು.