ಬೆಂಗಳೂರು: ಸಿಎಂ ತವರು ಜಿಲ್ಲೆಯಲ್ಲಿ ಪೊಲೀಸರಿಂದ ವ್ಯಕ್ತಿ ಮೇಲೆ ಗಂಭಿರ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಹಾರೋಹಳ್ಳಿ ರವೀಂದ್ರ ಎನ್ನುವವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಹಾರೋಹಳ್ಳಿ ರವೀಂದ್ರ ಹೇಳಿರುವಂಥೆ ಕ್ಷುಲ್ಲಕ ಕಾರಣಕ್ಕೆ ಒಂದೇ ಮನೆಯ ಅಣ್ಣ ತಮ್ಮ, ಅಕ್ಕ ತಂಗಿಯ ಮಕ್ಕಳು ಮಾಡಿಕೊಂಡಿದ್ದ ಸಣ್ಣಪುಟ್ಟ ಗಲಾಟೆ ವಿಷಯಕ್ಕೆ ಮಾನ್ಯ ಮುಖ್ಯಮಂತ್ರಿಗಳು ಪ್ರತಿನಿಧಿಸುವ ತಿ. ನರಸೀಪುರ ತಾ. ವರುಣ ವಿಧಾನ ಸಭಾ ಕ್ಷೇತ್ರ ತುಂಬಲ ಗ್ರಾಮದ ದಲಿತ ಯುವಕರಿಗೆ ಯಾವುದೇ ದೂರು ದಾಖಲು ಇರದಿದ್ದರೂ, ಯಾವುದೇ ನೋಟೀಸ್ ನೀಡದೆಯೇ ದಿನಾಂಕ 05-09-2025 ರಂದು ತಿ. ನರಸೀಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಧನಂಜಯ, ಸಬ್ ಇನ್ಸ್ ಪೆಕ್ಟರ್ ಜಗದೀಶ್ ದೂಳ್ ಶೆಟ್ಟಿ ಮತ್ತು ಇಬ್ಬರು ಪೊಲೀಸರು ಸೇರಿ ಹೊಡೆದಿರುವ ಪರಿ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತು ಮಾಡಿ, ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೖಗೊಳ್ಳವುದು ನ್ಯಾಯೋಚಿತವಾದದ್ದು ಅಂಥ ಹೇಳಿದ್ದಾರೆ.