ಬೆಂಗಳೂರು: ಅಕ್ಕಮಹಾದೇವಿ ವಸತಿ ನಿಲಯದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ತ್ರದುರ್ಗದ ಮುರುಘಾ ರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಶರಣರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಈ ನಡುವೆ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ತನಿಖೆ ಬಗ್ಗೆ ಮಾಧ್ಯಮಗಳು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಗೃಹ ಸಚಿವ ಮಠದಲ್ಲಿ ಇದ್ದವರೇ ತೊಂದರೆ ಮಾಡಿರುವ ಹಾಗೇ ಕಾಣುತ್ತೆ. ಅದರ ಬಗ್ಗೆ ನನಗೆ ಮಾಹಿತಿ ಇದೆ. ತನಿಖೆ ನಡೆಯುತ್ತಿದೆ. ಮುರುಘಾಮಠದಲ್ಲಿನ ಓರ್ವ ಉದ್ಯೋಗಿ ಸರಿಯಿರಲಿಲ್ಲ ಅಂತ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಇನ್ನೂ ಸಚಿವರ ಈ ಮಾತಿಗೆ ವ್ಯಾಪಾಕ ಟೀಕೆ ಕೇಳಿ ಬರುತ್ತಿದ್ದು, ಸಚಿವರು ತನಿಖೆ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಅಂತ ಜನತೆ ಆಕ್ರೋಶ ಕೇಳಿ ಬರುತ್ತಿದ್ದಾರೆ. ಸಚಿವರು ಸ್ವತಃ ತೀರ್ಮಾನ ತೆಗೆದುಕೊಂಡು ಹೇಳುವುದು ಸಚಿವರ ಜ್ಞಾನಕ್ಕೆ ಕೈ ಹಿಡಿದ ಕನ್ನಡಿಯಾಗಿದೆ ಅಂತ ಹೇಳುತ್ತಿದ್ದಾರೆ.