ನವದೆಹಲಿ : ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ 17ನೇ ಜಿ20 ಶೃಂಗಸಭೆಯ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ನಾಯಕರಿಗೆ ಗುಜರಾತ್, ಹಿಮಾಚಲದಿಂದ ಕಲಾಕೃತಿಗಳು ಮತ್ತು ಸಾಂಪ್ರದಾಯಿಕ ವಸ್ತುಗಳನ್ನು ಉಡುಗೊರೆಯಾಗಿ ನೀಡಿದರು.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಹಿಮಾಚಲ ಪ್ರದೇಶದ ಕಾಂಗ್ರಾ ಚಿಕಣಿ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿದರು.
Prime Minister Narendra Modi gifts US President Joe Biden Kangra miniature painting
Kangra miniature paintings generally portray ‘Shringar Rasa’ or depiction of love on a natural backdrop. These exquisite paintings are made by painters from Himanchal Pradesh using natural colors pic.twitter.com/3OzGG9EuzI
— ANI (@ANI) November 16, 2022
ಸ್ಪ್ಯಾನಿಷ್ ಪ್ರಧಾನ ಮಂತ್ರಿ ಪೆಡ್ರೊ ಸ್ಯಾಂಚೆಜ್ಗೆ ಹಿಮಾಚಲದ ಮಂಡಿ ಮತ್ತು ಕುಲು ಜಿಲ್ಲೆಗಳಿಂದ ಕನಾಲ್ ಹಿತ್ತಾಳೆಯ ಸೆಟ್ ಅನ್ನು ನೀಡಿದರು. ಉಡುಗೊರೆ ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ಒಳಗೊಂಡಿತ್ತು.
ಇಟಲಿಯ ಹೊಸ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಉತ್ತರ ಗುಜರಾತಿನ ಸಾಲ್ವಿ ಕುಟುಂಬವು ಕೈಯಿಂದ ನೇಯ್ದ ಪಟಾನ್ ಪಟೋಲಾ ದುಪಟ್ಟಾ – ಸ್ಕಾರ್ಫ್ ಅನ್ನು ನೀಡಲಾಯಿತು. ಸ್ಕಾರ್ಫ್ ಅನ್ನು ‘ಡಬಲ್ ಇಕಾಟ್’ ಎಂಬ ತಂತ್ರದಿಂದ ತಯಾರಿಸಲಾಗಿದ್ದು, ಅದು ಬಹು-ಬಣ್ಣದ ನೋಟವನ್ನು ನೀಡುತ್ತದೆ. ‘ಡಬಲ್ ಇಕಾತ್’ ತಂತ್ರವನ್ನು ಬಳಸುವ ಬಟ್ಟೆಗಳನ್ನು ಸಾಂಪ್ರದಾಯಿಕವಾಗಿ ಭಾರತವನ್ನು ಹೊರತುಪಡಿಸಿ ಎರಡು ದೇಶಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ.
Prime Minister Narendra Modi gifts Silver Bowl from Surat and Kinnauri Shawl from Kinnaur, Himachal Pradesh to Indonesian President Joko Widodo at the #G20Summit in Bali, Indonesia. pic.twitter.com/IYIeKIVT7z
— ANI (@ANI) November 16, 2022
ಇನ್ನು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ‘ಮಾತಾ ನಿ ಪಚೇಡಿ’ ಕಲಾಕೃತಿಯನ್ನು ಪಡೆದರು. ಇದು ವಘರಿ ಸಮುದಾಯದಿಂದ ನಿರ್ಮಿಸಲಾದ ಜವಳಿ ಕಲೆಯ ಒಂದು ರೂಪವಾಗಿದೆ.
ಮೋದಿಯವರಿಗೆ ಊಟಕ್ಕೆ ಆತಿಥ್ಯ ನೀಡಿದ ಫ್ರಾನ್ಸ್ ಎಮ್ಯಾನುಯೆಲ್ ಮ್ಯಾಕ್ರನ್ ಗುಜರಾತಿನ ಕಚ್ನಿಂದ ಅಗೇಟ್ ಬೌಲ್ ಪಡೆದರು. ಸಿಂಗಾಪುರದ ಲೀ ಸೀನ್ ಲೂಂಗ್ ಮತ್ತು ಜರ್ಮನಿಯ ಓಲಾಫ್ ಸ್ಕೋಲ್ಜ್ ಅವರು ಇದೇ ರೀತಿಯ ಉಡುಗೊರೆಗಳನ್ನು ಪಡೆದರು.
PM Modi gifts UK PM Rishi Sunak Mata Ni Pachedi.
It is a handmade textile of Gujarat and an offering in temple shrines which house Mother Goddess. The name is derived from Gujarati words ‘Mata’ meaning ‘mother goddess’, ‘Ni’ meaning ‘belonging to’ & ‘Pachedi’ meaning ‘backdrop’ pic.twitter.com/ycf3sffy15
— ANI (@ANI) November 16, 2022