ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಇಂದು(ಆಗಸ್ಟ್ 28) ಬೆಳಿಗ್ಗೆ 11:00 ಗಂಟೆಗೆ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ 92 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇಂದು ನಡೆಯುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನರೊಂದಿಗೆ ಸರ್ಕಾರ ಮತ್ತು ತಮ್ಮ ಆಶಯಗಳ ಬಗ್ಗೆ ಮೋದಿ ಅವರು ಹಂಚಿಕೊಳ್ಳಲಿದ್ದಾರೆ.
ಇಂದು ನಡೆಯುವ ಮನ್ ಕಿ ಬಾತ್ ಕಾರ್ಯಕ್ರಮದ ಬಗ್ಗೆ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
Tune in at 11 AM for #MannKiBaat August 2022! pic.twitter.com/WNwYCPFRNT
— Narendra Modi (@narendramodi) August 28, 2022
ಹಿಂದಿ ಪ್ರಸಾರದ ನಂತರ ಆಕಾಶವಾಣಿ ಪ್ರಾದೇಶಿಕ ಭಾಷೆಗಳಲ್ಲಿ ‘ಮನ್ ಕಿ ಬಾತ್’ ಅನ್ನು ಪ್ರಸಾರ ಮಾಡುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಜುಲೈ 31, 2022 ರಂದು ‘ಮನ್ ಕಿ ಬಾತ್’ ಕಾರ್ಯಕ್ರಮದ 91 ನೇ ಆವೃತ್ತಿಯಲ್ಲಿ, ಪ್ರಧಾನಿ ಮೋದಿಯವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಿದರು ಮತ್ತು 75ನೇ ಸ್ವಾತಂತ್ರ್ಯದ ‘ಹರ್ ಘರ್ ತಿರಂಗ’ ಅಭಿಯಾನದ ಭಾಗವಗಿ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲು ಜನರಲ್ಲಿ ಮನವಿ ಮಾಡಿದ್ದರು.
BIGG NEWS : ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಭಾರೀ ಪ್ಲ್ಯಾನ್ : ಗಣೇಶ ಮೂರ್ತಿ ಕೂರಿಸಲು 3 ರೀತಿ ಪ್ರದೇಶಗಳ ಗುರುತು
SHOCKING NEWS: ʻಅಗ್ನಿವೀರ್ʼ ಪರೀಕ್ಷೆಯಲ್ಲಿ ಫೇಲ್: ಮನನೊಂದು ಉತ್ತರಾಖಂಡ್ನ ಯುವಕ ಆತ್ಮಹತ್ಯೆಗೆ ಶರಣು