ನವದೆಹಲಿ : ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ ಅವರ ನಿಧನಕ್ಕೆ ಪ್ರಧಾನಿ ಮೋದಿಯವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
Viral news : ಮಗನ ಖರ್ಚಿನ ಬಗ್ಗೆ ಕೇಳಿದ್ದಕ್ಕೆ ‘ತಾಯಿಯನ್ನೇ ಥಳಿಸಿದ ಆಘಾತಕಾರಿ ವಿಡಿಯೋ’ | Watch
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ವಿಕ್ರಮ್ ಗೋಖಲೆ ಜಿ ಅವರು ಸೃಜನಶೀಲ ಮತ್ತು ಬಹುಮುಖ ನಟರಾಗಿದ್ದರು. ಅವರ ಸುದೀರ್ಘ ನಟನಾ ವೃತ್ತಿಜೀವನದಲ್ಲಿ ಅವರು ಅನೇಕ ಆಸಕ್ತಿದಾಯಕ ಪಾತ್ರಗಳಿಂದಾಗಿ ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ. ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ರಿಯನ್ನು ದೇವರು ನೀಡಲಿ ಎಂದೇಳಿದ್ದಾರೆ.
ಅಂಗಾಂಗ ವೈಪಲ್ಯದಿಂದ ಬಳಲುತ್ತಿದ್ದ ವಿಕ್ರಮ್ ಗೋಖಲೆ ಅವರನ್ನು ಕೆಲವು ದಿನಗಳ ಹಿಂದೆ ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿನ ಕಳೆದಂತೆ ಅವರ ಆರೋಗ್ಯವು ಮತ್ತೆ ಹದಗೆಡಲು ಪ್ರಾರಂಭಿಸಿತು ಮತ್ತು ಅವರು ಗಂಭೀರ ಸ್ಥಿತಿಯಲ್ಲಿದ್ದರು. ಇಂದು ಮಧ್ಯಾಹ್ನ ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ವಿಕ್ರಮ್ ಕೊನೆಯುಸಿರೆಳೆದರು. ಇಂದು ಸಂಜೆ ಪುಣೆಯ ವೈಕುಂಠ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
Vikram Gokhale Ji was a creative and versatile actor. He will be remembered for many interesting roles in his long acting career. Saddened by his demise. Condolences to his family, friends and admirers. Om Shanti.
— Narendra Modi (@narendramodi) November 26, 2022
ವಿಕ್ರಮ್ ಗೋಖಲೆ ಹಲವು ಹಿಂದಿ, ಮರಾಠಿ ಚಲನಚಿತ್ರಗಳು ಮತ್ತು ಟಿವಿ ಶೋಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯದಾಗಿ ದೊಡ್ಡ ಪರದೆಯ ಮೇಲೆ ನಿಕಮ್ಮದಲ್ಲಿ ಶಿಲ್ಪಾ ಶೆಟ್ಟಿ, ಅಭಿಮನ್ಯು ದಸ್ಸಾನಿ ಮತ್ತು ಶೆರ್ಲಿ ಸೇಟಿಯಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಅವರ ಕೆಲವು ಅತ್ಯುತ್ತಮ ಕೃತಿಗಳಲ್ಲಿ ಐಯಾರಿ, ಭೂಲ್ ಭುಲೈಯಾ, ಹಮ್ ದಿಲ್ ದೇ ಚುಕೆ ಸನಮ್, ದೇ ದನಾ ದಾನ್, ತುಮ್ ಬಿನ್, ಲಕ್ಕಿ: ನೋ ಟೈಮ್ ಫಾರ್ ಲವ್ ಮತ್ತು ಇನ್ನಷ್ಟು ಸೇರಿವೆ.
ವಿಕ್ರಮ್ ಗೋಖಲೆ ಅವರು 2010 ರಲ್ಲಿ ಮರಾಠಿ ಚಿತ್ರ, ಆಘಾತ್ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು.
ಬೆಳಗಾವಿ ಗಡಿಯ ಒಂದು ಹಳ್ಳಿ ಕೂಡ ಮಹಾರಾಷ್ಟ್ರಕ್ಕೆ ಹೋಗಲ್ಲ – ಶಾಸಕ ಸತೀಶ್ ಜಾರಕಿಹೊಳಿ