ಬೆಂಗಳೂರು: 12 ನೇ ಶತಮಾನದಲ್ಲಿ ಶೈವ ಧರ್ಮ ಭಕ್ತಿ ಚಳುವಳಿಯಲ್ಲಿ ಪ್ರಸಿದ್ಧ ತತ್ವಜ್ಞಾನಿ, ಚಾಣಾಕ್ಷ, ಸಾಮಾಜಿಕ ಸುಧಾರಕ ಮತ್ತು ಸಂತನಾಗಿದ್ದ ಮಹಾತ್ಮ ಬಸವೇಶ್ವರ ಗೌರವಾರ್ಥವಾಗಿ ಬಸವ ಜಯಂತಿಯನ್ನು ಆಚರಿಸಲಾಗುತ್ತದೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಟ್ವಟಿರ್ ಖಾತೆಯಲ್ಲಿ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ. ಬಸವ ಜಯಂತಿಯ ಸಂದರ್ಭದಲ್ಲಿ ನಾನು, ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಕೋಟ್ಯಂತರ ಜನರ ಬದುಕಿಗೆ ಬೆಳಕು ನೀಡಿವೆ. ನ್ಯಾಯಯುತ ಮತ್ತು ಸಮೃದ್ಧ ಸಮಾಜದ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ ಅಂಥ ಹೇಳಿದ್ದಾರೆ.
ಬಸವ ಜಯಂತಿಯ ಸಂದರ್ಭದಲ್ಲಿ ನಾನು, ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಕೋಟ್ಯಂತರ ಜನರ ಬದುಕಿಗೆ ಬೆಳಕು ನೀಡಿವೆ. ನ್ಯಾಯಯುತ ಮತ್ತು ಸಮೃದ್ಧ ಸಮಾಜದ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ. pic.twitter.com/QNLqkkazfF
— Narendra Modi (@narendramodi) May 10, 2024