ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi ) ಅವರ ತಾಯಿ ಹೀರಾಬಾ ಅವರು ಶುಕ್ರವಾರ ಬೆಳಿಗ್ಗೆ ತಮ್ಮ 100 ನೇ ವಯಸ್ಸಿನಲ್ಲಿ ನಿಧನರಾದರು. ಮುಂಜಾನೆ 3.30ರ ಸುಮಾರಿಗೆ ಅವರು ಕೊನೆಯುಸಿರೆಳೆದರು. ಹೀಗೆ ನಿಧನರಾಗೋ ಒಂದು ದಿನದ ಮೊದಲು ಮೋದಿ ಅವರು ತಮ್ಮ ತಾಯಿಯನ್ನು ಭೇಟಿಯಾಗಿದ್ದರು. ಈ ವೇಳೆ ಅವರು ಹೇಳಿದಂತ ಮಾತನ್ನು ಪುತ್ರರಾಗಿ ನರೇಂದ್ರ ಮೋದಿ ನೆನಪು ಮಾಡಿಕೊಂಡಿದ್ದಾರೆ. ಅದೇನು ಅಂತ ಮುಂದೆ ಓದಿ.
ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯದಿಂದಾಗಿ ಪ್ರಧಾನಿ ಮೋದಿಯವರ ತಾಯಿ ಹೀರಾ ಬೇನ್ ಅವರು ಅಹ್ಮದಾಬಾದ್ನ ಯು.ಎನ್.ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್ ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವಂತ ವಿಷಯ ತಿಳಿದಂತ ಪ್ರಧಾನಿ ಮೋದಿಯವರು ದೆಹಲಿಯಿಂದ ನೇರವಾಗಿ ಅಹ್ಮದಾಬಾದ್ ನ ಯು ಎಸ್ ಮೆಹ್ತಾ ಆಸ್ಪತ್ರೆಗೆ ತೆರಳಿ ತಮ್ಮ ತಾಯಿಯ ಆರೋಗ್ಯ ವಿಚಾರಿಸಿದ್ದರು. ಆದ್ರೇ ಇಂದು ಅವರು ನಿಧನರಾಗಿದ್ದಾರೆ.
ಅವರ ನಿಧನ ಕುರಿತಂತೆ ಟ್ವಿಟ್ ಮಾಡಿರುವಂತ ಪ್ರಧಾನಿ ನರೇಂದ್ರ ಮೋದಿಯವರು, ಅವರ 100 ನೇ ಜನ್ಮದಿನದಂದು ನಾನು ಅವರನ್ನು ಭೇಟಿಯಾದಾಗ, ಅವರು ಒಂದು ಮಾತನ್ನು ಹೇಳಿದರು. ಅದು ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ಅವರು ಬುದ್ಧಿವಂತಿಕೆಯೊಂದಿಗೆ ಕೆಲಸ ಮಾಡು, ಪರಿಶುದ್ಧತೆಯಿಂದ ಜೀವನವನ್ನು ನಡೆಸುವುದು ಎಂದು ಹೇಳಿದ್ದರು ಎಂಬುದಾಗಿ ನೆನಪು ಮಾಡಿಕೊಂಡಿದ್ದಾರೆ. ಅಲ್ಲದೇ ತಾಯಿಯ ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ.
ಮಂಡ್ಯದಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಣಕಹಳೆ: ಹಲವು ಕಾರ್ಯಕ್ರಮಗಳಲ್ಲಿ ಭಾಗಿ