ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಸೋಮಭಾಯ್ ಮೋದಿಯವರು ಬೆಂಗಳೂರಿಗೆ ಇಂದು ಆಗಮಿಸಿದ್ದಾರೆ.
ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಂತ ಅವರಿಗೆ ಶಾಲು ಹೊದಿಸಿ, ಹೂಗುಚ್ಚ ನೀಡಿ ಸನ್ಮಾನಿಸಿ ಸ್ವಾಗತಿಸಲಾಯಿತು.
ಇಂದು ಬೆಳಿಗ್ಗೆ 9.20ಕ್ಕೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಅವರು ಆಗಮಿಸಬೇಕಾಗಿತ್ತು. ಆದ್ರೇ ವಿಮಾನ ತಡವಾದ ಕಾರಣ 1 ಗಂಟೆ ತಡವಾಗಿ ಗುಜರಾತ್ ನ ವಡೋದರದಿಂದ ಬೆಂಗಳೂರಿಗೆ ಆಗಮಿಸಿದರು.
ಯಲಹಂಕದ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಲಿರುವಂತ ಅವರು, ಅಲ್ಲಿಂದ ಸಾಯಿ ಬಾಬಾ ಮಂದಿರಕ್ಕೆ ತೆರಳಲಿದ್ದಾರೆ. ಆ ಬಳಿಕ ಶ್ರೀಗಂಚಿ ಸಮಾಜ್ ಪೂರ್ಣೇಶ್ವರ ಟ್ರಸ್ಟ್ ಗೆ ಭೇಟಿ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಬಳಿಯಲ್ಲಿರುವಂತ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆಯಲಿದ್ದಾರೆ.
ಬೆಂಗಳೂರಿನಿಂದ ರಾತ್ರಿ 7.45ಕ್ಕೆ ಗುಜರಾತ್ ಗೆ ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಸೋಮಭಾಯ್ ಮೋದಿಯವರು ವಾಪಾಸ್ ಆಗಲಿದ್ದಾರೆ.
ಶಿರೂರು ಗುಡ್ಡ ಕುಸಿತದ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ, ಪರಿಶೀಲನೆ: ತ್ವರಿತ ಕಾರ್ಯಾಚರಣೆ ಸೂಚನೆ
ದರೋಡೆ, ಲೂಟಿ ತಡೆಯಲು ಸೇನೆ ಕರೆಸಬೇಕಿತ್ತಾ?: ಡಿಕೆಶಿಗೆ ಕೇಂದ್ರ ಸಚಿವ HDK ತಿರುಗೇಟು