ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ( Mysore Dasara 2022 ) ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ( PM Narendra Modi ) ಬರಲಿದ್ದಾರೆ. ಅವರು ದಸರಾ ಜಂಬೂಸವಾರಿಯನ್ನು ಉದ್ಘಾಟಿಸಲಿದ್ದಾರೆ ಎನ್ನಲಾಗಿತ್ತು. ಆದ್ರೇ ಪ್ರಧಾನಿ ಮೋದಿ ದಸರಾ ಮಹೋತ್ಸವಕ್ಕೆ ಬರೋದಿಲ್ಲ ಎಂಬುದಾಗಿ ಪಿಎಂ ಕಚೇರಿಯಿಂದ ಸಿಎಂ ಕಚೇರಿಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ.
BIG BREAKING NEWS: ವಿಧಾನ ಪರಿಷತ್ನಲ್ಲಿ ಧ್ವನಿ ಮತದ ಮೂಲಕ ಮತಾಂತರ ನಿಷೇಧ ವಿಧೇಯಕ ಅಂಗೀಕಾರ
ಈ ಕುರಿತಂತೆ ಪಿಎಂ ಕಚೇರಿಯ ಉನ್ನತ ಮೂಲಗಳಿಂದ ತಿಳಿದು ಬಂದಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳ ಪಟ್ಟಿಯಲ್ಲಿ ಬದಲಾವಣೆಯಾಗಿದೆ. ಅವರು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಬರುವುದಿಲ್ಲ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕಚೇರಿಗೆ ಪಿಎಂ ಕಚೇರಿಯಿಂದ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ.
BIG NEWS: ‘ಕರಾವಳಿ ಜನತೆ’ಗೆ ಭರ್ಜರಿ ಗುಡ್ ನ್ಯೂಸ್: ಇನ್ಮುಂದೆ ‘ಪಡಿತರದಾರ’ರಿಗೆ ಸಿಗಲಿದೆ ‘ಕುಚಲಕ್ಕಿ’
ಅಂದಹಾಗೇ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಕಾರ್ಯಕ್ರಮ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿ ಆಗಮಿಸಲಿದ್ದಾರೆ ಎನ್ನಲಾಗಿತ್ತು. ಸಿಎಂ ಬೊಮ್ಮಾಯಿ ಕೂಡ ಈ ಮಾಹಿತಿಯನ್ನು ತಿಳಿಸಿದ್ದರು. ಆದ್ರೇ ಅಧಿಕೃತಗೊಂಡಿಲ್ಲ ಎಂದು ಹೇಳಿದ್ದರು. ಈ ಬೆನ್ನಲ್ಲೇ ಪಿಎಂ ಕಚೇರಿಯ ಉನ್ನತ ಮೂಲಗಳಿಂದ ಅವರು ಬರೋದಿಲ್ಲ ಎಂಬುದಾಗಿ ತಿಳಿದು ಬಂದಿದೆ.