ಹಿಮಾಚಲ ಪ್ರದೇಶ: ಇಂದು ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ(Prime minister Narendra Modi )ಅವರು ಭೇಟಿ ನೀಡಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಹಿಮಾಚಲ ಪ್ರದೇಶದ ಉನಾಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಅವರು ದೇಶದ ನಾಲ್ಕನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ(Vande Bharat Express train )ಚಾಲನೆ ನೀಡಲಿದ್ದಾರೆ ಮತ್ತು ಹಲವಾರು ಇತರ ಅಭಿವೃದ್ಧಿ ಯೋಜನೆಗಳನ್ನು ಪರಿಚಯಿಸಲಿದ್ದಾರೆ. ಇದು ಅಂಬ್ ಅಂಡೌರಾದಿಂದ ನವದೆಹಲಿಗೆ ಚಲಿಸಲಿದೆ. ಇದೇ ವೇಳೆ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು (ಐಐಐಟಿ) ರಾಷ್ಟ್ರಕ್ಕೆ ಸಮರ್ಪಿಸುತ್ತಾರೆ ಮತ್ತು ಬಲ್ಕ್ ಡ್ರಗ್ ಪಾರ್ಕ್ನ ಅಡಿಪಾಯವನ್ನು ಹಾಕುತ್ತಾರೆ.
ಅಷ್ಟೇ ಅಲ್ಲದೇ, ಚಂಬಾ ಜಿಲ್ಲೆಯಲ್ಲಿ ಅವರು ಎರಡು ಜಲವಿದ್ಯುತ್ ಯೋಜನೆಗಳ ಶಂಕುಸ್ಥಾಪನೆ ಮತ್ತು ಹಿಮಾಚಲ ಪ್ರದೇಶದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-III ಅನ್ನು ಪ್ರಾರಂಭಿಸಲಿದ್ದು, ಉನಾ ಮತ್ತು ಚಂಬಾದಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
BREAKING NEWS : ಸುಪ್ರೀಂಕೋರ್ಟ್ `ಹಿಜಾಬ್’ ತೀರ್ಪಿಗೆ ಕ್ಷಣಗಣನೆ : ಕರ್ನಾಟಕದಲ್ಲಿ ಹೈ ಅಲರ್ಟ್
Watch Video: ಹೈದರಾಬಾದ್ನಲ್ಲಿ ಭಾರೀ ಮಳೆ: ಬೈಕ್ ಸಮೇತ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ
ಎಚ್ಚರ..! ಈ ಕೆಟ್ಟ ಅಭ್ಯಾಸಗಳು ನಿಮ್ಮ ಕಣ್ಣಿನ ದೃಷ್ಠಿಯನ್ನೇ ಕಸಿಯಬಹುದು | World Sight Day 2022