ಅಹ್ಮದಾಬಾದ್: ನಿನ್ನೆ ಸಂಜೆ ಬ್ರಿಟಿಷ್ ಕಾಲದ ಸೇತುವೆ ಕುಸಿದು ಕನಿಷ್ಠ 141 ಜನರು ಮೃತಪಟ್ಟಿರುವ ಗುಜರಾತ್ನಲ್ಲಿರುವ ಮೊರ್ಬಿಗ ಸೇತುವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಭೇಟಿ ನೀಡಲಿದ್ದಾರೆ.
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 500 ಜನರು ತೂಗುಸೇತುವೆಯ ಮೇಲೆ ಕುಳಿತಿದ್ದಾಗ ಅದನ್ನು ಬೆಂಬಲಿಸುವ ಕೇಬಲ್ ಗಳು ತುಂಡರಿದ ಪರಿಣಾಮ ಘಟನೆ ನಡೆದಿದೆ, ಮೋರ್ಬಿಯ 150 ವರ್ಷಗಳಷ್ಟು ಹಳೆಯದಾದ ಸೇತುವೆಯ ಮೇಲೆ ಅನೇಕರು ಛಾತ್ ಪೂಜಾ ವಿಧಿವಿಧಾನಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ.