ನವದೆಹಲಿ : 2024ರ ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರವು ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರವನ್ನ ತೆಗೆದುಕೊಳ್ಳಲಿದೆ. ಮಾಹಿತಿಯ ಪ್ರಕಾರ, ಪ್ರಧಾನಿ ಶೀಘ್ರದಲ್ಲೇ 6 ಏಮ್ಸ್’ಗಳನ್ನ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅದೇ ಸಮಯದಲ್ಲಿ, ರೇವಾರಿ ಏಮ್ಸ್ಗೆ ಪ್ರಧಾನಿ ಮೋದಿ ಫೆಬ್ರವರಿ 16 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಏಮ್ಸ್ನ ಆರೋಗ್ಯ ಮೂಲಸೌಕರ್ಯಕ್ಕಾಗಿ ಸರ್ಕಾರವು ಸುಮಾರು 10,200 ಕೋಟಿ ರೂ.ಗಳ ಬೃಹತ್ ಬಜೆಟ್ ಹಂಚಿಕೆಯನ್ನ ಮಾಡಿದೆ. ಗುಜರಾತ್ನ ರಾಜ್ಕೋಟ್, ಪಂಜಾಬ್’ನ ಬಟಿಂಡಾ, ರಾಯ್ ಬರೇಲಿ, ಪಶ್ಚಿಮ ಬಂಗಾಳದ ಕಲ್ಯಾಣಿ ಮತ್ತು ಆಂಧ್ರಪ್ರದೇಶದ ಮಂಗಳಗಿರಿ ಮತ್ತು ಜಮ್ಮುವಿನ ಅವಂತಿಪುರ ಏಮ್ಸ್ಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
ರೇವಾರಿಯಲ್ಲಿ 1,650 ಕೋಟಿ ರೂ.ಗಳ ವೆಚ್ಚದಲ್ಲಿ ಏಮ್ಸ್ ನಿರ್ಮಾಣ.!
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹರಿಯಾಣದ ರೇವಾರಿಗೆ ಭೇಟಿ ನೀಡಲಿದ್ದಾರೆ. ನಗರ ಸಾರಿಗೆ, ಆರೋಗ್ಯ, ರೈಲು ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಸಂಬಂಧಿಸಿದ 9,750 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನ ಅವರು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಿ ಕಚೇರಿ (PMO) ಗುರುವಾರ ಹೇಳಿಕೆಯಲ್ಲಿ ಈ ಮಾಹಿತಿಯನ್ನ ನೀಡಿದೆ. ಅವರು ರೇವಾರಿಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS)ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಕೆಲವು ರೈಲ್ವೆ ಯೋಜನೆಗಳನ್ನ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಮಾಜಿ ಯೋಧರ ಬಿಡುಗಡೆ ಮಾಡಿದ ‘ಕತಾರ್ ಅಮೀರ್’ಗೆ ‘ಪ್ರಧಾನಿ ಮೋದಿ’ ಧನ್ಯವಾದ, ಭಾರತಕ್ಕೆ ಬರುವಂತೆ ಆಹ್ವಾನ
Bharat Bandh: ನಾಳೆ ‘ರೈತ ಸಂಘಟನೆ’ಗಳಿಂದ ‘ಭಾರತ್ ಬಂದ್’: ಏನಿರುತ್ತೆ.? ಏನಿರಲ್ಲ.? ಇಲ್ಲಿದೆ ಮಾಹಿತಿ
‘UPI-NPI ಲಿಂಕ್’ ನಿಯಮಗಳಿಗೆ ಸಹಿ ಹಾಕಿದ ‘ಭಾರತ-ನೇಪಾಳ’ ಕೇಂದ್ರ ಬ್ಯಾಂಕುಗಳು – RBI ಮಾಹಿತಿ