ನವದೆಹಲಿ : ಅಕ್ಟೋಬರ್ 23ರಂದು ಉತ್ತರ ಪ್ರದೇಶದ ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಈ ವೇಳೆ 4 ಸಾವಿರ ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ದೀಪಾವಳಿ ಆಚರಣೆಯಲ್ಲಿ ಭಾಗಿಯಾಗಲಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಪ್ರಕರಣ : ಶ್ರೀಮಂತರ ಮನೆಗೆ ಕನ್ನ ಹಾಕಿ ದಾನ ದರ್ಮ ಮಾಡ್ತಿದ್ದ ‘ಕಳ್ಳ’ ಅರೆಸ್ಟ್
ಪ್ರಧಾನಿ ಮೋದಿಯವರು ತಮ್ಮ ಭೇಟಿಯ ಸಂದರ್ಭದಲ್ಲಿ ದೀಪಾವಳಿಯ ಮುನ್ನಾದಿನದಂದು ರಾಮ್ ಜಿ ಕಿ ಪೈಡಿಯಲ್ಲಿ ದೀಪೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರವನ್ನು ಪ್ರಧಾನಿ ಮೋದಿ ಪರಿಶೀಲಿಸಲಿದ್ದಾರೆ ಎಂದು ಪಿಎಂ ಕಚೇರಿ ತಿಳಿಸಿದೆ.
ಪ್ರಧಾನಮಂತ್ರಿ ಮೋದಿಯವರು ಸಂಜೆ ಸರಯೂಜಿ ಪಕ್ಕದಲ್ಲಿರುವ ಹೊಸ ಘಾಟ್ನಲ್ಲಿ ಯೋಜಿಸಲಾದ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೂರು ದಿನಗಳ ದೀಪೋತ್ಸವವು ಅಕ್ಟೋಬರ್ 21 ರಂದು ಪ್ರಾರಂಭವಾಗಲಿದೆ. ಅಯೋಧ್ಯೆಯ ರಾಮ್ ಕಿ ಪೈಡಿ ಮತ್ತು ಇತರ ಸ್ಥಳಗಳಲ್ಲಿ 17 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.
ಬುಧವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಗೆ ಭೇಟಿ ನೀಡಲಿದ್ದು, ದೀಪೋತ್ಸವದ ಸಿದ್ಧತೆಗಳ ಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. ಜತೆಗೆ ಪರಿಶೀಲನಾ ಸಭೆಯನ್ನೂ ನಡೆಸಲಿದ್ದಾರೆ.
ಈ ಬಾರಿ ದೀಪಾವಳಿ ಹಬ್ಬವನ್ನು ಅಯೋಧ್ಯೆಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಬರೋಬ್ಬರಿ 14 ಲಕ್ಷದಿಂದ 15 ಲಕ್ಷಕ್ಕೂ ಅಧಿಕ ದೀಪಗಳನ್ನು ಉರಿಸಲು ನಿರ್ಧಾರಿಸಲಾಗಿದೆ.ಇನ್ನೂ 3.6 ಲಕ್ಷ ದೀಪಗಳು ಅಯೋಧ್ಯೆಯ ಇತರ ಭಾಗಗಳಲ್ಲಿ ಬೆಳಗಲಿವೆ ಎನ್ನಲಾಗುತ್ತಿದೆ.
BIGG UPDATE : ಕಲಬುರಗಿ ಮಾರಮ್ಮದೇವಿ ಜಾತ್ರೆಯಲ್ಲಿ ‘ಸಿಡಿ ಮದ್ದು’ ಸ್ಪೋಟ : 15 ಜನರಿಗೆ ಗಾಯ, 8 ಮಂದಿ ಸ್ಥಿತಿ ಗಂಭೀರ