ನಾಗ್ಪುರ : ಇಂದು ಪ್ರಧಾನಿ ಮೋದಿಯವರು ಮಹಾರಾಷ್ಟ್ರದ ನಾಗ್ಪುರ ಮೆಟ್ರೋ ರೈಲು ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿದರು. ಇದೇ ವೇಳೆ ಫ್ರೀಡಂ ಪಾರ್ಕ್ನಿಂದ ಖಾಪ್ರಿಗೆ ಮೆಟ್ರೋದಲ್ಲಿ ಪ್ರಯಾಣಿಸಿದರು.
ಫ್ರೀಡಂ ಪಾರ್ಕ್ನಿಂದ ಖಾಪ್ರಿಯವರೆಗಿನ ತಮ್ಮ ಪ್ರಯಾಣದ ಸಮಯದಲ್ಲಿ, ಪಿಎಂ ಮೋದಿಯವರು ವಿದ್ಯಾರ್ಥಿಗಳು, ಸ್ಟಾರ್ಟ್ ಅಪ್ ವಲಯದವರು ಮತ್ತು ನಾಗರಿಕರೊಂದಿಗೆ ಸಂವಾದ ನಡೆಸಿದ್ದಾರೆ.
ಮೆಟ್ರೋ ರೈಲಿನ ಮೊದಲ ಹಂತವು 36 ನಿಲ್ದಾಣಗಳನ್ನು ಹೊಂದಿದ್ದು, ಇದು 40 ಕಿ.ಮೀ ದೂರವನ್ನು ಒಳಗೊಂಡಿದೆ. ಸುಮಾರು 8,650 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ.
PM Shri @narendramodi takes ride in Nagpur Metro. #MahaSamruddhi https://t.co/VWls5ScEgm
— BJP (@BJP4India) December 11, 2022
ಇದೇ ವೇಳೆ ಸುಮಾರು 6,700 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಿರುವ ನಾಗ್ಪುರ ಮೆಟ್ರೋ ಯೋಜನೆಯ ಎರಡನೇ ಹಂತಕ್ಕೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು. ಇದು 32 ನಿಲ್ದಾಣಗಳನ್ನು ಹೊಂದಿದ್ದು, 43.8 ಕಿ.ಮೀ. ರೈಲು ಹತ್ತುವ ಮೊದಲು, ಅವರು ಝೀರೋ ಮೈಲ್ ನಿಲ್ದಾಣದಲ್ಲಿ ಯೋಜನೆಯ ಪ್ರದರ್ಶನಕ್ಕೆ ಭೇಟಿ ನೀಡಿದರು.
Prime Minister @narendramodi purchases his ticket
पंतप्रधानांकडून नागपूर मेट्रो मधून प्रवास#MahaSamruddhi pic.twitter.com/A4YCEbsxjc
— PIB in Maharashtra 🇮🇳 (@PIBMumbai) December 11, 2022
ಇಂದು ಮುಂಜಾನೆ, ಪ್ರಧಾನಿ ಮೋದಿ ಅವರು ಮಹಾರಾಷ್ಟ್ರದ ನಾಗ್ಪುರ ಮತ್ತು ಛತ್ತೀಸ್ಗಢದ ಬಿಲಾಸ್ಪುರ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಿದರು. ನಂತರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರತ್ತ ಕೈ ಬೀಸಿದರು. ಪ್ರಧಾನಿ ಮೋದಿಯವರು ಫ್ಲ್ಯಾಗ್ ಆಫ್ ಮಾಡಿದ ಆರನೇ ವಂದೇ ಭಾರತ್ ಎಕ್ಸ್ಪ್ರೆಸ್ ಆಗಿದೆ.
ನಾಗ್ಪುರ ಎಐಐಎಂಎಸ್ ಅನ್ನು ಉದ್ಘಾಟಿಸಿದ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಏಮ್ಸ್ ನಾಗ್ಪುರವನ್ನು ಉದ್ಘಾಟಿಸಿದರು.