ಕಲಬುರಗಿ: ನಾಳೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿದ್ದಾರೆ. ಈ ಕುರಿತು ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
BIGG NEWS: ನಾಳೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ; ಹಲವು ರೈಲುಗಳ ಸಂಚಾರ ವ್ಯತ್ಯಯ
ಮೋದಿಗೆ ರಾಜ್ಯದಲ್ಲಿ ಹೇಗಾದ್ರೂ ಮಾಡಿ ಚುನಾವಣೆ ಗೆಲ್ಲಬೇಕು. ಚುನಾವಣೆ ಹತ್ತಿರವಾದ ಹಿನ್ನೆಲೆ ರಾಜ್ಯಕ್ಕೆ ಮೋದಿ ಬರುತ್ತಿದ್ದಾರೆ. ದಿನದ 24 ಗಂಟೆಯೂ ಮೋದಿ ಚುನಾವಣೆ ಬಗ್ಗೆ ಯೋಚಿಸುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಜನರು ಗುಂಡಿ ಮುಚ್ಚಿ ಎಂದರೂ ಮುಚ್ಚಲಿಲ್ಲ ಆದ್ರೆ ಪ್ರಧಾನಿಮೋದಿ ಬರ್ತಾರೆಂದು ಈಗ ಗುಂಡಿ ಮುಚ್ಚುತ್ತಿದ್ದಾರೆ.
BIGG NEWS: ನಾಳೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ; ಹಲವು ರೈಲುಗಳ ಸಂಚಾರ ವ್ಯತ್ಯಯ
ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಮೇಲಿಂದ ಮೇಲೆ ರಾಜ್ಯಕ್ಕೆ ಮೋದಿ ಬರ್ತಿದ್ದಾರೆ. ಧರ್ಮದ, ಜಾತಿಯ ರಾಜಕಾರಣ ಮಾಡಬೇಕು ಅಂತ ಬಿಜೆಪಿಯವರು ಅಂದುಕೊಂಡಿದ್ದರು. ಆದ್ರೆ ರಾಜ್ಯದಲ್ಲಿ ಅದು ವಿಫಲವಾಗಿದೆ. ನಮ್ಮ ಅವಧಿಯಲ್ಲಿ ಆರಂಭವಾದ ಕೆಲಸಕ್ಕೆ ಇದೀಗ ಪ್ರಚಾರ ತಗೋತಿದಾರೆ. ಜನರು ಬೆಂಗಳೂರಿನಲ್ಲಿ ಗುಂಡಿ ಮುಚ್ಚಿ ಅಂದ್ರೆ ಮುಚ್ಚಲಿಲ್ಲ. ಪ್ರಧಾನಿ ಬರ್ತಾಯಿದಾರೆ ಅಂತ ರಸ್ತೆ ಮಾಡ್ತಿದ್ದಾರೆ ಎಂದರು.
BIGG NEWS: ನಾಳೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ; ಹಲವು ರೈಲುಗಳ ಸಂಚಾರ ವ್ಯತ್ಯಯ
ಇನ್ನು ಇದೇ ವೇಳೆ ಪ್ರಿಯಾಂಕ್ ಖರ್ಗೆ ನಾಪತ್ತೆ ಅನ್ನೋ ಪೋಸ್ಟರ್ ಅಭಿಯಾನ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಪೇ ಸಿಎಂ ನಿಂದ ಬಿಜೆಪಿಯವರಿಗೆ ಹೊರಗಡೆ ಬರಲು ಆಗ್ತಿಲ್ಲಾ. ಆರ್ಎಸ್ಎಸ್ ನವರು ಏನು ಹೇಳ್ತಾರೋ ಅದನ್ನು ಮಾಡ್ತಿದ್ದಾರೆ. ಬೇಕಾದರೆ ಹೇಳಲಿ ನಾನೇ ಪೋಸ್ಟರ್ ಮಾಡಿಸಿಕೊಡ್ತೇನೆ ಎಂದರು.