ದೆಹಲಿ : ಸ್ವಾತಂತ್ರ್ಯ ಹೋರಾಟಗಾರರಿಗೆ ಡಿಜಿಟಲ್ ಗೌರವ ಸಲ್ಲಿಸುವಂತೆ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಜು.23 ರಂದು ಕರೆ ನೀಡಿದ್ದಾರೆ. ನವದೆಹಲಿಯ ಸೆಂಟ್ರಲ್ ಪಾರ್ಕ್ ನಲ್ಲಿ ಅಳವಡಿಸಲಾಗಿರುವ ಡಿಜಿಟಲ್ ಜ್ಯೋತ್ ಹೆಚ್ಚು ಪ್ರಜ್ವಲಿಸಲು, ಆನ್ ಲೈನ್ ಮೂಲಕ ಸಲ್ಲಿಸುವ ಪ್ರತಿಯೊಂದು ಗೌರವವೂ ಮುಖ್ಯವಾಗಲಿದೆ ಎಂದು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ
A special tribute to the heroes of our freedom struggle!
Digital Jyot uses technology and enables you to share a heartfelt message of gratitude to our freedom fighters. https://t.co/0nGXaK0P3g pic.twitter.com/zmV5j6KGJn
— Narendra Modi (@narendramodi) July 23, 2022
.
ಸೆಂಟ್ರಲ್ ಪಾರ್ಕ್ ದೆಹಲಿಯಲ್ಲಿ ಸ್ಕೈ ಬೀಮ್ ದೀಪವನ್ನು ಅಳವಡಿಸಲಾಗಿದ್ದು, ಪ್ರತಿ ಬಾರಿ ವ್ಯಕ್ತಿಗಳು ಆನ್ ಲೈನ್ ಮೂಲಕ ಗೌರವ ಸಲ್ಲಿಸಿದಾಗಲೂ ಈ ಡಿಜಿಟಲ್ ಜ್ಯೋತ್ ನ ಪ್ರಕಾಶ ಹೆಚ್ಚಾಗಲಿದೆ. ಆದ ಕಾರಣ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಸ್ವಾತಂತ್ರ್ಯೊತ್ಸವದ ಅಮೃತ ಮಹೋತ್ಸವವನ್ನು ಬಲಪಡಿಸಿ ಎಂದು ಪ್ರಧಾನಿ ಟ್ವೀಟ್ ಮೂಲಕ ಕರೆ ನೀಡಿದ್ದಾರೆ.
ಡಿಜಿಟಲ್ ಜ್ಯೋತಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಿರೋಗಳನ್ನು ನೆನಪಿನಲ್ಲಿಡಲು ಸಲ್ಲಿಸಲಾಗುತ್ತಿರುವ ವಿಶೇಷವಾದ ಗೌರವವಾಗಿದೆ. digitaltribute.in ಮೂಲಕ ಜನತೆ ಇದರಲ್ಲಿ ಭಾಗವಹಿಸಬಹುದಾಗಿದೆ.