ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಯೋಧ್ಯೆಯ ರಾಮ ಮಂದಿರದ ಸ್ಮರಣಾರ್ಥ ಅಂಚೆ ಚೀಟಿಗಳನ್ನ ಮತ್ತು ವಿಶ್ವದಾದ್ಯಂತದ ಭಗವಾನ್ ರಾಮನಿಗೆ ಸಮರ್ಪಿತವಾದ ಅಂಚೆ ಚೀಟಿಗಳನ್ನ ಹೊಂದಿರುವ ಪುಸ್ತಕ ಬಿಡುಗಡೆ ಮಾಡಿದರು.
ಅಂಚೆ ಚೀಟಿಗಳ ಬಿಡುಗಡೆಯ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಇಂದು, ಶ್ರೀರಾಮ್ ಮಂದಿರ ಪ್ರಾಣ ಪ್ರತಿಷ್ಠಾನ ಅಭಿಯಾನ ಆಯೋಜಿಸಿದ್ದ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿತು. ಇಂದು, ಶ್ರೀ ರಾಮ್ ಜನ್ಮಭೂಮಿ ಮಂದಿರದ 6 ಸ್ಮರಣಾರ್ಥ ಅಂಚೆ ಚೀಟಿಗಳು ಮತ್ತು ವಿಶ್ವದಾದ್ಯಂತ ಭಗವಾನ್ ರಾಮನ ಬಗ್ಗೆ ಬಿಡುಗಡೆ ಮಾಡಿದ ಅಂಚೆಚೀಟಿಗಳ ಆಲ್ಬಂನ್ನ ಬಿಡುಗಡೆ ಮಾಡಲಾಗಿದೆ. ನಾನು ದೇಶದ ಜನರನ್ನ ಮತ್ತು ವಿಶ್ವದಾದ್ಯಂತದ ಎಲ್ಲಾ ರಾಮ ಭಕ್ತರನ್ನು ಅಭಿನಂದಿಸಲು ಬಯಸುತ್ತೇನೆ” ಎಂದು ಹೇಳಿದರು.
ಸ್ಟಾಂಪ್ ಬುಕ್ ವಿವಿಧ ಸಮಾಜಗಳಲ್ಲಿ ಭಗವಂತ ರಾಮನ ಅಂತರರಾಷ್ಟ್ರೀಯ ಆಕರ್ಷಣೆಯನ್ನ ಪ್ರದರ್ಶಿಸುವ ಗುರಿಯನ್ನ ಹೊಂದಿದೆ. 48 ಪುಟಗಳ ಈ ಪುಸ್ತಕವು ಯುಎಸ್, ನ್ಯೂಜಿಲೆಂಡ್, ಸಿಂಗಾಪುರ್, ಕೆನಡಾ, ಕಾಂಬೋಡಿಯಾ ಮತ್ತು ವಿಶ್ವಸಂಸ್ಥೆಯಂತಹ ಸಂಸ್ಥೆಗಳು ಸೇರಿದಂತೆ 20ಕ್ಕೂ ಹೆಚ್ಚು ದೇಶಗಳು ಬಿಡುಗಡೆ ಮಾಡಿದ ಅಂಚೆಚೀಟಿಗಳನ್ನ ಒಳಗೊಂಡಿದೆ.
ಸಚಿನ್ ತೆಂಡೂಲ್ಕರ್ ಡೀಪ್‌ಫೇಕ್ ವಿಡಿಯೋ: ಗೇಮಿಂಗ್ ವೆಬ್‌ಸೈಟ್, ಫೇಸ್‌ಬುಕ್ ಪುಟದ ವಿರುದ್ದ ‘ಎಫ್‌ಐಆರ್’ ದಾಖಲು
ಸಚಿನ್ ತೆಂಡೂಲ್ಕರ್ ಡೀಪ್‌ಫೇಕ್ ವಿಡಿಯೋ: ಗೇಮಿಂಗ್ ವೆಬ್‌ಸೈಟ್, ಫೇಸ್‌ಬುಕ್ ಪುಟದ ವಿರುದ್ದ ‘ಎಫ್‌ಐಆರ್’ ದಾಖಲು