ಟೋಕಿಯೊ (ಜಪಾನ್): ಪ್ರಧಾನಿ ನರೇಂದ್ರ ಮೋದಿ (Narendra Modi)ಅವರು ಇಂದು ಟೋಕಿಯೊದ ನಿಪ್ಪಾನ್ ಬುಡೋಕಾನ್ನಲ್ಲಿ ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ(Shinzo Abe) ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಜಪಾನಿನ ರಾಜಧಾನಿಯಲ್ಲಿ ಇಂದು ಶಿಂಜೋ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಬಾಗಿಯಾಗಲು ಹಲವಾರು ವಿಶ್ವ ನಾಯಕರು ಹಾಜರಾಗಿದ್ದಾರೆ.
PM Modi pays final tribute to former Japanese PM Abe in Tokyo
Read @ANI Story | https://t.co/QSzcQfQva8#PMModi #ShinzoAbe #ShinzoAbefuneral pic.twitter.com/6KYML6jL4L
— ANI Digital (@ani_digital) September 27, 2022
ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಟೋಕಿಯೋಗೆ ಆಗಮಿಸಿದ್ದಾರೆ. ಈ ದುಃಖದ ಸಮಯದಲ್ಲಿ ನಾವು ಇಂದು ಭೇಟಿಯಾಗುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಅವರು ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಯವರು ಟ್ವಿಟ್ ಮಾಡಿದ್ದು, ಇಂದು, ಜಪಾನಿಗೆ ಬಂದ ನಂತರ, ನಾನು ಹೆಚ್ಚು ದುಃಖಿತನಾಗಿದ್ದೇನೆ, ಏಕೆಂದರೆ ನಾನು ಕೊನೆಯ ಬಾರಿಗೆ ಬಂದಾಗ, ನಾನು ಅಬೆ ಸಾನ್ ಅವರೊಂದಿಗೆ ಬಹಳ ದೀರ್ಘ ಸಂಭಾಷಣೆ ನಡೆಸಿದೆ ಇಲ್ಲಿಂದ ಹೊರಟುಹೋದ ಬಂದ ನಂತರ ನಾನು ಅವರ ಸಾವಿನ ಸುದ್ದಿ ಕೇಳಿರಲಿಲ್ಲ ಎಂದು ಎಂದಿಗೂ ಯೋಚಿಸಿ ಇರಲಿಲ್ಲ ಅಂತ ಹೇಳಿದ್ದಾರೆ.
ಓಸಾಕಾದ ಪೂರ್ವದಲ್ಲಿ ಜುಲೈ 8 ರಂದು ನಾರಾದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 11:30 ಕ್ಕೆ ಅಬೆ ಅವರು ಬೀದಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಅಂದು ಸಂಜೆ ಸಂಜೆ 5:03 ಕ್ಕೆ ಅಬೆ ನಿಧನರಾದರು ಎಂದು ಘೋಷಿಸಲಾಯಿತು.
BIG NEWS: ದಸರಾ ಸಂಭ್ರಮದಲ್ಲಿರುವ ಮೈಸೂರಿನಲ್ಲಿ PFI ಜಿಲ್ಲಾಧ್ಯಕ್ಷ ಸೇರಿ ಮೂವರು ವಶಕ್ಕೆ