ನವದೆಹಲಿ: ಮೊದಲ ಬಾರಿಗೆ ಅಂಧರ ಮಹಿಳಾ ಟಿ 20 ವಿಶ್ವಕಪ್ ಗೆಲುವು ಸಾಧಿಸಿದ ಭಾರತ ಮಹಿಳಾ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಅಂಧರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಉದ್ಘಾಟನಾ ಆವೃತ್ತಿಯನ್ನು ಗೆಲ್ಲುವ ಮೂಲಕ ಭಾರತ ಇತಿಹಾಸ ಬರೆದಿದೆ. ಕೊಲಂಬೊದಲ್ಲಿ ಭಾನುವಾರ ನಡೆದ ಏಕಪಕ್ಷೀಯ ಫೈನಲ್ ಪಂದ್ಯದಲ್ಲಿ ಭಾರತ ನೇಪಾಳವನ್ನು ಏಳು ವಿಕೆಟ್ ಗಳಿಂದ ಮಣಿಸಿತು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಉದ್ಘಾಟನಾ ಅಂಧರ ಮಹಿಳಾ ಟಿ 20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು! ಸರಣಿಯಲ್ಲಿ ಅವರು ಅಜೇಯವಾಗಿ ಉಳಿದಿರುವುದು ಹೆಚ್ಚು ಶ್ಲಾಘನೀಯ. ಇದು ನಿಜಕ್ಕೂ ಐತಿಹಾಸಿಕ ಕ್ರೀಡಾ ಸಾಧನೆಯಾಗಿದೆ, ಕಠಿಣ ಪರಿಶ್ರಮ, ತಂಡದ ಕೆಲಸ ಮತ್ತು ದೃಢನಿಶ್ಚಯಕ್ಕೆ ಜ್ವಲಂತ ಉದಾಹರಣೆಯಾಗಿದೆ. ಪ್ರತಿಯೊಬ್ಬ ಆಟಗಾರನೂ ಒಬ್ಬ ಚಾಂಪಿಯನ್ ಆಗಿದ್ದಾರೆ! ತಂಡದ ಮುಂದಿನ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳು. ಈ ಸಾಧನೆಯು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ” ಎಂದು ಬರೆದಿದ್ದಾರೆ.








