pm modi – Kannada News Now


State

ಬೆಂಗಳೂರು : ಮಹತ್ವದ ಬೆಳವಣಿಗೆ ಎನ್ನುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನಾಳೆ ಬೆಳಿಗ್ಗೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಪಿಎಂ ಭೇಟಿಯಾಗಲಿರುವ ಸಿಎಂ, ರಾಜ್ಯದ ನೆರೆ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಮಾತುಕತೆ ನಡೆಸಲಿದ್ದಾರೆ.

ರಾಜ್ಯದ ವಿವಿಧ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸುವ ಸಂಬಂಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ನಾಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ನಾಳೆ ಬೆಳಿಗ್ಗೆ 10.45ಕ್ಕೆ ಪಿಎಂ ಮೋದಿಯವರನ್ನು ಭೇಟಿಯಾಗರುವ ಸಿಎಂ ಯಡಿಯೂರಪ್ಪ, ನೆರೆ ಪರಿಹಾರ ಕಾಮಗಾರಿ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಬಳಿಕ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲಿರುವಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

State

ಬೆಂಗಳೂರು : ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ವೈದ್ಯರು, ನರ್ಸ್ ಗಳು ಹಗಲಿರುಳು ಎನ್ನದೇ ಕೊರೋನಾ ನಿಯಂತ್ರಣಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೋನಾ ಇಲ್ಲದಿದ್ದರೇ ಬೆಂಗಳೂರಿಗೆ ಬರುತ್ತಾ ಇದ್ದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು, ಕೊರೋನಾ ನಿಯಂತ್ರಣದ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಇಂದು ರಾಜ್ಯದ ರಾಜಧಾನಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕಾರ್ಯಕ್ರಮವನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಕೊರೋನಾ ನಿಯಂತ್ರಣಕ್ಕಾಗಿ ಸ್ಥಳೀಯವಾಗಿ ಪಿಪಿಇ ಕಿಟ್ ತಯಾರಿಸುವ ಕಾರ್ಯ ಮಾಡಲಾಗುತ್ತದೆ. 1.25 ಕೋಟಿ ಪಿಪಿಇ ಕಿಟ್ ವಿತರಿಸುವ ವ್ಯವಸ್ಥೆ ಮಾಡಿದ್ದೇವೆ. ಕೊರೋನಾ ವಾರಿಯರ್ಸ್ ರಕ್ಷಣೆಯ ಜವಾಬ್ದಾರಿ ನಮ್ಮದಾಗಿದೆ ಎಂದರು.

ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ಮಹತ್ವದ ಕೆಲಸ ಮಾಡುತ್ತಿದೆ. ವೈದ್ಯರು, ನರ್ಸ್ ಗಳು ಸೇರಿದಂತೆ ಅನೇಕರು ಕೊರೋನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡ ಕೊರೋನಾ ನಿಯಂತ್ರಣಕ್ಕಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದಾಗಿ ಕೊರೋನಾ ನಿಯಂತ್ರಣದ ಬಗ್ಗೆ ರಾಜ್ಯ ಸರ್ಕಾರ ಮಾಡುತ್ತಿರುವ ಕೆಲಸಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದರು.

State

ಬೆಂಗಳೂರು : ಕೇಂದ್ರದ ಎನ್‍ಡಿಎ ಸರ್ಕಾರ ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡಿದೆ. ಯುವಕರಿಗೆ, ರೈತರು, ಕಾರ್ಮಿಕರಿಗೆ ಅನ್ಯಾಯ ಮಾಡಿರುವುದೇ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ. ಕಳೆದ ಒಂದು ವರ್ಷದಲ್ಲಿ ಕೇಂದ್ರದ ಸಾಧನೆ ದೊಡ್ಡ ಸೊನ್ನೆ. ರೈತರು, ಯುವಕರು ಹಾಗೂ ಕಾರ್ಮಿಕರಿಗೆ ಕೇಂದ್ರದಿಂದ ಭಾರಿ ಅನ್ಯಾಯವಾಗಿದೆ. ವೈಫಲ್ಯಗಳನ್ನು ಹೇಳುತ್ತಾ ಹೋದರೆ ಗಂಟೆಗಟ್ಟಲೆ ಸಮಯವಾಗುತ್ತದೆ. ರೈತ, ಕಾರ್ಮಿಕ, ಜನ ವಿರೋಧಿ ಆಡಳಿತ ವಿರೋಧಿ ಆಡಳಿತ ನೀಡಿರುವುದೇ ಮೋದಿಯವರ ಬಹುದೊಡ್ಡ ಸಾಧನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರ ಒಂದು ವರ್ಷದ ಆಡಳಿತ ಪೂರೈಸಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ನರೇಂದ್ರ ಮೋದಿಯವರು ಎರಡನೇ ಅವಧಿಗೆ ಪ್ರಧಾನಿಯಾಗಿ ಒಂದು ವರ್ಷ ಪೂರೈಸಿದ್ದಾರೆ. ದೇಶದ ಜನತೆ ಮೋದಿಯವರ ಮೇಲೆ ವಿಶ್ವಾಸ ಇಟ್ಟು ಎರಡನೇ ಅವಧಿಗೂ ಅವರಿಗೆ ಪ್ರಧಾನಿಯಾಗುವ ಅವಕಾಶ ಮಾಡಿಕೊಟ್ಟರು ಎಂದರು.

ಮೊದಲ ಅವಧಿಯಲ್ಲಿ ಮೋದಿಯವರ ಆಡಳಿತ ಎಲ್ಲ ದೃಷ್ಟಿಕೋನದಿಂದಲೂ ಸಂಪೂರ್ಣವಾಗಿ ವೈಫಲ್ಯ ಕಂಡಿತ್ತು. ಜನರಿಗೆ ನೀಡಿದ ಯಾವುದೇ ಭರವಸೆಯನ್ನೂ ಅವರು ಈಡೇರಿಸಲಿಲ್ಲ. ಸುಳ್ಳುಗಳ ಸರಮಾಲೆಯನ್ನೇ ಅವರು ಜನರ ಮುಂದೆ ಪೋಣಿಸಿದ್ದರು. ಆರನೇ ವರ್ಷದಲ್ಲೂ ಅವರ ಸುಳ್ಳುಗಳು ಮುಂದುವರಿದಿದೆ. ಇದೇ ಅವರ ಒಂದು ವರ್ಷದ ಸಾಧನೆ ಎಂದರು.

ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೋದಿಯವರು ದೇಶದ ಜನತೆಗೆ ಪತ್ರ ಬರೆದಿದ್ದು, ತ್ರಿವಳಿ ತಲಾಖ್, ಅಯೋಧ್ಯೆ ಮತ್ತು ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದಾರೆ. ರೈತರಿಗೆ ತಿಂಗಳಿಗೆ ಆರು ಸಾವಿರದಂತೆ 72 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ ಎಂದಿದ್ದಾರೆ. ರಾಮಮಂದಿರ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೇಂದ್ರ ಸರ್ಕಾರದ ಗೆಲುವು ಅಲ್ಲ. ಅದು ಸರ್ಕಾರದ ಸಾಧನೆ ಏನಲ್ಲ. ಕಾಶ್ಮೀರ, ತ್ರಿವಳಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಕಾರ್ಯಕಾರಿ ಆದೇಶ ಹೊರಬಿದ್ದಿದೆ. ಇದೂ ದೊಡ್ಡ ಸಾಧನೆ ಏನಲ್ಲ ಎಂಬುದು ನನ್ನ ಅಭಿಪ್ರಾಯ ಎಂದರು.

ದೇಶದ ಬಡತನ, ನಿರುದ್ಯೋಗ, ರೈತರು, ಮಹಿಳೆಯರು, ಯುವಕರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದ ಪರಿಹಾರ ಏನು ಎಂಬುದರ ಬಗ್ಗೆ ಮೋದಿಯವರು ಪ್ರಸ್ತಾಪ ಮಾಡಿಲ್ಲ. ಕಪ್ಪು ಹಣ ವಾಪಸ್, ಎಲ್ಲರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂ. ಜಮೆ, ಯುವಕರಿಗೆ ಉದ್ಯೋಗ, ಜಿಡಿಪಿ ಬೆಳವಣಿಗೆ ಬಗ್ಗೆ ಪ್ರಧಾನಿಯವರೇಕೆ ಮಾತನಾಡುವುದಿಲ್ಲ ಎಂದು ಪ್ರಶ್ನೆ ಮಾಡಿದರು.

ಜಿಡಿಪಿ ಬೆಳವಣಿಗೆ ಹನ್ನೊಂದು ವರ್ಷಗಳಲ್ಲೇ ತೀರಾ ಕೆಳಮಟ್ಟಕ್ಕೆ (4.2) ಹೋಗಿದೆ. ಶ್ರೀಲಂಕಾ, ನೇಪಾಳ ಪಾಕಿಸ್ತಾನ, ಬಾಂಗ್ಲಾ ದೇಶಕ್ಕಿಂತ ಹಿಂದಕ್ಕೆ ಹೋಗಿದ್ದೇವೆ. ನನ್ನ ಪ್ರಕಾರ ಈ ವರ್ಷ ನಕಾರಾತ್ಮಕ ಬೆಳವಣಿಗೆಯಾಗಲಿದೆ. ನಿರುದ್ಯೋಗ ಪ್ರಮಾಣ ಕಳೆದ 50 ವರ್ಷಗಳಲ್ಲಿಯೇ ಈ ಮಟ್ಟದಲ್ಲಿ ಏರಿಕೆಯಾಗಿರಲಿಲ್ಲ. ಕಳೆದ ಒಂದು ವರ್ಷದಲ್ಲಿ ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದೇವೆ. ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆ ಏನು ? ಕೈಗಾರಿಕೆ ವಲಯದಲ್ಲಿ ಹೂಡಿಕೆ ಎಷ್ಟಾಗಿದೆ ? ಎಂಬುದರ ಬಗ್ಗೆ ಪ್ರಧಾನಿಯವರು ಅಂಕಿ-ಸಂಖ್ಯೆ ಸಮೇತ ವಿವರಿಸಬೇಕು ಎಂದು ಒತ್ತಾಯಿಸಿದರು.

ಒಬ್ಬ ವ್ಯಕ್ತಿಯ ನಾಯಕತ್ವ ಅಳೆಯುವುದು ಅವರ ಮಾಡಿರುವ ಸಾಧನೆಯ ಮೇಲೆ ಅಳೆಯಬೇಕೇ ಹೊರತು ಭಾವನಾತ್ಮಕ ವಿಚಾರಗಳನ್ನು ಮುಂದಿಟುಕೊಂಡು ಬೆಂಕಿ ಹಚ್ಚುವುದು ಆ ಮೂಲಕ ನಾಯಕತ್ವ ಅಳೆಯುವುದಲ್ಲ. ಪತ್ರ ಬರೆಯುವ ಬದಲು ಮೋದಿಯವರು ಪತ್ರಿಕಾಗೋಷ್ಠಿ ಕರೆದು ವಿವರಣೆ ನೀಡಬಹುದಲ್ಲ. ಅವರ ದೃಷ್ಟಿಯಲ್ಲಿ ಮಾಧ್ಯಮದವರು ಅಸ್ಪೃಶ್ಯರು. ಇದು ತಮಾಷೆಗೆ ಹೇಳುವ ಮಾತಲ್ಲ. ಎಲ್ಲದರ ಬಗ್ಗೆ ವಿವರಣೆ ಕೇಳುತ್ತಾರೆ ಎಂಬ ಕಾರಣಕ್ಕೆ ಅವರು ಮಾಧ್ಯಮ ಪತ್ರಿತಿನಿಧಿಗಳನ್ನು ಭೇಟಿಯಾಗುವುದಿಲ್ಲ ಎಂದರು.

ಕೃಷಿ ಕ್ಷೇತ್ರ ಸ್ಥಿರವಾಗಿದೆ ಎಂದು ಮೋದಿಯವರು ಹೇಳುತ್ತಾರೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆಯುವ ತೊಗರಿಯನ್ನೇ ಬೆಂಬಲ ಬೆಲೆ ನೀಡಿ ಖರೀದಿ ಮಾಡಲು ಆಗಲಿಲ್ಲ. ರೈತರಿಗೆ ವರ್ಷಕ್ಕೆ ಆರು ಸಾವಿರ ಕೊಟ್ಟಿದ್ದೇವೆ ಎನ್ನುತ್ತಾರೆ. ತಿಂಗಳಿಗೆ 500 ರೂ. ಸಾಕಾಗುವುದೇ ಅವರಿಗೆ. ಇದು ದೊಡ್ಡ ಸಾಧನೆಯೇ ? ಆದರೂ ರೈತರ ಆತ್ಮಹತ್ಯೆ ನಿಂತಿಲ್ಲವೇಕೆ ? ರೈತರ ಪರವಾಗಿದ್ದರೆ ಅವರಿಗೆ ಮಾರಕವಾಗುವಂತೆ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಿದ್ದೇಕೆ ? ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.

ಇದು ಕಾರ್ಮಿಕ ವಿರೋಧಿ ಧೋರಣೆ. ಕಾರ್ಮಿಕ ಕಾಯಿದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕರ ಗಾಯದ ಮೇಲೆ ಇದು ಬರೆ ಎಳೆದಂತೆ. ಅನ್ನ, ಆಹಾರ, ಔಷಧ ಇಲ್ಲದೆ ರೈಲು ಪ್ರಯಾಣದ ವೇಳೆ 80 ಕಾರ್ಮಿಕರು ಸಾವಿಗೀಡಾಗಿದ್ದಾರೆ. ಇದಕ್ಕೆ ಹೊಣೆ ಯಾರು ?  ಕೊರೊನಾ ಹಿನ್ನೆಲೆಯಲ್ಲಿ ಪ್ರಧಾನಿಯವರು ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್ ದೊಡ್ಡ ಜೋಕ್. ಜಿಡಿಪಿಯಲ್ಲಿ ಶೇ.1ರಷ್ಟನ್ನೂ ಸರ್ಕಾರ ಕೊರೊನಾಗೆ ಖರ್ಚು ಮಾಡಿಲ್ಲ. ಜೇಬಲ್ಲಿ ದುಡ್ಡಿದ್ದರೆ ಬಿರಿಯಾನಿ ತಿನ್ನುವುದು, ಬಿರಿಯಾಗಿ ತಿಂದರೆ ತಾನೆ ದುಡಿಯಲು ಶ್ರಮಿಕ ವರ್ಗದವರಿಗೆ ಶಕ್ತಿ ಬರುವುದು ಎಂದರು.

ಅಂತ್ಯೋದಯ ಈಗ ಆರಂಭವಾಗಿದೆ ಎನ್ನುತ್ತಾರೆ. ಇದು ಅಂತ್ಯೋದಯ ಅಲ್ಲ. ವಿನಾಶ. ಕೊರೊನಾದಿಂದ ಉಂಟಾಗಿರುವ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ವಿಫಲರಾಗಿದ್ದಾರೆ. ಕೊರೊನಾ ಪರೀಕ್ಷೆ ಪ್ರಮಾಣ ದೇಶ ಮತ್ತು ರಾಜ್ಯದಲ್ಲಿ ತೀರಾ ಕಡಿಮೆ ಇದೆ.  ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಭಾವನಾತ್ಮಕವಾಗಿ ವಿಚಾರಗಳನ್ನು ಮುಂದಿಟ್ಟುಕೊಂಡು ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ದೇಶದಲ್ಲಿ ಸೋಂಕು ಕಂಡು ಬಂದ ಕೂಡಲೇ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿರ್ಬಂಧಿಸಿದ್ದರೆ, ಟ್ರಂಪ್ ಕಾರ್ಯಕ್ರಮ ನಡೆಸದೇ ಹೋಗಿದ್ದರೆ, ತಬ್ಲಿಘ್‍ಗಳ ಸಮಾವೇಶಕ್ಕೆ ಅನುಮತಿ ಕೊಡದೇ ಹೋಗಿದ್ದರೆ ಸೋಂಕು ಈ ಪ್ರಮಾಣದಲ್ಲಿ ಹರಡುತ್ತಿರಲಿಲ್ಲ ಎಂದರು.

ಲಕ್ಷಾಂತರ ವಲಸಿಗ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜವಾಬ್ದಾರಿ ಹೊರುವವರು ಯಾರು ? ಲಾಕ್‍ಡೌನ್ ಜಾರಿಗೆ ತರುವ ಮುನ್ನ ಈ ಎಲ್ಲದರ ಬಗ್ಗೆ ಆಲೋಚಿಸಲಿಲ್ಲವೇ ? ಸಂಘ ಸಂಸ್ಥೆಗಳು, ರಾಜಕಾರಣಿಗಳು, ಸಾರ್ವಜನಿಕರು ನೊಂದವರ ನೆರವಿಗೆ ನಿಲ್ಲದೇ ಹೋಗಿದ್ದರೆ ಪರಿಸ್ಥಿತಿ ಇನ್ನಷ್ಟು ಚಿಂತಾಜನಕ ಆಗುತ್ತಿತ್ತು. ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಹತ್ತು ತಿಂಗಳಾಗಿದೆ. ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡವರಿಗೆ ಈ ವರೆಗೆ ಸೂರು ಒದಗಿಸಲಿಲ್ಲ. ಪ್ರವಾಹದಿಂದ ಒಂದು ಲಕ್ಷ ಕೋಟಿ ರೂ. ನಷ್ಟ ಸಂಭವಿಸಿದರೂ ಪ್ರಧಾನಿಯವರು ಬಂದು ಸಮೀಕ್ಷೆ ನಡೆಸಲಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಎಷ್ಟು ಅನ್ಯಾಯವಾಗಿದೆ ಎಂಬುದನ್ನು ಹೇಳುವ ಧೈರ್ಯ ಯಡಿಯೂರಪ್ಪ ಅವರಿಗೆ ಇದೆಯೇ ? ಎಂದು ಪ್ರಶ್ನೆ ಮಾಡಿದರು.

ಕೇಂದ್ರದಿಂದ ಹಣಕಾಸು ನೆರವು ಬರುವ ವಿಚಾರದಲ್ಲಿಯೂ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದ್ದರೂ ಯಡಿಯೂರಪ್ಪ ಅವರು ಕೇಳುವ ಸಾಹಸ ಮಾಡಲಿಲ್ಲ. ಬಿಜೆಪಿಯ 25 ಸಂಸದರಿದ್ದರೂ ಧ್ವನಿ ಎತ್ತರಲಿಲ್ಲ. ಕೇಂದ್ರ ಸರ್ಕಾರದ ಸಾಧನೆಗಳ ಪಟ್ಟಿಗೆ ಇದನ್ನೂ ಸೇರಿಸಿಕೊಳ್ಳುವುದೇ ? ಅಂತಾರಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ತೀವ್ರವಾಗಿ ಕುಸಿದಿದ್ದರೂ ಪೆಟ್ರೋಲ್, ಡೀಸೆಲ್ ದರ ಕಡಿಮೆಯಾಗಿಲ್ಲ. ಗ್ಯಾಸ್ ಸಿಲಿಂಡರ್ ದರವನ್ನು ಹತ್ತು ರೂಪಾಯಿ ಹೆಚ್ಚಿಸಿದಕ್ಕೇ ಯುಪಿಎ ಸರ್ಕಾರದ ಅವಧಿಯಲ್ಲಿ ಬಿಜೆಪಿಯವರು ಭಾರಿ ಪ್ರತಿಭಟನೆ ನಡೆಸಿದ್ದರು. ರಸ್ತೆಗಳಲ್ಲಿ ಒಲೆ ಹಚ್ಚಿ ವಿರೋಧ ಮಾಡಿದ್ದರು. ಬೀದಿಗಿಳಿಯುವುದು ಬಿಟ್ಟರೆ ಜನರ ಕಷ್ಟ ನಿವಾರಣೆ ಮಾಡುವುದು ಹೇಗೆ ಎಂಬುದೇ ಬಿಜೆಪಿಯವರಿಗೆ ತಿಳಿದಿಲ್ಲ. ಈಗ ಯಡಿಯೂರಪ್ಪ ಅವರು ಸಿಲಿಂಡರ್ ಅನ್ನು ತಲೆಯ ಮೇಲೆ ಹೊತ್ತು ತಿರುಗುವರೇ ? ಎಂದು ಪ್ರಶ್ನಿಸಿದರು.

ವಿಧಾನಸಭೆಯ ಮುಖ್ಯ ಸಚೇತಕ ಡಾ. ಅಜಯಸಿಂಗ್, ಮಾಜಿ ಸಚೇತಕ ಅಶೋಕ ಪಟ್ಟಣ, ಶಾಸಕರಾದ ಪ್ರಕಾಶ್ ರಾಥೋಡ್, ಬೈರತಿ ಸುರೇಶ್, ನಸೀರ್ ಅಹಮದ್, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ವಿ.ಆರ್. ಸುದರ್ಶನ್, ಮಾಜಿ ಮೇಯರ್ ರಾಮಚಂದ್ರಪ್ಪ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

State

ನವದೆಹಲಿ : ಮೇ.31ರಂದು ದೇಶಾದ್ಯಂತ್ಯ ಕೊರೋನಾ ವೈರಸ್ ನಿಯಂತ್ರಣ ಸಂಬಂಧ ಜಾರಿಗೊಳಿಸಲಾಗಿದ್ದಂತ ಲಾಕ್ ಡೌನ್ 4.0 ಮುಕ್ತಾಯಗೊಳ್ಳಲಿದೆ. ಹೀಗಾಗಿ ಮೇ.31ರಂದು ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೋ ಕಾನ್ಫೆರೆನ್ಸ್ ಮೂಲಕ ಸಭೆಯನ್ನು ನಡೆಸಿ ಮಾತನಕತೆ ನಡೆಸಲಿದ್ದಾರೆ. ಈ ಮೂಲಕ ಲಾಕ್ ಡೌನ್ ವಿಸ್ತರಣೆ, ಮುಕ್ತಾಯಗೊಳಿಸುವ ಬಗ್ಗೆ ಚರ್ಚೆಯನ್ನು ನಡೆಸಲಿದ್ದಾರೆ.

ಮೇ.31ರಂದು ಲಾಕ್ ಡೌನ್ 4.0 ಅಂತ್ಯಗೊಳ್ಳಲಿದೆ. ಕೊರೋನಾ ನಿಯಂತ್ರಣ ಮಾತ್ರ ದೇಶದಲ್ಲಿ ಹತೋಟಿಗೆ ಬಂದಿಲ್ಲ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೇ.31ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ. ಇಂತಹ ಸಭೆಯಲ್ಲಿ ಲಾಕ್ ಡೌನ್ ವಿಸ್ತರಣೆಯ ಬಗ್ಗೆ, ಕೊರೋನಾ ನಿಯಂತ್ರಣ ಕ್ರಮಗಳ ಬಗ್ಗೆಯ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಲಿದ್ದಾರೆ.

India

ನವದೆಹಲಿ : ಲಾಕ್ ಡೌನ್ 4.0 ಜಾರಿಯಾದ ನಂತ್ರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೊದಲ ಕೇಂದ್ರ ಸಚಿವ ಸಂಪುಟ ಸಭೆ ನಾಳೆ ನಡೆಯಲಿದೆ. ಈ ಸಭೆಯಲ್ಲಿ, ಲಾಕ್ ಡೌನ್ ಸಡಿಲಿಕೆ, ಕೊರೋನಾ ಸೋಂಕು ದೇಶದಲ್ಲಿ ನಿಯಂತ್ರಣ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ.

ಕೇಂದ್ರ ಸಚಿವರು, ಅಧಿಕಾರಿಗಳನ್ನು ಒಳಗೊಂಡಂತ ಕೇಂದ್ರ ಸಚಿವ ಸಂಪುಟ ಸಭೆ ನಾಳೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ, ಲಾಕ್ ಡೌನ್ 4.0 ನಂತ್ರ ದೇಶದಲ್ಲಿ ಕೊರೋನಾ ನಿಯಂತ್ರಣದ ಬಗ್ಗೆ, ಲಾಕ್ ಡೌನ್ ಸಡಿಲಗೊಳಿಸಿದ ನಂತ್ರ ಕೊರೋನಾ ಕಂಟ್ರೋಲ್ ಹೇಗೆ ಮಾಡಬೇಕು ಎನ್ನುವ ಕುರಿತಂತೆ ಚರ್ಚೆ ನಡೆಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾಳೆಯವರೆಗೆ ಕಾಯಬೇಕಿದೆ.

State

ನವದೆಹಲಿ : ಲಾಕ್ ಡೌನ್ 3.0 ಮುಂದುವರೆಯಲ್ಪಟ್ಟ ನಂತ್ರ, ಲಾಕ್ ಡೌನ್ ನಡುವೆಯೂ ಸಡಿಲಿಕೆ ಘೋಷಣೆಯಾದ ನಂತ್ರ, ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿತ್ತು. ಈ ಸಂಬಂಧ ನಾಳೆಯ ಮಧ್ಯಾಹ್ನ 3 ಗಂಟೆಗೆ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು 5ನೇ ಬಾರಿ ವೀಡಿಯೋ ಸಂವಾದ ನಡೆಸಲಿದ್ದಾರೆ. ಅಲ್ಲದೇ ಈಗಾಗಲೇ ಸಡಿಲಗೊಂಡಿರುವಂತ ಲಾಕ್ ಡೌನ್ ಅನ್ನು ಮತ್ತೆ ಬಿಗಿ ಗೊಳಿಸುವ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಮಧ್ಯಾಹ್ನ 3 ಗಂಟೆಗೆ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಸಂವಾದ ನಡೆಸಲಿದ್ದಾರೆ. ಈ ಸಭೆಯಲ್ಲಿ ಲಾಕ್ ಡೌನ್ ಕುರಿತಂತೆ ಆಯಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ 5ನೇ ವೀಡಿಯೋ ಸಂವಾದ ಇದಾಗಿದ್ದು, ಲಾಕ್ ಡೌನ್ ಸಡಿಲಿಕೆಯನ್ನು ಬಿಗಿ ಗೊಳಿಸುವ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಅಂದಹಾಗೇ ಲಾಕ್ ಡೌನ್ ಸಡಿಲಗೊಳಿಸಿದ ಬಳಿಕ ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿತ್ತು. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯ ಕಂಡಿತ್ತು. ಕಳೆದ ನಿನ್ನೆ 41 ಜನರಿಗೊ ಕೊರೋನಾ ಕೇಸ್ ಪತ್ತೆಯಾಗಿದ್ದರೇ, ಇಂದು 53 ಜನರಿಗೆ ಕೊರೋನಾ ಕೇಸ್ ಪತ್ತೆಯಾಗಿತ್ತು. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 847ಕ್ಕೆ ಏರಿಕೆಯಾಗಿತ್ತು.

State

ನವದೆಹಲಿ : ಭಾರತ ಸೇರಿದಂತೆ ಇತರೇ ರಾಷ್ಟ್ರಗಳು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಭಾರತ ವಿಶ್ವದ ಹಿತದಲ್ಲಿ ಕೆಲಸ ಮಾಡುತ್ತಿದ್ದು, ಸಮಯದ ಜೊತೆಗೆ ನಾವು ಬದಲಾಗಬೇಕಿದೆ. ಈ ಸಂಕಷ್ಟದ ದಿನಗಳಿಂದ ಆದಷ್ಟು ಬೇಗ ಹೊರಬರುವ ವಿಶ್ವಾಸವಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಎಲ್ಲರೂ ಸಹಾಯ ಮಾಡಿ ಎಂದು ದೇಶದ ಜನತೆಗೆ ಪ್ರಧಾನಿ ಮೋದಿ ಕರೆನೀಡಿದ್ದಾರೆ. 

ಬುದ್ದ ಪೂರ್ಣಿಮೆ ಹಿನ್ನೆಲೆಯಲ್ಲಿ  ದೇಶವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ ಭಗವಾನ್ ಬುದ್ದನ ಅನುಯಾಯಿಗಳಿಗೆ ಶುಭಕೋರಿದರು.  ಸಮಯದ ಜೊತೆಗೆ ನಾವು ಬದಲಾಗಬೇಕೆಂದು ಪ್ರಧಾನಿ ಕರೆನೀಡಿದರು. ದೇಶದ ಜನತೆಯನ್ನು ಭೇಟಿಯಾಗುವುದಕ್ಕೆ ಪರಿಸ್ಥಿತಿ ಅವಕಾಶ ನೀಡುತ್ತಿಲ್ಲ.  ವಿಶ್ವ ಕೊರೊನಾದಂತಹ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. 2015-18ರಲ್ಲಿ ದೆಹಲಿ, ಕೊಲಂಬೋ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿತ್ತು. ಈ ಸಮಯದಲ್ಲಿ ಬುದ್ಧನ ವಿಚಾರಗಳು ಈ ಸಂಕಷ್ಟದಲ್ಲಿ ಪ್ರಸ್ತುತವಾಗಿದೆ.  ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವವರ ಅಗತ್ಯವಿದೆ. ಬುದ್ದನ ಅನುಯಾಯಿಗಳು ಮಾನವೀಯತೆಯಿಂದ ಸೇವೆ ಮಾಡುವವರು. ಸೇವೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ನನ್ನ ಅಭಿನಂದನೆ. ಈ ಸಂಕಷ್ಟದ ಪರಿಸ್ಥಿತಿಯನ್ನು  ನಾವು ಸಾಂಘಿಕವಾಗಿ ಎದುರಿಸುತ್ತಿದ್ದೇವೆ. ಭಾರತದ ಸಂಸ್ಕೃತಿ ಯಾವಾಗಲೂ ಹೊಸ ದಾರಿ ತೋರಿಸಿದೆ. ಸಮಯ ಬದಲಾಯ್ತು, ಸ್ಥಿತಿ ಬದಲಾಯ್ತು, ಸಾಮಾಜಿಕ ವ್ಯವಸ್ಥೆ ಬದಲಾಯ್ತು. ಆದರೆ, ಬುದ್ದ ಯಾವುದೋ ಒಂದು ಪರಿಸ್ಥಿತಿಗೆ ಸೀಮಿತವಾಗಿಲ್ಲ, ಬುದ್ಧನ ಸಂದೇಶ ನಮ್ಮ ಜೀವನದಲ್ಲಿ ನಿರಂತರವಾಗಿ ಮುಂದುವರೆದಿದೆ. ಭಾರತ ವಿಶ್ವದ ಹಿತದಲ್ಲಿ ಕೆಲಸ ಮಾಡುತ್ತಿದೆ. ಭಾರತದ ಸಂಸ್ಕೃತಿ ಯಾವಾಗಲೂ ವಿಶ್ವಕ್ಕೆ ಮಾರ್ಗದರ್ಶಿ.  ನಮ್ಮ ಕೆಲಸ ಸೇವೆಯ ಮನೋಭಾವದಿಂದ ಕೂಡಿರಬೇಕು. ಎಲ್ಲರೂ ಸೇರಿ ಹೋರಾಡಿದರೆ ಸಂಕಷ್ಟದಿಂದ ಪಾರಾಗಬಹುದು. ಬುದ್ದ ಹೆಸರು ಮಾತ್ರವಲ್ಲ, ಪವಿತ್ರ ವಿಚಾರ ಎಂದು ಹೇಳಿದರು.

ಇನ್ನು ಕಠಿಣ ಸ್ಥಿತಿಯಲ್ಲೂ ಜಯ ಗಳಿಸಬೇಕಾಗಿದೆ. ಸುಸ್ತಾಗಿ ನಿಲ್ಲುವುದರಿಂದ ಅದು  ಬುದ್ದ ನಾಲ್ಕು ಸತ್ಯಗಳನ್ನು ಹೇಳಿದ್ದಾರೆ.  ದಯೆ, ಕರುಣೆ, ಸುಖ-ದುಃಖ ಅವುಗಳನ್ನು ಹೇಗೆದೆಯೋ ಅದನ್ನು ಹಾಗೇ ಪಾಲಿಸಬೇಕೆಂದು ಬುದ್ದ ಹೇಳಿದ್ದಾರೆ.  ಕೊರೊನಾದಿಂದ ವಿಶ್ವದಲ್ಲಿ ಹತಾಶೆ ಮೂಡಿದೆ. ಹೀಗಾಗಿ ಎಷ್ಟು ಸಾಧ್ಯವಾಗುತ್ತದೆಯೇ ಅಷ್ಟು ಸಹಾಯ ಮಾಡಿ ಎಂದು ಪ್ರಧಾನಿ ಕರೆನೀಡಿದರು. ಭಾರತದ ಪ್ರಗತಿ ಯಾವಾಗಲೂ ಜಾಗತಿಕ ಪ್ರಗತಿಗೆ ಸಹಕಾರಿಯಾಗಿದೆ. ಈ ಸಂದರ್ಭದಲ್ಲಿ ಕೆಲವರು 24 ಗಂಟೆ ಕೆಲಸ ಮಾಡುತ್ತಿದ್ದಾರೆ.  ದೇಶದ ಜನರ ಕಷ್ಟ ಕಡಿಮೆ ಮಾಡಲು ಪ್ರಯತ್ನಿಸಬೇಕೆಂದು ಪ್ರಧಾನಿ ದೇಶವಾಸಿಗಳಿಗೆ ಕರೆನೀಡಿದ್ದಾರೆ….

 

 

World

ವಾಷಿಂಗ್ಟನ್ : ಅಚ್ಚರಿಯ ಬೆಳವಣಿಗೆಯೆಂಬಂತೆ ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸ ವೈಟ್ ಹೌಸ್, ಪ್ರಧಾನಿ ಮೋದಿ ಅವರ ಟ್ವೀಟರ್ ಖಾತೆಯನ್ನು ಅನ್ ಫಾಲೋ ಮಾಡಿದೆ. ಭಾರತ ರವಾನಿಸಿದ ಹೈಡ್ರಾಕ್ಸಿಕ್ಲೋರಿಕ್ವಿನ್ ಔಷಧಿ ಅಮೆರಿಕದಲ್ಲಿ ಕೊರೊನಾ ಸೋಂಕಿತರ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ, ಇದರಿಂದ ಸೈಡ್ ಎಫೆಕ್ಟ್ ಉಂಟಾಗಿದೆ ಎಂದು ಹೇಳಲಾಗಿದ್ದು, ಇದರಿಂದ ಮುನಿಸಿಕೊಂಡ ವೈಟ್ ಹೌಸ್ ಪ್ರಧಾನಿ ಮೋದಿ ಖಾತೆಯನ್ನು ಅನ್ ಫಾಲೋ ಮಾಡಿರಬಹುದೆಂದು ಹೇಳಲಾಗಿದೆ. 

ಕಳೆದ ಮೂರು ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ, ಕಚೇರಿಯ ಖಾತೆ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಟ್ವಿಟ್ಟರ್ ಖಾತೆಯನ್ನು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ವೈಟ್ ಹೌಸ್ ಫಾಲೋ ಮಾಡಿತ್ತು. ಆದರೆ  ಏಕಾಏಕಿ ಟ್ವಿಟ್ಟರ್ ನಲ್ಲಿ ಮೋದಿ ಮತ್ತು ಕೋವಿಂದ್ ಅವರ ಖಾತೆಯನ್ನು ಅನ್ ಫಾಲೋ ಮಾಡಿದೆ.  ಇದರೊಂದಿಗೆ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು ವಾಷಿಂಗ್ಟನ್ ನಲ್ಲಿರುವ ಭಾರತ ರಾಯಭಾರ ಕಚೇರಿಯನ್ನು ಅನ್ ಫಾಲೋ ಮಾಡಿದೆ. ಪ್ರಸ್ತುತ 13 ಖಾತೆಗಳನ್ನು ವೈಟ್ ಹೌಸ್ ಫಾಲೋ ಮಾಡುತ್ತಿದ್ದು, 2.2 ಕೋಟಿ ಜನ ಈ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ.

ಮಾರಣಾಂತಿಕ ಕೊರೊನಾ ವೈರಸ್ ಗೆ ಹೈಡ್ರಾಕ್ಸಿಕ್ಲೋರಿಕ್ವಿನ್ ಮಾತ್ರ ಪರಿಣಾಮಕಾರಿ ಎಂದೇ ಭಾವಿಸಲಾಗಿತ್ತು. ಅದರಂತೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿ ಮೇರೆಗೆ ಭಾರತ ಹೈಡ್ರಾಕ್ಸಿಕ್ಲೋರಿಕ್ವಿನ್ ಔಷಧಿಯನ್ನು ರಫ್ತು ಮಾಡಿತ್ತು. ಈ ವೇಳೆ, ಭಾರತದ ಸಹಾಯ ಹಾಗೂ ಪ್ರಧಾನಿ ಮೋದಿ ಅವರನ್ನು ಟ್ರಂಪ್ ಆತ್ಮೀಯ ಗೆಳೆಯ ಎಂದೇ ಕೊಂಡಾಡಿ, ಭಾರತವನ್ನು ಶ್ಲಾಘಿಸಿದ್ದರು. ಆದರೆ, ಈ ಔಷಧಿ ಅಮೆರಿಕಾದಲ್ಲಿ ಕೊರೊನಾ ಪೀಡಿತರಿಗೆ ಅಷ್ಟಾಗಿ ಪರಿಣಾಮ ಬೀರಿಲ್ಲ. ಈ ಹಿನ್ನಲೆಯಲ್ಲಿ  ವೈಟ್ ಹೌಸ್ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಪಿಎಂಓ ಖಾತೆಯನ್ನು ಅನ್ ಫಾಲೋ ಮಾಡಿತ್ತು…

 

India

ನವದೆಹಲಿ : ಯಾವ ರಾಜ್ಯಗಳಲ್ಲಿ ಮಾರಕ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗಿದೆಯೇ ಅವರು ತಾವು ತಪ್ಪಿತಸ್ಥರೆಂದು ಭಾವಿಸಬೇಡಿ. ಕೊರೊನಾ ಸೋಂಕು ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ನಿಮ್ಮ ಜೊತೆಗಿದೆ ಎಂದು ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಸಿಎಂಗಳಿಗೆ ಅಭಯ ನೀಡಿದ್ದಾರೆ.

ಇಂದು ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಮೋದಿ, ಲಾಕ್ ಡೌನ್ ಮುಂದುವರೆಸುವಂತೆ ವಿವಿಧ ರಾಜ್ಯಗಳಿಂದ ಮನವಿ ಮಾಡಲಾಗಿದೆ. ದೇಶದಲ್ಲಿ 300 ಜಿಲ್ಲೆಗಳು ಕೊರೊನಾದಿಂದ ಮುಕ್ತವಾಗಿವೆ.ಈ 300 ಜಿಲ್ಲೆಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ಸಿಗಲಿದೆ. ದೇಶದಲ್ಲಿ 127 ಜಿಲ್ಲೆಗಳು ರೆಡ್ ಝೋನ್ ನಲ್ಲಿವೆ. ಈ ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಂದ ಸಡಿಲಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಕೊರೊನಾ ಸೋಂಕಿತರನ್ನು ಯಾರೂ ತಪ್ಪಿತಸ್ಥರೆಂದು ಭಾವಿಸಬಾರದು. ದೇಶದಲ್ಲಿ 297 ಜಿಲ್ಲೆಗಳಲ್ಲಿ 5 ಪ್ರಕರಣಗಳಿಗಿಂತ ಹೆಚ್ಚು ಪ್ರಕರಣಗಳಿವೆ. ನಿಮ್ಮ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಿದ್ದರೆ ತಪ್ಪಿತಸ್ಥರೆಂದು ಭಾವಿಸಬೇಡಿ ಎಂದು ಪ್ರಧಾನಿ ಮೋದಿ ಸಿಎಂಗಳಿಗೆ ಧೈರ್ಯ ತುಂಬಿದರು.

ಇನ್ನು ದೊಡ್ಡ ದೊಡ್ಡ ನಗರಗಳಲ್ಲೂ ರೆಡ್ ಝೋನ್ ಗಳಿವೆ, ಈ ದೊಡ್ಡ ನಗರಗಳಲ್ಲಿರುವ ಗ್ರೀನ್ ಜೋನ್  ಗಳನ್ನು ರಕ್ಷಿಸಬೇಕಿದೆ. ರಾಜ್ಯಗಳ ಸಿಎಂ ಆದ ನೀವು ರಾಜ್ಯದ ನೈಜತನೆ ಬಗ್ಗೆ ಚೆನ್ನಾಗಿ ತಿಳಿದಿದ್ದೀರಿ. ರಾಜ್ಯಗಳಲ್ಲಿ ಕೊರೊನಾ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಬಹುದಾಗಿದೆ. ಕೊರೊನಾ ಸೋಂಕು ಹೇಗೆ ಹರಡುತ್ತಿದೆ. ಹೊರಗಿನಿಂದ ವ್ಯಕ್ತಿಗಳು ಹೇಗೆ ಬರುತ್ತಿದ್ದಾರೆ. ಹೆಚ್ಚಿನ ಸಂದರ್ಭದಲ್ಲಿ ಅವರು ಹೊರಗಿನಿಂದ ಬಂದ ಬಳಿಕ ಯಾರಿಗೂ ತಿಳಿಸುತ್ತಿಲ್ಲ, ಮಾನಸಿಕ ಒತ್ತಡಲೂ ಇದೆ. ಹೀಗಾಗಿ ಕೇಂದ್ರ ನಿಮಗೆ ಸಹಾಯ ಮಾಡಲು ಬದ್ಧವಾಗಿದೆ. ಕೊರೊನೊ ವಿರುದ್ಧದ ಹೋರಾಟದಲ್ಲಿ ಮೃದುವಾಗಬಾರದು. ಹೆಚ್ಚು ಮೃದುತ್ವ ತೋರಿಸಿದರೆ ನಾವು ಆ ಪ್ರದೇಶಕ್ಕೆ ಅಪಪ್ರಚಾರ ಮಾಡಿದಂತೆ ಆಗುತ್ತದೆ. ನಾನು ಮತ್ತೊಮ್ಮೆ ಎಲ್ಲಗೂ ನಮಮ್ರತೆಯಿಂದ ಹೇಳುತ್ತೇನೆ, ಪ್ರಕರಣ ಹೆಚ್ಚಾಗಿದ್ದರೆ ತಪ್ಪಿತಸ್ಥರೆಂದು ನಾವು ನೋಡುವುದಿಲ್ಲ. ರಾಜ್ಯದಲ್ಲಿ ಪ್ರಕರಣ ಕಡಿಮೆಯಾಗಿದ್ದರೆ ನಿಮ್ಮ ರಾಜ್ಯ ಶ್ರೇಷ್ಟ ಎಂದು ಸಹ ನೋಡುವುದಿಲ್ಲ. ಸಂಖ್ಯೆ ಹೆಚ್ಚಾಗಿದರೆ ಭಯಪಡಬೇಡಿ, ಅದನ್ನು ನಿಭಾಯಿಸಲು ನಾವು ನಿಮ್ಮ ಜೊತೆಗಿದ್ದೇವೆಂದು ಪ್ರಧಾನಿ ತಿಳಿಸಿದರು.

ಮಾರಕ ಕೊರೊನಾ ವೈರಸ್ ನಮ್ಮ ಜೀವನದ ಒಂದು ಭಾಗವಾಗಿದೆ. ಕೊರೊನಾ ಒಡ್ಡುವ ಬೆದರಿಕೆಗೆ ರಾಜೀಯಾಗಬಾರದು. ಸಾಮಾಜಿಕ ಅಂತರವನ್ನು ಮಂತ್ರವಾಗಿಸಿಕೊಳ್ಳಬೇಕು. ಎಲ್ಲರಿಗೂ ಇದು ಜೀವನ ಪಾಠವಾಗಬೇಕು. ಅದೇ ರೀಕಿ ಮಾಸ್ತ್ ಧರಿಸುವುದು ನಮ್ಮ ಜೀವನದ ಭಾಗವಾಗಬೇಕಿದೆ. ಇದರೊಂದಿಗೆ ಆರ್ಥಿಕ ಅಂಶಗಳ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಈ ಮೂಲಕ ನಾವು ಆರ್ಥಿಕ ಚಟುವಟಿಕೆಗಳನ್ನು ಬಲಪಡಿಸಬೇಕು. ಇದರ ಜೊತೆಜೊತೆಗೆ ವೈರಸ್ ನಿಯಂತ್ರಣಕ್ಕೂ ನಾವು ಒತ್ತು ನೀಡಬೇಕಿದೆ ಎಂದು ಪ್ರಧಾನಿ ಕಿವಮಾತು ಹೇಳಿದರು…

India

ನವದೆಹಲಿ : ದೇಶಾದ್ಯಂತ ಮಾರಕ ಕೊರೊನಾ ವೈರಸ್ ತಡೆಗೆ ಮೇ.3 ಬಳಿಕ ಮತ್ತೆ ಲಾಕ್ ಡೌನ್ ವಿಸ್ತರಿಸುವುದು ಸೂಕ್ತ ಎಂಬುದಾಗಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ನರೇದ್ರ ಮೋದಿಗೆ ಸಲಹೆ ನೀಡಿದ್ದಾರೆ. ಲಾಕ್ ಡೌನ್ ಮುಂದುವರೆದರೆ ರಾಜ್ಯಗಳಲ್ಲಿ ಕೊರೊನಾ ಪರಿಸ್ಥಿತಿ ಸುಧಾರಿಸಲಿದೆ. ರೆಡ್, ಆರೆಂಜ್, ಗ್ರೀನ್ ಝೋನ್ ಗಳಲ್ಲಿ ಪ್ರತ್ಯೇಕವಾಗಿ ಕೆಲವೊಂದು ನಿಯಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆದಿದೆ. 

ಈ ಕುರಿತಂತೆ ಪ್ರಧಾನಿ ಮೋದಿ, ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಹಾಗೂ ಅಧಿಕಾರಿಗಳ ತಂಡ  ಇಂದು 20 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಮೇ 3 ರಂದು ದೇಶಾದ್ಯಂತ ಲಾಕ್ ಡೌನ್ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ವಿವಿಧ ರಾಜ್ಯಗಳಲ್ಲಿನ ಕೊರೊನಾ ಪರಿಸ್ಥಿತಿ ಕುರಿತಂತೆ ಆಯಾ ಮುಖ್ಯಮಂತ್ರಿಗಳಿಂದ ಮಾಹಿತಿ ಸಂಗ್ರಹಿಸಿದರು. ಈ ವೇಳೆ,ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ಮೇ.7 ರವರೆಗೆ ಲಾಕ್ ಡೌನ್ ವಿಸ್ತರಿಸುವಂತೆ ಸಲಹೆ ನೀಡಿದರು. ಇನ್ನು ಈಗಾಗಲೇ ಮಹಾರಾಷ್ಟ್ರ, ದೆಹಲಿ, ಉತ್ತರಪ್ರದೇಶ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮೇ.3 ರಬಳಿಕವೂ ಲಾಕ್ ಡೌನ್ ವಿಸ್ತರಣೆ ಮಾಡಿದರೆ ಒಳಿತು ಎಂಬ ಅಭಿಪ್ರಾಯವನ್ನು ಆಯಾ ರಾಜ್ಯಗಳು ವ್ಯಕ್ತಪಡಿಸಿವೆ.

ಇನ್ನು ಮೇಘಾಲಯ ಸಿಎಂ, ಕೊರೊನಾ ಹಿನ್ನಲೆಯಲ್ಲಿ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳು ಬಂದ್ ಆಗಿವೆ. ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ಕೊಡಿ, ಅಂತರರಾಜ್ಯ ಸಾರಿಗೆಗೆ ಅವಕಾಶ ನೀಡುವುದಿಲ್ಲ ಎಂದು ಮನವಿ ಮಾಡಿದರಲ್ಲದೇ, ಈ ವಿನಾಯಿತಿ ನೀಡಿ  ಮೇ.3 ರ ಬಳಿಕವೂ ಲಾಕ್ ಡೌನ್ ಮುಂದುವರೆಸಿ ಎಂದು ಪ್ರಧಾನಿ ಬಳಿ ತಮ್ಮ ಅಬಿಪ್ರಾಯ ವ್ಯಕ್ತಪಡಿಸಿದರು. ಇನ್ನು ಪುದುಚೆರಿ ಸಿಎಂ ಮಾತನಾಡಿ ತಮ್ಮಲ್ಲಿ ಆರ್ಥಿಕತೆ ಕುಸಿದಿದ್ದು, ಹೆಚ್ಚಿನ ನೆರವು ನೀಡುವಂತೆ ಪ್ರಧಾನಿ ಬಳಿ ಮನವಿ ಮಾಡಿದರು. ಇದೇ ವೇಳೆ, ಪಿಪಿಇ ಕಿಟ್ ಗಳ ಕೊರತೆಯೂ ಇದ್ದು, ಪೂರೈಸುವಂತೆಯೂ ಪ್ರಧಾನಿಗೆ ಬೇಡಿಕೆ ಇಟ್ಟರು. ಇನ್ನು ಮಿಜೋರಾಂ ಸಿಎಂ ಕೂಡ ಲಾಕ್ ಡೌನ್ ಮುಂದುವರೆಸುವಂತೆ ಸಲಹೆ ನೀಡಿದರು. ಇದೇ ವೇಳೆ, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಆರ್ಥಿಕ ಚಟುವಟಿಕೆಗಳಿಗೆ ವಿನಾಯಿತಿ ನೀಡಿ, ಆರ್ಥಿಕತೆ ಚೇತರಿಕೆಗೆ ಪೂರಕವಾಗುವಂತಹ ಯೋಜನೆಗಳನ್ನು ರೂಪಿಸುವಂತೆ  ಮನವಿ ಮಾಡಿದರು. ಇನ್ನು ಇದೇ ವೇಳೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾತನಾಡಿ ತಮ್ಮ ರಾಜ್ಯದಲ್ಲಿ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರನ್ನು ಸಂಕಷ್ಟಕ್ಕೆ ನೆರವಾಗುತ್ತೇವೆ. ಅದರಂತೆ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ತಮ್ಮ ರಾಜ್ಯದ ವಲಸೆ ಕಾರ್ಮಿಕರನ್ನು ರಾಜ್ಯಕ್ಕೆ ವಾಪಾಸ್ ಕರೆತರುತ್ತೇವೆ ಎಂದು ತಿಳಿಸಿದರು.

ಇನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿ ತಮ್ಮ ರಾಜ್ಯದಲ್ಲಿ ಕೊರೊನಾ ಸೋಂಕನ್ನು ಪೊಲೀಯೋದಂತೆ ಪರಿಗಣಿಸಿದ್ದೇವೆ. ರಾಜ್ಯದಲ್ಲಿ ಮನೆಮನೆಗೆ ತೆರಳಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಪೊಲೀಯೋ ಅಭಿಯಾನದಂತೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.  ಇನ್ನು ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್ ಮಾತನಾಡಿ, ಸದ್ಯಕ್ಕೆ ತಮ್ಮ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವ ಪರಿಸ್ಥಿತಿಯಿದೆ. ಆದರೂ ಮೇ.3 ರ ಬಳಿಕ ಲಾಕ್ ಡೌನ್ ಮುಂದುವರೆಸುವಂತೆ ಪ್ರಧಾನಿಗೆ ಸಲಹೆ ನೀಡಿದರು.

ಇಂದಿನ ವಿಡಿಯೋ ಕಾನ್ಫರೆನ್ಸ್ ವೇಳೆ, ಲಾಕ್ ಡೌನ್ ಬಳಿಕ ರಾಜ್ಯಗಳಲ್ಲಿ ಎದುರಾಗಲಿರುವ ಸಮಸ್ಯೆಗಳ ಕುರಿತಂತೆಯೂ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದು, ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಮನವಿ ಇಟ್ಟಿದ್ದಾರೆ. ಇದೇ ವೇಳೆ, ವಿವಿಧ ರಾಜ್ಯಗಳಲ್ಲಿ ವಲಸೆ ಕಾರ್ಮಿಕರ ಸಮಸ್ಯೆ ಎದುರಾಗಿದ್ದು, ಅವರ ಸುರಕ್ಷತೆ ಕುರಿತಂತೆಯೂ ಪ್ರಸ್ತಾಪಿಸಲಾಯಿತು. ಇನ್ನು ಇದೇ ವೇಳೆ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಎಲ್ಲ ರಾಜ್ಯಗಳ ಸಿಎಂ ಗಳಿಗೆ ಕೆಲವು ಸೂಚನೆಗಳನ್ನು ನೀಡಿದರು…