ಬೆಂಗಳೂರು : ಇಡಿ, ಐಟಿ, ಸಿಬಿಐ, ವೋಟಿಂಗ್ ಮಿಷನ್ ಈ 4 ಬಿಜೆಪಿಯವರಿಗೆ ದೊಡ್ಡ ಅಸ್ತ್ರವಾಗಿದೆ. ಇವಿಎಂ ಯಂತ್ರದಿಂದ ಮೋದಿ ಗೆಲ್ತಿರೋದು, ಮೊದಲು ಇವಿಎಂ ಮಿಷನ್ ವಿರುದ್ಧ ವಿರೋಧ ಪಕ್ಷಗಳು ಹೋರಾಟ ಮಾಡಬೇಕು ಎಂದು ಜೆಡಿಎಸ್ ಉಚ್ಚಾಟಿತ ನಾಯಕ ಸಿ.ಎಂ ಇಬ್ರಾಹಿಂ ಇಂಡಿಯಾ ಕೂಟಕ್ಕೆ ಸಲಹೆ ನೀಡಿದ್ದಾರೆ.
ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ರೀಲ್ ಬಿಟ್ಟರೇ ಜನ ಒಪ್ಪಲ್ಲ: ಡಿ.ಕೆ.ಸುರೇಶ್ ವಾಗ್ದಾಳಿ
ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿಪಕ್ಷಗಳು ಬ್ಯಾಲೆಟ್ ಪೇಪರ್ ಬೇಕು ಎಂದು ಹೋರಾಟ ಮಾಡಬೇಕು. ಇಲ್ಲದೇ ಹೋದರೆ ಮನೆಯಲ್ಲಿ ಇವರೇ ಮಿಷನ್ ಒತ್ತುತ್ತ ಕೂತುಕೊಳ್ಳಬೇಕು. ಪ್ರಪಂಚದ ಯಾವುದೇ ದೇಶದಲ್ಲಿ ಇವಿಎಂ ಮಿಷನ್ ಇಲ್ಲ. ಎಲ್ಲಾ ಕಡೆ ಬ್ಯಾಲೆಟ್ ಪೇಪರ್ ಇದೆ. ವಿಪಕ್ಷಗಳು ಸೀಟು ಕಿತ್ತಾಟ ಬಿಟ್ಟು ಇವಿಎಂ ಮಿಷನ್ ಬೇಡ ಎಂದು ಬೀದಿಗಿಳಿದು ಹೋರಾಟ ಮಾಡಬೇಕು ಎಂದರು.
ಇವಿಎಂ ಮಿಷನ್ ಇದ್ದರೆ ಚುನಾವಣೆ ಎದುರಿಸದೇ ಬಾಯ್ಕಾಟ್ ಮಾಡಬೇಕು. ಆಗ ದೇಶದಾದ್ಯಂತ ಸುದ್ದಿ ಆಗುತ್ತದೆ. ಚುನಾವಣಾ ಆಯೋಗಕ್ಕೆ ಏಕೆ ಇವಿಎಂ ಮೇಲೆ ಅಷ್ಟು ಪ್ರೀತಿ? ಚುನಾವಣಾ ಆಯುಕ್ತರು ಯಾಕೆ ರಾಜೀನಾಮೆ ಕೊಟ್ಟರು ಎಂದು ಅವರು ಪ್ರಶ್ನಿಸಿದ್ದಾರೆ.ಮೋದಿ ಅಹಂ ಬ್ರಹ್ಮಾಸ್ಮಿ ಆಗಿದ್ದಾರೆ. ಆರ್‍ಎಸ್‍ಎಸ್‍ನ್ನು ಮೀರಿ ಅವರು ಹೋಗ್ತಿದ್ದಾರೆ. ಹೀಗಾಗಿಯೇ ಆರ್‍ಎಸ್‍ಎಸ್‍ನವರು ಚುನಾವಣಾ ಬಾಂಡ್ ವಿರುದ್ಧವಾಗಿ ಮಾತಾಡ್ತಿದ್ದಾರೆ. ಆರ್‍ಎಸ್‍ಎಸ್‍ನಲ್ಲೂ ಒಳ್ಳೆಯವರಿದ್ದಾರೆ. ಮೋದಿ ಇಂದು ಆರ್‍ಎಸ್‍ಎಸ್ ಮೀರಿ ಬೆಳೆದಿದ್ದೇನೆ ಎನ್ನುತ್ತಿದ್ದಾರೆ ಎಂದು ಪ್ರಧಾನಿ ವಿರುದ್ಧ ಕಿಡಿಕಾರಿದರು.
‘ಶಿವಮೊಗ್ಗ ಚುನಾವಣಾ ಪ್ರಚಾರದ ಉಸ್ತುವಾರಿ’ಯಾಗಿ ‘ಅನಿಲ್ ಕುಮಾರ್ ತಡಕಲ್’ ನೇಮಕ
ಮೋದಿ ಬಾರಿ ಬುದ್ಧಿವಂತರು, ಎಲ್ಲಾ ವಿಷಯಕ್ಕೂ ಕೈ ಹಾಕೋದಿಲ್ಲ. ಆಯ್ದ ಸೀಟುಗಳಲ್ಲಿ ಮಾತ್ರ ಹ್ಯಾಕ್ ಮಾಡ್ತಾರೆ. 2004 ರಿಂದಲೂ ಇವಿಎಂ ಹ್ಯಾಕ್ ಆಗ್ತಿತ್ತು. ಆಗ ಕಾಂಗ್ರೆಸ್ ಗೆಲ್ಲುತ್ತಿತ್ತು. ಅದಕ್ಕೆ ಅವರು ಮಾತಾಡ್ತಿರಲಿಲ್ಲ. ಈಗ ಅವರಿಗೆ ಇವಿಎಂ ಹ್ಯಾಕ್ ಮಾಡಬಹುದು ಎಂದು ಅರಿವಾಗಿದೆ. ಅದಕ್ಕೆ ಇವಿಎಂ ಬೇಡ. ಬ್ಯಾಲೆಟ್ ಪೇಪರ್‍ಬೇಕು ಎಂದು ಕಾಂಗ್ರೆಸ್ ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದ್ದಾರೆ.