ರಾಮನಗರ : ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ವಿದ್ಯುತ್ 93 ಪರ್ಸೆಂಟ್ ಪೂರೈಕೆ ಆಗುತ್ತಿದೆ. ಸ್ತ್ರೀಯರಿಗೆ ಬಸ್ ವ್ಯವಸ್ಥೆ ಅನುಕೂಲವಾಗಿದೆ ಎಂದು ತಿಳಿಸಿದರು.
ಮೊನ್ನೆ ಪ್ರಧಾನಿ ಮೋದಿ ಭೇಟಿ ವೇಳೆ ಮೆಟ್ರೋ ಬಗ್ಗೆ ಮಾತನಾಡಿದ್ದೇನೆ. ಬಸ್ ಫ್ರೀ ಮಾಡಿದ್ದೀರಿ ನಮ್ಮ ಮೆಟ್ರೋಗೆ ಜನಾನೇ ಬರ್ತಿಲ್ಲ ಅಂದರು.ಬೆಂಗಳೂರಿನಲ್ಲಿ ಮೆಟ್ರೋಲ್ಗೆ ಜನ ಬರ್ತಿಲ್ಲ ಅಂತ ಮೋದಿ ಹೇಳಿದರು ಗ್ರಾಮಂತರ ಪ್ರದೇಶದಲ್ಲಿ ಮೆಟ್ರೋ ರೈಲು ಇಲ್ಲ ಎಂದು ಮೋದಿ ಬೇಟಿ ಬಗ್ಗೆ ಭಾಷಣದಲ್ಲಿ ಡಿಕೆ ಶಿವಕುಮಾರ್ ಪ್ರಸ್ತಾಪಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಜನರಿಗೆ ನನ್ನ ಮನೆ ಬಾಗಿಲು ತೆರೆದೆ ಇರುತ್ತದೆ. ಯಾವಾಗ ಬೇಕಾದರೂ ನೀವು ನನ್ನ ಭೇಟಿಯಾಗಬಹುದು.ಆದರೂ ತಲೆ ಕೆಡಿಸಬೇಡಿ ಚಿಂತೆ ಇಲ್ಲ.ನಾವೇನ್ ಮಾತು ಕೊಟ್ಟಿದ್ದೀವಿ ಅದನ್ನು ನಾವು ಉಳಿಸಿಕೊಂಡಿದ್ದೀವಿ. ಎಲೆಕ್ಷನ್ ಟೈಮಲ್ಲಿ ನಾವು ಮಾತು ಕೊಟ್ಟಿದ್ದೇವೆ ಐದು ಗ್ಯಾರಂಟಿಗಳ ಮಾತು ಕೊಟ್ಟಿದ್ದೇವೆ. ಐದು ಗ್ಯಾರಂಟಿಗಳು ನಿಮಗೆ ತಲುಪುತ್ತೇವೆ ತಾನೆ ಫ್ರೀ ಆಗಿ ಕರೆಂಟ್ ಬರುತ್ತಿದೆ ತಾನೇ? 2000 ಬರುತ್ತಿದೆಯಾ? ಈ ತಿಂಗಳ ಬಂದಿಲ್ಲ ಅಷ್ಟೇ ಆದರೆ ಹಿಂದಿನ ತಿಂಗಳಿನಿಂದಲ್ಲ ಬಂದಿದೆ ಎಂದರು.