ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು ದೇಶದಲ್ಲಿ ಅಚ್ಛೇದಿನ್ ಬರುತ್ತದೆ, ಅಲ್ಲದೆ ವಿದೇಶದಿಂದ ಕಪ್ಪು ಹಣ ತಂದು ಜನರ ಖಾತೆಗಳಿಗೆ 15 ಲಕ್ಷ ಹಾಕಲಾಗುತ್ತದೆ ಎಂದು ಹೇಳಿದ್ದರು ಆದರೆ ಯಾವ ಭರವಸೆ ಕೂಡ ಅವರು ಇದುವರೆಗೂ ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾವು ಬಿಜೆಪಿಯಂತೆ ಮೋಸ ಸುಳ್ಳು ಭರವಸೆ ನೀಡುವುದಿಲ್ಲ. ಗ್ಯಾರಂಟಿ ಯೋಜನೆ ಜಾರಿ ಮಾಡಲಾಗಲ್ಲ ಎಂದು ಬಾಯಿ ಬಡಿದುಕೊಂಡರು. ಗ್ಯಾರೆಂಟಿ ಯೋಜನೆಗಳಿಂದ ಖಜಾನೆ ಖಾಲಿ ಆಗುತ್ತೆ ಅಂತ ಹೇಳಿದ್ರು. ಪ್ರಧಾನಿ ಮೋದಿಯವರೇ ಗ್ಯಾರಂಟಿ ಯೋಜನೆ ಜಾರಿ ಅಸಾಧ್ಯ ಅಂತ ಹೇಳಿದ್ದರು. ಗ್ಯಾರಂಟಿ ಯೋಜನೆ ಜಾರಿಯಾದರೆ ಆರ್ಥಿಕವಾಗಿ ರಾಜ್ಯ ದಿವಾಳಿ ಆಗುತ್ತೆ ಅಂತ ಹೇಳಿದ್ರು ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪ್ರಧಾನಿ ಮೋದಿ ಕೊಟ್ಟ ಮಾತನ್ನು ಇದುವರೆಗೂ ಈಡೇರಿಸಿಲ್ಲ.ಅಚ್ಚೆ ದಿನ್ ಬರುತ್ತೆ ಅಂದ್ರು ಖಾತೆಗಳಿಗೆ 15 ಲಕ್ಷ ಹಣ ಹಾಕುತ್ತೇವೆ ಅಂದರು. ಅಲ್ಲದೆ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿದರು ಆದರೆ ಇದ್ಯಾವುದಾದರೂ ಮಾಡಿದ್ದಾರಾ? ರೈತರ ಆದಾಯದ ಪಟ್ಟು ಮಾಡುತ್ತೇವೆ ಅಂದ್ರು ಆದರೆ ಏನು ಮಾಡಲಿಲ್ಲ. ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ ಬಗ್ಗೆ ಮಾತಾಡೋದೇ ಇಲ್ಲ. ಭಾವನಾತ್ಮಕ ವಿಚಾರ ಬಿಟ್ಟು ಬೇರೆ ವಿಚಾರಗಳ ಬಗ್ಗೆ ಏನು ಹೇಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.