ನಾಗ್ಪುರ (ಮಹಾರಾಷ್ಟ್ರ): ಮಹಾರಾಷ್ಟ್ರದ ನಾಗ್ಪುರ ಮತ್ತು ಛತ್ತೀಸ್ಗಢದ ಬಿಲಾಸ್ಪುರ ನಡುವೆ ಸಂಚರಿಸಲಿರುವ ಆರನೇ ವಂದೇ ಭಾರತ್ ಎಕ್ಸ್ಪ್ರೆಸ್(Vande Bharat Express)ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು.
ಪ್ರಧಾನಿ ಮೋದಿಯವರು ಚಾಲನೆ ನೀಡಿದ ಆರನೇ ವಂದೇ ಭಾರತ್ ಎಕ್ಸ್ಪ್ರೆಸ್ ಆಗಿದೆ. ಇಂದು ಮುಂಜಾನೆ ನಾಗ್ಪುರಕ್ಕೆ ಆಗಮಿಸಿದ ಪ್ರಧಾನಿ ಅವರನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ, ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಬರಮಾಡಿಕೊಂಡರು.
ನಂತರ ನಾಗ್ಪುರದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಅವರು ನಾಗ್ಪುರ ರೈಲು ನಿಲ್ದಾಣ ಮತ್ತು ಅಜ್ನಿ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಕ್ರಮವಾಗಿ ಸುಮಾರು 590 ಕೋಟಿ ಮತ್ತು 360 ಕೋಟಿ ರೂಪಾಯಿ ವೆಚ್ಚದಲ್ಲಿ ಮರುಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಪ್ರಧಾನಮಂತ್ರಿಯವರು ಸರ್ಕಾರಿ ನಿರ್ವಹಣಾ ಡಿಪೋ, ಅಜ್ನಿ (ನಾಗ್ಪುರ) ಮತ್ತು ನಾಗ್ಪುರದ ಕೊಹ್ಲಿ-ನಾರ್ಖರ್ ವಿಭಾಗ-ಇಟಾರ್ಸಿ ಮೂರನೇ ಸಾಲಿನ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಗಳನ್ನು ಕ್ರಮವಾಗಿ ಸುಮಾರು 110 ಕೋಟಿ ಮತ್ತು ಸುಮಾರು 450 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ನಾಗ್ಪುರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಒನ್ ಹೆಲ್ತ್ (NIO) ಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದ್ದು, ‘ಒಂದು ಆರೋಗ್ಯ’ ವಿಧಾನದ ಅಡಿಯಲ್ಲಿ ದೇಶದಲ್ಲಿ ಸಾಮರ್ಥ್ಯ ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸುವತ್ತ ಒಂದು ಹೆಜ್ಜೆಯಾಗಿದೆ.
BIGG NEWS: ನಾನು ಆರೋಗ್ಯವಾಗಿದ್ದೇನೆ; ಆರೋಗ್ಯದ ಬಗ್ಗೆ ವದಂತಿಗೆ ಕಿವಿಕೊಡಬೇಡಿ; ಶ್ರೀ ಸಿದ್ದೇಶ್ವರ ಸ್ವಾಮೀಜಿ
BREAKING NEWS : ರಾಜ್ಯಾದ್ಯಂತ ತುಂತುರು ಮಳೆಗೆ ಜನಜೀವನ ಅಸ್ತವ್ಯಸ್ಥ : ಮೈನಡುಗುವ ಚಳಿಗೆ ಹೊರಬಾರದ ಜನ!
BIGG NEWS: ನಾನು ಆರೋಗ್ಯವಾಗಿದ್ದೇನೆ; ಆರೋಗ್ಯದ ಬಗ್ಗೆ ವದಂತಿಗೆ ಕಿವಿಕೊಡಬೇಡಿ; ಶ್ರೀ ಸಿದ್ದೇಶ್ವರ ಸ್ವಾಮೀಜಿ