ಶಿಮ್ಲಾ: ಪ್ರಧಾನಿ ನರೇಂದ್ರ ಮೋದಿ ಇಂದು ಹಿಮಾಚಲ ಪ್ರದೇಶದ ಉನಾ ರೈಲು ನಿಲ್ದಾಣದಿಂದ ದೇಶದ ನಾಲ್ಕನೇ ವಂದೇ ಭಾರತ್ ಎಕ್ಸ್ಪ್ರೆಸ್(Vande Bharat Express) ರೈಲಿಗೆ ಧ್ವಜಾರೋಹಣ ನೆರವೇರಿಸಿದರು. ಈ ರೈಲು ಹಿಮಾಚಲ ಪ್ರದೇಶದ ಅಂಬ್ ಅಂಡೌರಾ ನಡುವೆ ನವದೆಹಲಿಯಿಂದ ಚಲಿಸಲಿದೆ.
ಹೊಸ ವಂದೇ ಭಾರತ್ ರೈಲು ಹಿಂದಿನ ರೈಲುಗಳಿಗೆ ಹೋಲಿಸಿದರೆ ಸುಧಾರಿತ ಆವೃತ್ತಿಯಾಗಿದ್ದು, ಹೆಚ್ಚು ಹಗುರವಾಗಿದೆ ಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Himachal Pradesh | PM Modi flags off the Vande Bharat Express train from Una railway station to Delhi, in the presence of CM Jairam Thakur, Railways Minister Ashwini Vaishnaw & Union minister & Hamirpur MP Anurag Thakur
This is the 4th Vande Bharat train in the country. pic.twitter.com/xSFXI6HzMI
— ANI (@ANI) October 13, 2022
ಅಂಬಾಲಾ, ಚಂಡೀಗಢ, ಆನಂದಪುರ ಸಾಹಿಬ್ ಮತ್ತು ಉನಾದಲ್ಲಿ ಈ ರೈಲು ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಚಲಿಸುತ್ತದೆ. ಇದು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುತ್ತದೆ. ಇದು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಆರಾಮದಾಯಕ ಮತ್ತು ವೇಗದ ಪ್ರಯಾಣದ ವಿಧಾನವನ್ನು ಒದಗಿಸುತ್ತದೆ.
BREAKING NEWS : ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಯಮ ಯಥಾಸ್ಥಿತಿ : ಶಿಕ್ಷಣ ಸಚಿವ .ಬಿ.ಸಿ.ನಾಗೇಶ್