ನವದೆಹಲಿ: ಬಾರ್ಬಡೋಸ್ ಸರಕಾರ ಹಾಗೂ ಬಾರ್ಬಡೋಸ್ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಗೌರವ ಆರ್ಡರ್ ಆಫ್ ಫ್ರೀಡಂ ಆಫ್ ಬಾರ್ಬಡೋಸ್ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ.
ಅವರು ಪ್ರಶಸ್ತಿಯನ್ನು 1.4 ಬಿಲಿಯನ್ ಭಾರತೀಯರಿಗೆ ಮತ್ತು ಭಾರತ ಮತ್ತು ಬಾರ್ಬಡೋಸ್ ನಡುವಿನ ನಿಕಟ ಸಂಬಂಧಕ್ಕೆ ಅರ್ಪಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಈ ಗೌರವಕ್ಕಾಗಿ ಬಾರ್ಬಡೋಸ್ ಸರ್ಕಾರ ಮತ್ತು ಜನರಿಗೆ ಕೃತಜ್ಞನಾಗಿದ್ದೇನೆ. ‘ಗೌರವ ಆರ್ಡರ್ ಆಫ್ ಫ್ರೀಡಂ ಆಫ್ ಬಾರ್ಬಡೋಸ್’ ಪ್ರಶಸ್ತಿಯನ್ನು 1.4 ಬಿಲಿಯನ್ ಭಾರತೀಯರಿಗೆ ಮತ್ತು ಭಾರತ ಮತ್ತು ಬಾರ್ಬಡೋಸ್ ನಡುವಿನ ನಿಕಟ ಸಂಬಂಧಕ್ಕೆ ಅರ್ಪಿಸುತ್ತೇನೆ.ಈ ಗೌರವಕ್ಕಾಗಿ ಬಾರ್ಬಡೋಸ್ ಸರ್ಕಾರ ಮತ್ತು ಜನರಿಗೆ ಕೃತಜ್ಞರಾಗಿರುತ್ತೇನೆ” ಎಂದಿದ್ದಾರೆ.
ಬಾರ್ಬಡೋಸ್ ಅಧ್ಯಕ್ಷ ಡೇಮ್ ಸಾಂಡ್ರಾ ಮೇಸನ್ ಅವರಿಂದ ಪ್ರಧಾನಿ ಮೋದಿ ಪರವಾಗಿ ‘ಗೌರವ ಆರ್ಡರ್ ಆಫ್ ಫ್ರೀಡಂ ಆಫ್ ಬಾರ್ಬಡೋಸ್’ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ ಹಂಚಿಕೊಂಡ ಪೋಸ್ಟ್ಗೆ ಪ್ರತಿಕ್ರಿಯೆಯಾಗಿ ಅವರು ಈ ಹೇಳಿಕೆ ನೀಡಿದ್ದಾರೆ.
ಬ್ರಿಡ್ಜೆಟ್ ನಲ್ಲಿ ನಡೆದ ಸಮಾರಂಭದ ಚಿತ್ರಗಳು ಮತ್ತು ವೀಡಿಯೊವನ್ನು ಅವರು ಹಂಚಿಕೊಂಡಿದ್ದಾರೆ