ನವದೆಹಲಿ: ಕಾಮನ್ವೆಲ್ತ್ ಕ್ರೀಡಾಕೂಟ(Commonwealth Games)ದಲ್ಲಿ ಚಿನ್ನದ ಪದಕ ಗೆದ್ದ ಕುಸ್ತಿಪಟುಗಳಾದ ವಿನೇಶ್ ಫೋಗಟ್(Vinesh Phogat) ಮತ್ತು ರವಿ ದಹಿಯಾ (Ravi Dahiya) ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು,ʻವಿನೇಶ್ ಫೋಗಟ್ ಅವರ ಗೆಲುವು ಬಹಳ ವಿಶೇಷವಾಗಿದೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸತತ ಮೂರನೇ ಚಿನ್ನವನ್ನು ಗೆದ್ದ ಭಾರತದ ಅತ್ಯಂತ ಪ್ರತಿಷ್ಠಿತ ಕ್ರೀಡಾಪಟುಗಳಲ್ಲಿ ಒಬ್ಬರುʼ ಎಂದು ಶ್ಲಾಘಿಸಿದ್ದಾರೆ.
Today’s Gold medal won by @Phogat_Vinesh is very special. She is one of India’s most distinguished athletes and this is her third consecutive Gold in CWG. She personifies excellence and remarkable commitment to sports. Congratulations to her. #Cheer4India pic.twitter.com/AtxLJ1m8RK
— Narendra Modi (@narendramodi) August 6, 2022
ಇನ್ನೂ, ʻರವಿ ದಹಿಯಾ ಅವರು ಚಾಂಪಿಯನ್ನಂತೆ ಆಡಿ ಚಿನ್ನದ ಪದಕ ಗೆದ್ದಿದ್ದು, ರಾಷ್ಟ್ರಕ್ಕೆ ಅಪಾರ ಹೆಮ್ಮೆ ತಂದಿದ್ದಾರೆ. ಭಾವೋದ್ರಿಕ್ತ ಮತ್ತು ಸಮರ್ಪಣಾ ಮನೋಭಾವ ಇದ್ದರೆ ಯಾವುದೇ ಕನಸು ದೊಡ್ಡದಲ್ಲ ಎಂಬುದನ್ನು ಅವರ ಯಶಸ್ಸು ಸಾಬೀತುಪಡಿಸುತ್ತದೆʼ ಎಂದಿದ್ದಾರೆ.
He played like a champion and brings immense pride for our nation. Congratulations to the phenomenal @ravidahiya60 for winning a Gold at the Birmingham CWG. His success proves that no dream is too big if one is passionate and dedicated. #Cheer4India pic.twitter.com/SfRRb4ZGb0
— Narendra Modi (@narendramodi) August 6, 2022
ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಪೂಜಾ ಗೆಹ್ಲೋಟ್ ಅವರನ್ನು ಅಭಿನಂದಿಸಿದ ಪ್ರಧಾನಿ, ʻಪೂಜಾ ಗೆಹ್ಲೋಟ್ ಅವರು ಧೈರ್ಯದಿಂದ ಉದ್ದಕ್ಕೂ ಹೋರಾಡಿದರು ಮತ್ತು ಆಟಗಳ ಮೂಲಕ ಅಸಾಧಾರಣ ತಾಂತ್ರಿಕ ಶ್ರೇಷ್ಠತೆಯನ್ನು ಪ್ರದರ್ಶಿಸಿದರು. ಅವರ ಮುಂಬರುವ ಪ್ರಯತ್ನಗಳಿಗಾಗಿ ಅವರಿಗೆ ಆಲ್ ದಿ ಬೆಸ್ಟ್ʼ ಎಂದು ಮೋದಿ ಆಶಿಸಿದ್ದಾರೆ.
Congratulations to Pooja Gehlot on winning a Bronze medal in wrestling. She bravely fought throughout and demonstrated exceptional technical superiority through the games. All the best to her for her upcoming endeavours. #Cheer4India pic.twitter.com/IIJWyTobsO
— Narendra Modi (@narendramodi) August 6, 2022
BIGG NEWS : ಕೊಡಗು ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟ : ಹಲವಡೆ ರಸ್ತೆ ಸಂಪರ್ಕ ಕಡಿತ