ಮೊರ್ಬಿ (ಗುಜರಾತ್) : ಭಾನುವಾರ ಸಂಜೆ ಮೋರ್ಬಿ ಕೇಬಲ್ ಸೇತುವೆ ಕುಸಿದು ಅನೇಕ ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ, ಗುಜರಾತ್ ಮತ್ತು ರಾಜಸ್ಥಾನಕ್ಕೆ ಮೂರು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್ನಲ್ಲಿ ನಡೆಯಲಿರುವ ರೋಡ್ಶೋ ಅನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ.
ಭಾನುವಾರ ಸಂಜೆ ಬಿಜೆಪಿ ಗುಜರಾತ್ ಮಾಧ್ಯಮವು “ಪ್ರಧಾನಿ ಮೋದಿಯವರ ವರ್ಚುವಲ್ ಉಪಸ್ಥಿತಿಯಲ್ಲಿ ನಡೆಯಲಿರುವ ಪೇಜ್ ಕಮಿಟಿ ಸ್ನೇಹ ಮಿಲನ್ ಕಾರ್ಯಕ್ರಮವನ್ನು ಮುಂದೂಡಲಾಗಿದೆ” ಎಂದು ಮಾಹಿತಿ ನೀಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಗುಜರಾತ್ ಮಾಧ್ಯಮ ಸಂಚಾಲಕ ಡಾ ಯಜ್ಞೇಶ್ ದವೆ, ಮೋರ್ಬಿ ದುರಂತದ ಹಿನ್ನೆಲೆಯಲ್ಲಿ ಇಂದು (ಸೋಮವಾರ) ಯಾವುದೇ ಸಂಭ್ರಮಾಚರಣೆ ಕಾರ್ಯಕ್ರಮಗಳು ನಡೆಯುವುದಿಲ್ಲ ಎಂದು ಖಚಿತಪಡಿಸಿದ್ದಾರೆ.
BIG UPDATE: ಗುಜರಾತ್ನಲ್ಲಿ ಕೇಬಲ್ ಸೇತುವೆ ಕುಸಿತ ದುರಂತ: ಮೃತರ ಸಂಖ್ಯೆ 91ಕ್ಕೆ ಏರಿಕೆ
BIG NEWS: ʻಪೊಲೀಸ್ ಠಾಣೆಯಲ್ಲಿ ವಿಡಿಯೋ ರೆಕಾರ್ಡ್ ಮಾಡುವುದು ಅಪರಾಧವಲ್ಲʼ: ಬಾಂಬೆ ಹೈಕೋರ್ಟ್