ಬೆಂಗಳೂರು: ನಗರದಲ್ಲಿ ಮೂರನೇ ಹಂತದ ನಮ್ಮ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ನೆರವೇರಿಸಿದರು. ಈ ಬಳಿಕ ಜನರನ್ನು ಉದ್ದೇಶಿಸಿ ಮಾತನಾಡಿದಂತ ಅವರ ಭಾಷಣದ ಸಂಪೂರ್ಣ ಹೈಲೈಟ್ಸ್ ಮುಂದಿದೆ ಓದಿ.
ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಆಪರೇಷನ್ ಸಿಂಧೂರು ನಡೆಸಿ ಭಾರತ ವಿಶ್ವರೂಪ ಪ್ರದರ್ಶಿಸಿದೆ. ಇಡೀ ಜಗತ್ತು ನವ ಭಾರತದ ರೂವವನ್ನು ಕಂಡಿದೆ. ಮೇಕ್ ಇನ್ ಇಂಡಿಯಾ ಶಕ್ತಿಯನ್ನು ತೋರಿಸಿದ್ದೇವೆ. ಆಪರೇಷನ್ ಸಿಂಧೂರ್ ಸಫಲತೆ ಹಿಂದೆ ಮೇಕ್ ಇನ್ ಇಂಡಿಯಾದ ಶಕ್ತಿ ಇದೆ. ಇದರಲ್ಲಿ ಬೆಂಗಳೂರು, ಕರ್ನಾಟಕದ ಯುವ ತಂತ್ರಜ್ಞರ ಯೋಗದಾನವೂ ಇದೆ ಎಂದರು.
ಬೆಂಗಳೂರು ಗ್ಲೋಬಲ್ ಐಟಿಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದೆ. ಬೆಂಗಳೂರು ನಗರದ ಯಶಸ್ಸಿಗೆ ಇಲ್ಲಿನ ಜನರ ಶ್ರಮ, ಪ್ರತಿಭೆ ಕಾರಣ. ಬೆಂಗಳೂರಿನಂಥ ನಗರಗಳನ್ನು ಭವಿಷ್ಯಕ್ಕಾಗಿ ರೂಪಿಸಬೇಕು. ಅದಕ್ಕಾಗಿ ಕೇಂದ್ರ ಸರ್ಕಾರ ಸಾವಿರಾರು ಕೋಟಿ ಅನುದಾನ ಕೊಡುತ್ತಿದೆ ಎಂದರು.
ಆಪರೇಷನ್ ಸಿಂಧೂರ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ. ಭಾರತ ಗಡಿಯಾಚೆಗೆ ದಾಟಿ ಉಗ್ರರ ತಾಣಗಳನ್ನು ನಾಶಪಡಿಸಿದ್ದೇವೆ. ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮೋದಿ ಮಾತನಾಡಿದರು.