ಕ್ರಿಸ್ ಮಸ್ ದಿನದಂದು ದೆಹಲಿಯ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಳಗಿನ ಸೇವೆಯಲ್ಲಿ ಭಾಗವಹಿಸಿದ್ದರು.
ಅವರು ದೆಹಲಿ ಮತ್ತು ಉತ್ತರ ಭಾರತದ ಇತರ ಭಾಗಗಳಿಂದ ಬಂದ ಕ್ರಿಶ್ಚಿಯನ್ನರ ದೊಡ್ಡ ಸಭೆಗೆ ಸೇರಿದರು. ಈ ಸೇವೆಯಲ್ಲಿ ಪ್ರಾರ್ಥನೆಗಳು, ಸ್ತೋತ್ರಗಳು, ಕ್ಯಾರಲ್ ಗಳು ಮತ್ತು ದೆಹಲಿಯ ಬಿಷಪ್ ಪಾಲ್ ಸ್ವರೂಪ್ ಅವರು ಪ್ರಧಾನಿಗಾಗಿ ಸಲ್ಲಿಸಿದ ವಿಶೇಷ ಪ್ರಾರ್ಥನೆಯನ್ನು ಒಳಗೊಂಡಿತ್ತು.
“ದೆಹಲಿಯ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್ನಲ್ಲಿ ಕ್ರಿಸ್ಮಸ್ ಬೆಳಗಿನ ಸೇವೆಯಲ್ಲಿ ಭಾಗವಹಿಸಿದ್ದೆ. ಈ ಸೇವೆಯು ಪ್ರೀತಿ, ಶಾಂತಿ ಮತ್ತು ಸಹಾನುಭೂತಿಯ ಕಾಲಾತೀತ ಸಂದೇಶವನ್ನು ಪ್ರತಿಬಿಂಬಿಸುತ್ತದೆ. ಕ್ರಿಸ್ಮಸ್ ಮನೋಭಾವವು ನಮ್ಮ ಸಮಾಜದಲ್ಲಿ ಸಾಮರಸ್ಯ ಮತ್ತು ಸದ್ಭಾವನೆಯನ್ನು ಪ್ರೇರೇಪಿಸಲಿ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ








