ಇಂಡೋನೇಷ್ಯಾ: ವಿಶ್ವದ ಹಲವು ನಾಯಕರು ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಗೆಂದು ಆಗಮಿಸಿದ್ದಾರೆ.
ಇಂದು ಈ ನಾಯಕರುಗಳೊಂದಿಗೆ ಪ್ರಧಾನಿ ಮೋದಿ ಅವರು ‘ತಮನ್ ಹುತಾನ್ ರಾಯ ನ್ಗುರಾ ರೈ’ ಮ್ಯಾಂಗ್ರೋವ್ ಅರಣ್ಯಗಳಿಗೆ ಭೇಟಿ ನೀಡಿ ಮ್ಯಾಂಗ್ರೋವ್ ಸಸಿಗಳನ್ನ ಸಹ ನೆಟ್ಟಿದ್ದಾರೆ.
PM Modi along with other G-20 Leaders visited & planted Mangroves at Taman Hutan Raya Ngurah Rai Mangrove forests on sidelines of G-20 Summit in Bali. India has joined Mangrove Alliance for Climate (MAC), a joint initiative of Indonesia & UAE under Indonesian G-20 Presidency: MEA pic.twitter.com/dRjHUWABIo
— ANI (@ANI) November 16, 2022
ಜಾಗತಿಕ ಸಂರಕ್ಷಣೆಯ ಪ್ರಯತ್ನಗಳಲ್ಲಿ ಮ್ಯಾಂಗ್ರೋವ್ಗಳು ಪ್ರಮುಖ ಪಾತ್ರವಹಿಸುತ್ತವೆ. ಭಾರತವು ಮ್ಯಾಂಗ್ರೋವ್ ಅಲೈಯನ್ಸ್ ಫಾರ್ ಕ್ಲೈಮೇಟ್, MAC ಗೆ ಸೇರಿಕೊಂಡಿದೆ. MAC ಇಂಡೋನೇಷಿಯನ್ G-20 ಪ್ರೆಸಿಡೆನ್ಸಿ ಅಡಿಯಲ್ಲಿ ಇಂಡೋನೇಷ್ಯಾ ಮತ್ತು UAE ಯ ಜಂಟಿ ಉಪಕ್ರಮವಾಗಿದೆ.
ಭಾರತದಲ್ಲಿ 5000 ಚದರ ಕಿಲೋಮೀಟರ್ಗಳಲ್ಲಿ 50 ಕ್ಕೂ ಹೆಚ್ಚು ಮ್ಯಾಂಗ್ರೋವ್ ಪ್ರಭೇದಗಳನ್ನು ಕಾಣಬಹುದು.
ಭಾರತವು ಮ್ಯಾಂಗ್ರೋವ್ಗಳ ರಕ್ಷಣೆ ಮತ್ತು ಪುನಃಸ್ಥಾಪನೆಗೆ ಒತ್ತು ನೀಡುತ್ತಿದೆ. ಅವು ಜೀವವೈವಿಧ್ಯತೆಯ ಶ್ರೀಮಂತ ತಾಣಗಳಾಗಿವೆ ಮತ್ತು ಪರಿಣಾಮಕಾರಿ ಕಾರ್ಬನ್ ಸಿಂಕ್ಗಳಾಗಿ ಕಾರ್ಯನಿರ್ವಹಿಸುತ್ತವೆ.
WATCH VIDEO: ಮೆಟ್ಟಿಲು ಹತ್ತುವಾಗ ಎಡವಿದ ಅಮೆರಿಕ ಅಧ್ಯಕ್ಷ ಜೋ ಬೈಡನ್… ಮುಂದೇನಾಯ್ತು ನೋಡಿ
BIGG NEWS : ಸುಬ್ರಹ್ಮಣ್ಯದಲ್ಲಿ ಘೋರ ದುರಂತ : ಹೊಳೆಯಲ್ಲಿ ಮುಳುಗಿ ಇಬ್ಬರು ಸಾವು