ನವದೆಹಲಿ: ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, ದೇಶದ ಕೋಟ್ಯಂತರ ರೈತರು ಇಲ್ಲಿಯವರೆಗೆ 16 ಕಂತುಗಳ ಪ್ರಯೋಜನವನ್ನು ಪಡೆದಿದ್ದಾರೆ. ಫೆಬ್ರವರಿ 28 ರಂದು 16ನೇ ಕಂತಿನ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗಿದೆ. ಇನ್ನು ಅವರು ಕಿಸಾನ್ ಕಿಸಾನ್ ನಿಧಿಯ 17 ನೇ ಕಂತಿನ ಆಗಮನಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಹೀಗಾಗಿ ಪಿಎಂ ಕಿಸಾನ್ 17 ನೇ ಕಂತು ಯಾವಾಗ ಬಿಡುಗಡೆಯಾಗುತ್ತದೆ ಎನ್ನುವುದರ ಮಾಹಿತಿ ಮುಂದಿದೆ.
ಪಿಎಂ ಕಿಸಾನ್ ನ ಮುಂದಿನ ಕಂತು ಯಾವಾಗ ಬರುತ್ತದೆ?
ಮಾಧ್ಯಮ ವರದಿಗಳ ಪ್ರಕಾರ, ದೇಶದ ಕೋಟ್ಯಂತರ ರೈತರು ಮೇ ಅಂತ್ಯದ ವೇಳೆಗೆ ಅಥವಾ ಜೂನ್ ಆರಂಭದಲ್ಲಿ ಉತ್ತಮ ಸುದ್ದಿಯನ್ನ ಪಡೆಯಬಹುದು. ಅಂದರೆ, ಅವರ ಕಾಯುವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಆದಾಗ್ಯೂ, ಪಿಎಂ ಕಿಸಾನ್ ಮುಂದಿನ ಕಂತು ಯಾವಾಗ ಬರುತ್ತದೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಲಾಗಿಲ್ಲ.
ರೈತರಿಗೆ ವಾರ್ಷಿಕ 6,000 ರೂ.ಗಳ ಆರ್ಥಿಕ ಲಾಭ.!
ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ದೇಶದ ರೈತರ ಆರ್ಥಿಕ ಸಹಾಯಕ್ಕಾಗಿ ಕೇಂದ್ರ ಸರ್ಕಾರ ನಡೆಸುತ್ತಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನ ಫೆಬ್ರವರಿ 24, 2019ರಂದು ಪ್ರಾರಂಭಿಸಲಾಯಿತು. ಈ ಯೋಜನೆಯಡಿ, ದೇಶದ ರೈತರು ಪ್ರತಿವರ್ಷ 6,000 ರೂ.ಗಳ ಸಹಾಯವನ್ನ ಪಡೆಯುತ್ತಾರೆ.
Siddaramaiah: ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ
ಲೋಕಸಭಾ ಚುನಾವಣೆ : ಜೂನ್ 4 ರಂದು ‘NDA’ 400 ಸ್ಥಾನಗಳ ಗಡಿ ದಾಟಲಿದೆ : ಕೇಂದ್ರ ಸಚಿವ ಅಮಿತ್ ಶಾ ಭವಿಷ್ಯ