ಮೈಸೂರು: ಮೈಸೂರು ರೈಲು ನಿಲ್ದಾಣದಲ್ಲಿ ಪ್ಲಾಟ್ಫಾರಂ ಸಂಖ್ಯೆ 2 ಮತ್ತು 3 ರ (ಎಫ್ಒಬಿ) ಮೆಟ್ಟಿಲುಗಳ ನವೀಕರಣ ಪ್ರಯಾಣಿಕರಿಗೆ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದೆ.
ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆ ಹೆಚ್ಚಿಸಲು ನೈಋತ್ಯ ರೈಲ್ವೆ ಮೈಸೂರು ವಿಭಾಗವು ಮೈಸೂರು ರೈಲು ನಿಲ್ದಾಣದಲ್ಲಿ ಮೂಲಸೌಕರ್ಯಗಳ ನವೀಕರಣ ಕಾಮಗಾರಿಗಳನ್ನು ಕೈಗೊಂಡಿದ್ದು ಪ್ಲಾಟ್ಫಾರಂ ಸಂಖ್ಯೆ 2 ಮತ್ತು 3 ರಲ್ಲಿ ಇರುವ ಫುಟ್ ಓವರ್ ಬ್ರಿಜ್ (ಎಫ್ಒಬಿ) ಮೆಟ್ಟಿಲುಗಳು 60 ದಿನಗಳ ಕಾಲ ನವೀಕರಣ ಮತ್ತು ದುರಸ್ತಿ ಕೆಲಸಗಳಿಗೆ ಒಳಪಡಲಿವೆ. ಹಲವು ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಈ ಮೆಟ್ಟಿಲುಗಳು ಹಳೆಯದಾಗಿರುವುದರಿಂದ, ಇಂದಿನ ಸುರಕ್ಷತಾ ಮಾನದಂಡಗಳನ್ನು ಪೂರೈಸಲು ಅವುಗಳನ್ನು ಬದಲಿಸಲಾಗುವುದು.
ಈ ಅವಧಿಯಲ್ಲಿ ಪ್ರಯಾಣಿಕರ ಸುಲಭ ಸಂಚಾರಕ್ಕೆ ತಾತ್ಕಾಲಿಕ ಬದಲಿ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗೆ ಲಿಫ್ಟ್ ಮತ್ತು ಅಂಡರ್ಪಾಸ್ ಬಳಸುವಂತೆ ವಿನಂತಿಸಲಾಗಿದೆ. ಸ್ಪಷ್ಟ ಮಾರ್ಗಸೂಚಿ ಫಲಕಗಳು, ಘೋಷಣೆಗಳು ಹಾಗೂ ನಿಲ್ದಾಣ ಸಿಬ್ಬಂದಿಯಿಂದ ಸಹಾಯ ಲಭ್ಯವಿರುತ್ತದೆ.
ಈ ಅವಧಿಯಲ್ಲಿ ಉಂಟಾಗುವ ತೊಂದರೆಗಾಗಿ ನೈಋತ್ಯ ರೈಲ್ವೆ ವಿಷಾದಿಸುತ್ತದೆ ಹಾಗೂ ಪ್ರಯಾಣಿಕರ ಸಹಕಾರವನ್ನು ಕೋರುತ್ತದೆ. ಈ ನವೀಕರಣದಿಂದಾಗಿ ಮೈಸೂರು ನಿಲ್ದಾಣದ ಮೂಲಸೌಕರ್ಯಗಳು ಇನ್ನಷ್ಟು ಸುರಕ್ಷಿತವಾಗಲಿದ್ದು, ಪ್ರಯಾಣಿಕ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಸಹಾಯವಾಗಲಿದೆ ಎಂಬುದಾಗಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಕಾಲ್ತುಳಿತ ದುರಂತ: ಹಿರಿಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಕ್ಕೆ ನನಗೂ ಬೇಸರವಿದೆ ಎಂದ ಸಿಎಂ
ಬ್ರೋಕರೇಜ್ ವ್ಯವಹಾರ ಪ್ರಾರಂಭಕ್ಕೆ ಜಿಯೋಬ್ಲಾಕ್ರಾಕ್ ಬ್ರೋಕಿಂಗ್ ಗೆ ಸೆಬಿ ಅನುಮೋದನೆ