ಕರಾಚಿ (ಪಾಕಿಸ್ತಾನ): 12 ಮಂದಿ ಪ್ರಯಾಣಿಕರಿದ್ದ ಭಾರತದ ಚಾರ್ಟರ್ ಏರ್ಪ್ಲೇನ್ ಸೋಮವಾರ ಕರಾಚಿಯಲ್ಲಿರುವ ಪಾಕಿಸ್ತಾನದ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ವರದಿಗಳ ಪ್ರಕಾರ, ಈ ವಿಮಾನವು ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 12:10 ಕ್ಕೆ (ಸ್ಥಳೀಯ ಕಾಲಮಾನ) ಕರಾಚಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಎಂದು ಮೂಲಗಳು ತಿಳಿಸಿವೆ.
ನಾಗರಿಕ ವಿಮಾನಯಾನ ಪ್ರಾಧಿಕಾರದ (ಸಿಎಎ) ವಕ್ತಾರರು ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. ಅಂತರರಾಷ್ಟ್ರೀಯ ಚಾರ್ಟರ್ ವಿಮಾನವು ಭಾರತದಿಂದ ಹಾರಿದ್ದು, ಪಾಕಿಸ್ತಾನದಲ್ಲಿ ಲ್ಯಾಂಡ್ ಆಗಿದೆ. ಅದನ್ನು ಹೊರತುಪಡಿಸಿ ದೇಶದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಕರಾಚಿಯಲ್ಲಿ ಇಳಿದ ಸ್ವಲ್ಪ ಸಮಯದ ನಂತರ, ವಿಶೇಷ ವಿಮಾನವು 12 ಪ್ರಯಾಣಿಕರೊಂದಿಗೆ ಹೊರಟಿತು. ಕರಾಚಿ ವಿಮಾನ ನಿಲ್ದಾಣದಲ್ಲಿ ವಿಮಾನ ಏಕೆ ಇಳಿದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ತಾಂತ್ರಿಕ ಸಮಸ್ಯೆಗಳಿಂದಾಗಿ ಕಳೆದ ತಿಂಗಳು ಭಾರತದಿಂದ ಎರಡು ವಿಮಾನಗಳು ಕರಾಚಿಗೆ ಬಂದಿಳಿದಿತ್ತು. ಸ್ಪೈಸ್ಜೆಟ್ನ ದೆಹಲಿ-ದುಬೈ ವಿಮಾನದಲ್ಲಿ ಸಮಸ್ಯೆ ಉಂಟಾದ್ದರಿಂದ ಜುಲೈ 5 ರಂದು ಕರಾಚಿಗೆ ವಾಪಸ್ ಆಗಿತ್ತು. ಪೈಲಟ್ಗಳು ಎಂಜಿನ್ನಲ್ಲಿ ದೋಷವನ್ನು ಗಮನಿಸಿದ ನಂತರ ಇಂಡಿಗೋದ ಶಾರ್ಜಾ-ಹೈದರಾಬಾದ್ ವಿಮಾನವನ್ನು ಜುಲೈ 17 ರಂದು ಮುನ್ನೆಚ್ಚರಿಕಾ ಕ್ರಮವಾಗಿ ಕರಾಚಿಗೆ ತಿರುಗಿಸಲಾಗಿತ್ತು.
ಪುಟ್ಟ ಪೋರನನ್ನು ʻ ಹಾವಿನ ದಾಳಿʼಯಿಂದ ರಕ್ಷಿಸಿದ ʻಧೈರ್ಯಶಾಲಿ ತಾಯಿ ʼ: ಅಘಾತಕಾರಿ ʻ video viral ʼ | ವೀಕ್ಷಿಸಿ